Viral Video : ವಧು ತನ್ನ ಮದುವೆಯ ತಯಾರಿಯಲ್ಲಿ ಮುಳುಗಿದರೆ ಮುಗಿಯಿತು. ಕೈಗೊಬ್ಬರು ಕಾಲಿಗೊಬ್ಬರು ತಲೆಗೊಬ್ಬರು, ಬೆರಳಿಗೊಬ್ಬರು… ಎಷ್ಟು ಜನರಾದರೂ ಸಾಲುವುದೇ ಇಲ್ಲ ಅವಳ ಸಹಾಯಕ್ಕೆ. ರಾಜಕುಮಾರಿಯಂತೆ ಮಿನುಗುತ್ತಿರುತ್ತಾಳೆ. ಆದರೆ ಈ ವಿಡಿಯೋದಲ್ಲಿ ನೋಡಿ. ಈ ವಧು ತನ್ನ ಮದುವೆಗೆಂದು ಮೇಕಪ್ ಮಾಡಿಸಿಕೊಳ್ಳುತ್ತಿದ್ದಾಗ ತನ್ನ ಮುದ್ದುನಾಯಿಗೆ ಊಟ ಮಾಡಿಸಬೇಕಿರುವುದು ನೆನಪಾಗಿದೆ. ಮೇಕಪ್ ಅರ್ಧಕ್ಕೇ ಬಿಟ್ಟು, ನಾಯಿಗೆ ಊಟ ಮಾಡಿಸಲು ಬಂದಿದ್ದಾಳೆ.
ಮಗುವಿನಂತೆ ನೋಡಿಕೊಳ್ಳುತ್ತಿದ್ದರೆ ಮಾತ್ರ ಇಂಥ ನಾಯಿಗಳನ್ನು ಸಾಕಬೇಕು ಎನ್ನುವುದು ಅಕ್ಷರಶಃ ನಿಜ. ಇಲ್ಲವಾದಲ್ಲಿ ಜೋಲುಮುಖ ಹಾಕಿಕೊಂಡು ಕುಳಿತುಬಿಡುತ್ತವೆ ಅಥವಾ ಕುಣಿದು ಕುಪ್ಪಳಿಸಿ ನಿಮ್ಮ ಜೀವ ಹಿಂಡಿಬಿಡುತ್ತವೆ. ಒಟ್ಟು ಗರ್ಭಗುಡಿಯ ಮುಂದೆ ಬಸವಣ್ಣ ಕುಳಿತ ಹಾಗೆ ನೀವು ಸದಾ ಅವುಗಳ ದೇಖರೇಖಿ ಮಾಡುತ್ತಲೇ ಇರಬೇಕು.
ಹಿಂದೆಮುಂದೆ ನೋಡದೆ ಸೀದಾ ನೆಲದ ಮೇಲೆ ಕುಳಿತು ಮಗುವಿಗೆ ಉಣ್ಣಿಸಿದ ಹಾಗೆ ಉಣಿಸುತ್ತಿದ್ದಾಳೆ. 1 ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. 5,000ಕ್ಕೂ ಹೆಚ್ಚು ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ.
ಗಂಡನ ಮನೆಗೆ ಈ ಮುದ್ದುನಾಯಿಯನ್ನೂ ಕರೆದುಕೊಂಡು ಹೋಗುತ್ತಾಳೆಯೇ? ಎಂಬ ಪ್ರಶ್ನೆ ಏಳದೇ ಇರದು ಅಲ್ಲವೆ?
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ