Video: ಸ್ವರ್ಗ ಸೇರಿದ ತಂದೆಗೆ ಸ್ಟಾಂಡಪ್ ಕಾಮಿಡಿ ಶೋಗಾಗಿ ಟಿಕೆಟ್ ಖರೀದಿಸಿ ಸೀಟು ಖಾಲಿ ಇಟ್ಟಿದ್ದ ಭಾರತೀಯ ಯುವತಿ, ಮುಂದೇನಾಯ್ತು ಗೊತ್ತಾ!!!

ಎಷ್ಟೇ ಕಷ್ಟವಿರಲಿ, ಹೆತ್ತವರು ತಮ್ಮ ಮಕ್ಕಳು ಮುಂದೆ ತೋರಿಸಿಕೊಳ್ಳುತ್ತಿಲ್ಲ. ತಮ್ಮ ಮಕ್ಕಳ ಸಂತೋಷಕ್ಕಾಗಿ ತಮ್ಮ ಜೀವನವನ್ನು ಸವೆಸುತ್ತಾರೆ. ಮಕ್ಕಳು ಕೂಡ ಚೆನ್ನಾಗಿ ಓದಿ ತಮ್ಮ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಬಯಸುತ್ತಾರೆ ಕೂಡ. ಆದರೆ ಸ್ಟಾಂಡಪ್ ಕಾಮಿಡಿ ಶೋನಲ್ಲಿ ಭಾಗಿಯಾದ ಭಾರತೀಯ ಯುವತಿಯೂ ತನ್ನ ತಂದೆಗಾಗಿ ಮಾಡಿದ ಕೆಲಸ ಕೇಳಿದ್ರೆ ಅಚ್ಚರಿ ಪಡ್ತೀರಾ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಶಾಕ್ ಆಗಿದ್ದಾರೆ.

ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಎನ್ನುವ ಮಾತಿದೆ. ಆತ್ಮೀಯ ವ್ಯಕ್ತಿಗಳು ಆಗಲಿದಾಗ ಆ ನೋವನ್ನು ಸಹಿಸಿಕೊಳ್ಳಲು ಅಸಾಧ್ಯ. ಆದರೆ ದಿನ ಕಳೆಯುತ್ತಾ ಹೋದಂತೆ ನಮ್ಮವರು ನಮ್ಮಿಂದ ದೈಹಿಕವಾಗಿ ದೂರವಾಗಿರಬಹುದು, ಮಾನಸಿಕವಾಗಿ ನಮ್ಮ ಜೊತೆಗೆ ಇದ್ದಾರೆ, ನಮ್ಮನ್ನು ನೋಡುತ್ತಿರುತ್ತಾರೆ ಎಂದು ಭಾವಿಸಿ ಬದುಕಲು ಶುರು ಮಾಡುತ್ತೇವೆ. ಆದರೆ ಇದೀಗ ಭಾರತದ ರಿತಿಕಾ (Indian Rithika) ಎನ್ನುವ ಹೆಸರಿನ ಯುವತಿಯೂ ಇಹಲೋಕ ತ್ಯಜಿಸಿದ ತಂದೆಗೆ ಸ್ಟಾಂಡಪ್ ಕಾಮಿಡಿ ಶೋ (stand up comedy show) ಗಾಗಿ ಟಿಕೆಟ್ ಖರೀದಿಸಿ, ಸೀಟು ಖಾಲಿ ಇಟ್ಟಿದ್ದು, ಪ್ರೇಕ್ಷಕರನ್ನು ನಕ್ಕು ನಗಿಸುವ ಸ್ಟಾಂಡಪ್ ಕಾಮಿಡಿಯನ್ ಗೆ ಇದೇ ವಿಷಯವಾಗಿದೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

@itsmeurstruly ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ, ಇದು ತುಂಬಾ ಸೂಕ್ಷ್ಮವಾದ ವಿಚಾರ,ಆದರೆ ಸರಾಗವಾಗಿ ಹಾಗೂ ಅದ್ಭುತವಾಗಿಯೇ ನಿರ್ವಹಿಸಿದ್ದೀರಿ ಎಂದು ಶೀರ್ಷಿಕೆಯಲ್ಲಿ ಬರೆದುಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಸ್ಟಾಂಡಪ್ ಕಾಮಿಡಿಯನ್ ವೇದಿಕೆಯಲ್ಲಿ ಮೈಕ್ ಹಿಡಿದು ಮಾತನಾಡುತ್ತಿದ್ದಂತೆ ವೇದಿಕೆಯ ಮುಂಭಾಗದಲ್ಲಿ ಯುವತಿಯೊಬ್ಬಳು ಓಡೋಡಿ ಬರುತ್ತಿದ್ದಾಳೆ. ಇದನ್ನು ನೋಡಿದ ಕಾಮಿಡಿಯನ್ ಆ ಸೀಟ್ ಖಾಲಿಯಿಲ್ಲ ಎಂದು ಹೇಳಿದ್ದಾರೆ. ಕೊನೆಗೆ ಖಾಲಿಯಿದ್ದ ಸೀಟಿನ ಪಕ್ಕ ಕುಳಿತಿದ್ದ ಯುವತಿಯನ್ನು ಸ್ಟಾಂಡಪ್ ಕಾಮಿಡಿಯನ್ ಮಾತನಾಡಿಸಿದ್ದಾರೆ. ಈ ವೇಳೆಯಲ್ಲಿ ಕಳೆದ ವರ್ಷ ನನ್ನ ತಂದೆಯನ್ನು ಕಳೆದುಕೊಂಡೆ, ಅವರಿಗಾಗಿ ಈ ಸೀಟ್ ಇಟ್ಟಿದ್ದೇನೆ ಎಂದಿದ್ದಾಳೆ. ಶೋ ನೋಡಲು ಬಂದಿದ್ದ ಪ್ರೇಕ್ಷಕರು ಈ ಯುವತಿಯ ಮಾತು ಕೇಳಿದ ಕೂಡಲೇ ಜೋರಾಗಿ ಚಪ್ಪಾಳೆ ತಟ್ಟಿದ್ದಾರೆ.

ಇದನ್ನೂ ಓದಿ
ತಂದೆ ಅರ್ಧ ಸೇದಿ ಎಸೆದ ಬೀಡಿ ನುಂಗಿ ಕಂದಮ್ಮ ಸಾವು
ಚಲಿಸುವ ಬೈಕ್‌ನಲ್ಲಿ ಪ್ರೇಮಿಗಳ ರೊಮ್ಯಾನ್ಸ್
ಕುಟುಂಬಕ್ಕೆ ಹೆಣ್ಣು ಮಗುವಿನ ಆಗಮನ, ಪುಟ್ಟ ಲಕ್ಷ್ಮಿಗೆ ಅದ್ದೂರಿ ಸ್ವಾಗತ
ಹಿರಿಯನಾಗರಿಕನ ಮುಂದೆ ದರ್ಪ ತೋರಿದ ಮಹಿಳೆ

ಕೊನೆಗೆ ಸ್ಟಾಂಡಪ್ ಕಾಮಿಡಿಯನ್ ನಿಜಕ್ಕೂ ಖುಷಿಯಾಯಿತು ನಿಮ್ಮ ಹೆಸರೇನು, ನೀವು ಎಲ್ಲಿಂದ ಬಂದಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಈ ಯುವತಿಯೂ ನನ್ನ ಹೆಸರು ರಿತಿಕಾ, ನಾನು ಭಾರತದಿಂದ ಬಂದಿದ್ದೇನೆ ಎಂದಿದ್ದಾಳೆ. ನಿಮ್ಮನ್ನು ಭೇಟಿಯಾದದ್ದು ಖುಷಿಯಾಯಿತು ಎಂದು ಹೇಳುತ್ತಾ ಇದೇ ವಿಷಯವನ್ನು ಆಯ್ಕೆ ಮಾಡಿಕೊಂಡು ಎಲ್ಲಾ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದ್ದಾರೆ.

ಮಾತು ಮುಂದುವರೆಸಿದ ಸ್ಟಾಂಡಪ್ ಕಾಮಿಡಿಯನ್ ನಾನು ನಿಮ್ಮ ಮಾತನ್ನು ಒಪ್ಪುತ್ತೇನೆ. ನಮ್ಮವರು ಅಗಲಿದ ಬಳಿಕವೂ ಅವರು ಸದಾ ನಮ್ಮೊಂದಿಗೆ ಇರುತ್ತಾರೆ. ನಾನು ಐರಾನಿಯನ್, 2015 ರಲ್ಲಿ ನಾನು ನನ್ನ ತಂದೆಯನ್ನು ಕಳೆದುಕೊಂಡೆ, ಆದ್ರೆ ನಾನು ಯಾವತ್ತಿಗೂ ನಿಮ್ಮ ತರಹ ಮಾಡಿಲ್ಲ, ಯಾಕೆ ಅಂತ ಗೊತ್ತಾ. ನಾನು ನಿಮ್ಮ ಹಾಗೆ ಮಾಡಿದ್ರೆ ನನ್ನ ತಂದೆಯ ಆತ್ಮ ನಿಜಕ್ಕೂ ಸಂತೋಷವಾಗಿರುವುದಿಲ್ಲ. ನೀನು ಯಾಕೆ ಹಣವನ್ನು ವ್ಯರ್ಥ ಮಾಡ್ತಿಯಾ ಎಂದು ನನ್ನ ತಂದೆಯೂ ನನ್ನ ಹತ್ರ ಕೇಳ್ತಾರೆ ಎನ್ನುತ್ತಾ ಎಲ್ಲರನ್ನು ನಗಿಸಿದ್ದಾರೆ.

ಇದನ್ನೂ ಓದಿ :Video : ಚಿಲ್ಲರೆ ಕಾಸಿನಲ್ಲಿ ಪತ್ನಿಗೆ ಮಂಗಳಸೂತ್ರ ಖರೀದಿಸಲು ಬಂದ ವೃದ್ಧ, ಮುಂದೇನಾಯ್ತು ಗೊತ್ತಾ?

ಅಷ್ಟೇ ಅಲ್ಲದೇ, ನನ್ನ ತಂದೆಯೂ, ನನಗೆ ಈ ಸ್ವರ್ಗದಲ್ಲಿ ಅದ್ಭುತವಾದ ಮನೆಯಿದೆ. ನಾನು ನಿನಗೆ ಏನು ಕಲಿಸಿಕೊಟ್ಟಿದ್ದೆ. ಈ ಸೀಟನ್ನು ನನಗಾಗಿ ಖರೀದಿಸುವ ಮೂಲಕ ನೀನು ಯಾಕೆ ಮೂರ್ಖರಂತೆ ವರ್ತಿಸುತ್ತಿದ್ದೀಯಾ. ಸ್ವರ್ಗದಿಂದ ಇಲ್ಲಿಗೆ ಬಂದು ಇದನ್ನೆಲ್ಲಾ ನಾನು ನೋಡ್ಬೇಕಾ ಎನ್ನುತ್ತಾರೆ. ಇವರ ಈ ಮಾತು ಕೇಳುತ್ತಿದ್ದಂತೆ ಪ್ರೇಕ್ಷಕರು ಜೋರಾಗಿ ನಗಲು ಶುರು ಮಾಡಿದ್ದಾರೆ. ಒಂದು ನಿಮಿಷ ಯುವತಿಯ ಬಳಿ ನಿಮ್ಮ ತಂದೆ ನಗುವುದನ್ನು ನಾನು ಕೇಳಿದೆ ಎಂದಿದ್ದಾರೆ. ನಿಮ್ಮ ತಂದೆ ನನ್ನ ಹತ್ರ, ನಾನು ಯಾರಿಗೂ ಕೂಡ ತಲೆಕೆಡಿಸಿಕೊಳ್ಳುವುದಿಲ್ಲ, ನಾನು ನನ್ನ ಮಗಳ ಪಕ್ಕದಲ್ಲಿ ಕುಳಿತು ನಿಮ್ಮ ಶೋ ನೋಡುತ್ತೇನೆ, ಸ್ವರ್ಗದಿಂದ ನಿಮಗೊಂದು ಸಿಹಿ ಮುತ್ತು ಎಂದು ಹೇಳಿದ್ದಾರೆ ಎನ್ನುತ್ತಾ ಸ್ಟಾಂಡಪ್ ಕಾಮಿಡಿಯನ್ ಎಲ್ಲರನ್ನು ಮತ್ತೆ ನಗೆಗಡಲಿನಲ್ಲಿ ತೇಲಿಸಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋವೊಂದು 3.4 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ನಿಜಕ್ಕೂ ಇವರ ಕಾಮಿಡಿ ಅದ್ಭುತವಾಗಿದೆ ಎಂದಿದ್ದಾರೆ. ಮತ್ತೊಬ್ಬರು, ಅಬ್ಬಾ ಎಷ್ಟು ಸೂಕ್ಷ್ಮವಾದ ವಿಚಾರ, ಆದರೆ ಕಾಮಿಡಿ ಮೂಲಕವೇ ಎಷ್ಟು ಚೆನ್ನಾಗಿ ನಿರ್ವಹಿಸಿದ್ದಾರೆ, ನಿಜಕ್ಕೂ ಅದ್ಭುತ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಮ್ಯಾಕ್ಸ್ ಒಬ್ಬ ಅದ್ಭುತ ಕಲಾವಿದ ಎಂದು ಕಾಮೆಂಟ್ ನಲ್ಲಿ ಬರೆದುಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ