AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

100, 200, 500 ರೂ.ನಲ್ಲಿ ಈ ಮಾರ್ಕ್​ ಇರುವುದೇಕೆ ಗೊತ್ತಾ? ಇಲ್ಲಿದೆ ರಹಸ್ಯ ಮಾಹಿತಿ

ಭಾರತೀಯ ಕರೆನ್ಸಿ ನೋಟುಗಳಲ್ಲಿರುವ 'ಬ್ಲೀಡ್ ಮಾರ್ಕ್ಸ್' ಮತ್ತು ಇತರ ಸ್ಪರ್ಶ ವೈಶಿಷ್ಟ್ಯಗಳು ದೃಷ್ಟಿಹೀನರಿಗೆ ಅತ್ಯಂತ ಉಪಯುಕ್ತವಾಗಿವೆ. ಈ ಗೆರೆಗಳನ್ನು ಸ್ಪರ್ಶಿಸುವ ಮೂಲಕ ಅವರು ನೋಟಿನ ಮೌಲ್ಯವನ್ನು ಸುಲಭವಾಗಿ ಗುರುತಿಸಬಹುದು. 100, 200, 500 ರೂ. ನೋಟುಗಳಿಗೆ ವಿಭಿನ್ನ ಸಂಖ್ಯೆಯ ಗೆರೆಗಳಿದ್ದು, ಇದು ಅವರಿಗೆ ಆರ್ಥಿಕ ಸ್ವಾತಂತ್ರ್ಯವನ್ನು ನೀಡುತ್ತದೆ. ಆರ್‌ಬಿಐನ ಈ ವಿಶಿಷ್ಟ ವಿನ್ಯಾಸವು ನೋಟುಗಳ ಅಸಲಿಯತ್ತನ್ನು ಗುರುತಿಸಲು ಸಹ ನೆರವಾಗುತ್ತದೆ.

100, 200, 500 ರೂ.ನಲ್ಲಿ ಈ ಮಾರ್ಕ್​ ಇರುವುದೇಕೆ ಗೊತ್ತಾ? ಇಲ್ಲಿದೆ ರಹಸ್ಯ ಮಾಹಿತಿ
ಸಾಂದರ್ಭಿಕ ಚಿತ್ರ Image Credit source: Tv9 kannada
ಅಕ್ಷಯ್​ ಪಲ್ಲಮಜಲು​​
|

Updated on: Feb 04, 2026 | 6:27 PM

Share

ಡಿಜಿಟಲ್​​​ ಯುಗದಲ್ಲೂ ಭಾರತದಲ್ಲಿ ಇಂದಿಗೂ ನೋಟು ಬಳಕೆ ಮಾಡಲಾಗುತ್ತದೆ. ಆದರೆ ಈ ನೋಟುಗಳಲ್ಲಿ ಇರುವ ಕೆಲವೊಂದು ವಿಶೇಷ ಮಾಹಿತಿಯ ಬಗ್ಗೆ ತಿಳಿದುಕೊಳ್ಳಲೇಬೇಕು. ಇಂದಿಗೂ ನೀರಿನಂತೆ ಖರ್ಚು ಮಾಡುವ ಅದೆಷ್ಟೋ ಜನರಿಗೆ ನೋಟುಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಇಂದಿನ ದಿನಗಳಲ್ಲಿ ನಾವು ಯುಪಿಐ (UPI) ಮೂಲಕ ಹಣ ಪಾವತಿಸುವುದು ಹೆಚ್ಚಾಗಿರಬಹುದು, ಆದರೆ ನೂರಾರು ವರ್ಷಗಳಿಂದ ಚಲಾವಣೆಯಲ್ಲಿರುವ ನೋಟುಗಳ ವಿನ್ಯಾಸದ ಹಿಂದೆ ಒಂದು ವಿಶೇಷ ಉದ್ದೇಶವಿದೆ. ನೋಟುಗಳ ಅಂಚಿನಲ್ಲಿರುವ ಆ ಸಣ್ಣ ಕಪ್ಪು ಗೆರೆಗಳನ್ನು ‘ಬ್ಲೀಡ್ ಮಾರ್ಕ್ಸ್’ (Bleed Marks) ಎಂದು ಕರೆಯಲಾಗುತ್ತದೆ.

ಬ್ಲೀಡ್ ಮಾರ್ಕ್ಸ್ ಎಂದರೇನು?

ಈ ಗೆರೆಗಳನ್ನು ಮುಖ್ಯವಾಗಿ ದೃಷ್ಟಿಹೀನರಿಗಾಗಿ (Blind People) ವಿನ್ಯಾಸಗೊಳಿಸಲಾಗಿದೆ. ದೃಷ್ಟಿ ದೋಷವುಳ್ಳವರು ನೋಟನ್ನು ಕೈಯಿಂದ ಮುಟ್ಟಿದಾಗ (ಸ್ಪರ್ಶಿಸಿದಾಗ), ಆ ಗೆರೆಗಳ ಸಂಖ್ಯೆಯನ್ನು ಆಧರಿಸಿ ಅದು ಎಷ್ಟು ರೂಪಾಯಿಯ ನೋಟು ಎಂದು ಸುಲಭವಾಗಿ ಗುರುತಿಸಲು ಇದು ಸಹಾಯ ಮಾಡುತ್ತದೆ.

ಯಾವ ನೋಟಿನ ಮೇಲೆ ಎಷ್ಟು ಗೆರೆಗಳಿರುತ್ತವೆ?

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಪ್ರತಿಯೊಂದು ನೋಟಿಗೆ ವಿಭಿನ್ನ ಸಂಖ್ಯೆಯ ಗೆರೆಗಳನ್ನು ನೀಡಿದೆ. 100 ರೂಪಾಯಿ ನೋಟು ರಡೂ ಅಂಚುಗಳಲ್ಲಿ ನಾಲ್ಕು (4) ಗೆರೆಗಳಿರುತ್ತವೆ. ಇವು ಸ್ವಲ್ಪ ಉಬ್ಬಿರುವುದರಿಂದ ಮುಟ್ಟಿದಾಗ ತಕ್ಷಣ ತಿಳಿಯುತ್ತದೆ. 200 ರೂಪಾಯಿ ನೋಟಿನಲ್ಲಿ ಇದರ ಎರಡೂ ಕಡೆ ನಾಲ್ಕು ಗೆರೆಗಳ ಜೊತೆಗೆ ಮಧ್ಯದಲ್ಲಿ ಎರಡು ಸಣ್ಣ ವೃತ್ತಾಕಾರದ (Circles) ಗುರುತುಗಳಿರುತ್ತವೆ. ಇದು 100 ಮತ್ತು 200ರ ನಡುವಿನ ವ್ಯತ್ಯಾಸ ತಿಳಿಯಲು ಸಹಾಯ ಮಾಡುತ್ತದೆ. 500 ರೂಪಾಯಿ ನೋಟಿನಲ್ಲಿ ಈ ನೋಟಿನ ಪ್ರತಿ ಬದಿಯಲ್ಲಿ ಐದು (5) ಗೆರೆಗಳಿರುತ್ತವೆ.

ಇದನ್ನೂ ಓದಿ: ಪುಣ್ಯಕೋಟಿ ಗೋವಿನ ಹಾಡು ಕೇಳಿ ಬಿಕ್ಕಿ ಬಿಕ್ಕಿ ಅತ್ತ ಪುಟ್ಟ ಬಾಲಕ

ಆರ್ಥಿಕ ಸ್ವತಂತ್ರಕ್ಕಾಗಿ ಈ ವಿನ್ಯಾಸ

ಸಾಮಾನ್ಯ ಜನರಿಗೆ ಈ ಗೆರೆಗಳು ಕೇವಲ ವಿನ್ಯಾಸದಂತೆ ಕಂಡರೂ, ದೃಷ್ಟಿಹೀನರಿಗೆ ಇವು ಆರ್ಥಿಕ ಸ್ವಾತಂತ್ರ್ಯವನ್ನು ನೀಡುತ್ತವೆ. ಯಾರ ಸಹಾಯವೂ ಇಲ್ಲದೆ ತಾವು ನೀಡುತ್ತಿರುವ ಅಥವಾ ಪಡೆಯುತ್ತಿರುವ ಹಣ ಸರಿಯಾಗಿದೆಯೇ ಎಂದು ಅವರು ಖಚಿತಪಡಿಸಿಕೊಳ್ಳಬಹುದು. ನೋಟಿನ ಮೌಲ್ಯ ಹೆಚ್ಚಾದಂತೆ ಈ ಗೆರೆಗಳ ಸಂಖ್ಯೆ ಅಥವಾ ವಿನ್ಯಾಸವು ಬದಲಾಗುತ್ತಾ ಹೋಗುತ್ತದೆ.ಕೇವಲ ಗೆರೆಗಳಷ್ಟೇ ಅಲ್ಲದೆ, ನೋಟಿನ ಮೇಲಿರುವ ಮಹಾತ್ಮ ಗಾಂಧೀಜಿಯವರ ಭಾವಚಿತ್ರ ಮತ್ತು ಅಶೋಕ ಸ್ತಂಭದ ಚಿಹ್ನೆಯನ್ನು ಕೂಡ ಉಬ್ಬು ಮುದ್ರಣದ (Intaglio Printing) ಮೂಲಕ ಮುದ್ರಿಸಲಾಗುತ್ತದೆ, ಇದನ್ನು ಮುಟ್ಟಿ ನೋಡುವುದರಿಂದ ನೋಟು ಅಸಲಿಯೇ ಅಥವಾ ನಕಲಿಯೇ ಎಂದು ಕೂಡ ಪತ್ತೆಹಚ್ಚಬಹುದು.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Akshay Pallamajalu
Akshay Pallamajalu

ನನ್ನ ಹೆಸರು ಅಕ್ಷಯ್ ಕುಮಾರ್ ಪಲ್ಲಮಜಲು, ನನ್ನ ಊರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕು, ಡಿಜಿಟಲ್​ ವಿಭಾಗದಲ್ಲಿ 3 ವರ್ಷಗಳ ಅನುಭವ, ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು, ಟಿವಿ9ನಲ್ಲೂ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದೇನೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಲೇಖನಗಳನ್ನು ಬರೆಯುತ್ತೇನೆ.

Read More