
ಕೆಲವರಿಗೆ ವಿದೇಶ (foreign) ಅಂದ್ರೆ ಅದೇನೋ ವ್ಯಾಮೋಹ. ವಿದೇಶದಲ್ಲಿ ಜಾಬ್ ಸಿಕ್ಕರೆ ಲೈಫ್ ಸೆಟ್ಲ್ ಆದಂತೆ ಎನ್ನುವುದು ಹೆಚ್ಚಿನವರ ಭಾವನೆ. ಹೀಗಾಗಿ ಓದು ಮುಗಿಯುತ್ತಿದ್ದಂತೆ ಉದ್ಯೋಗಕ್ಕಾಗಿ ವಿದೇಶಕ್ಕೆ ಹಾರುತ್ತಾರೆ. ಆದರೆ ನಾವು ಅಂದುಕೊಂಡಂತೆ ಅವರ ಬದುಕು ಇರಲ್ಲ ಎನ್ನುವುದು ಈ ಮಹಿಳೆ ಯ ಮಾತು ಕೇಳಿದ್ರೆ ನಿಮ್ಗೆ ಅನಿಸಬಹುದು. ಕಾರ್ಪೋರೇಟ್ ಜೀವನದಲ್ಲಿ ಹೆಚ್ಚು ಸಂಬಳವಿದ್ರೂ ಆ ಕೆಲಸದ ಸಹವಾಸ ಸಾಕಪ್ಪ ಸಾಕು ಎಂದು ಅನಿಸಿದ್ದು. ಇದೀಗ ದುಬೈನಲ್ಲಿ ನೆಲೆಸಿರುವ ಭಾರತೀಯ ಮಹಿಳೆ ಸೀಮಾ ಪುರೋಹಿತ್ (Seema Purohit) ಅವರು ಅಧಿಕ ಸಂಬಳ ಸಿಗುವ ಈ ಕೆಲಸವು ನೆಮ್ಮದಿ ನೀಡುತ್ತಿಲ್ಲ. ಕಡಿಮೆ ಸಂಬಳವಾದ್ರೂ ಬೆಂಗಳೂರಿನ ಜೀವನವೇ ಚೆನ್ನಾಗಿತ್ತು ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.
seemapurohit018 ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಬೆಂಗಳೂರಿನಲ್ಲಿ 18000 ಸಂಬಳ ಸಿಗುವ ಕೆಲಸದಿಂದ ನಾನು ಸಂತೋಷವಾಗಿದ್ದೆ. ಅದು ನನ್ನ ಮೊದಲ ಕೆಲಸವಾಗಿತ್ತು. ಹೆಚ್ಚಿನ ಅವಕಾಶ ಹಾಗೂ ಸಂಬಳ ಸಿಗುತ್ತಿದ್ದಂತೆ ದುಬೈಗೆ ತೆರಳಿದೆ. ಆದರೆ ಕಾರ್ಪೊರೇಟ್ ಜಗತ್ತಿನಲ್ಲಿ ಅಧಿಕ ಸಂಬಳವೇನೋ ಸಿಕ್ಕಿತು. ಬೆಂಗಳೂರಿನಲ್ಲಿ ಸಾಧಾರಣ ಮಾಸಿಕ ಸಂಬಳವನ್ನು ಗಳಿಸುವಾಗ ಸಿಗುತ್ತಿದ್ದ ತೃಪ್ತಿಯ ಭಾವನೆಯನ್ನು ವಿದೇಶದಲ್ಲಿನ ಈ ಅಧಿಕ ಸಂಬಳದ ಕೆಲಸದಲ್ಲಿ ಸಿಗುತ್ತಿಲ್ಲ ಎಂದು ಹೇಳಿದ್ದಾರೆ.
ಈಗಿನ ಕಾಲದಲ್ಲಿ ಉತ್ತಮ ಅವಕಾಶಗಳು ಅಧಿಕ ಸಂಬಳ ಸಿಗುವ ಉದ್ಯೋಗ ಹುಡುಕುತ್ತಾ ತಮ್ಮ ನೆಮ್ಮದಿ ಕಳೆದುಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿ ತನ್ನ ಮೊದಲ ಕೆಲಸದಲ್ಲಿ ತಿಂಗಳಿಗೆ ಕೇವಲ 18,000 ರೂ ಗಳಿಸುತ್ತಿದ್ದ ಸಮಯದಲ್ಲಿ ನಾನೇ ವಿಶ್ವದ ಶ್ರೀಮಂತ ಹುಡುಗಿ ಎನ್ನುವ ಭಾವನೆಯಿತ್ತು. ಆ ಸಮಯದಲ್ಲಿ ಕಡಿಮೆ ಸಂಬಳ ಸಿಗುತ್ತಿದ್ರೂ, ಬಾಡಿಗೆ ಪಾವತಿಸಲು, ಶಾಪಿಂಗ್, ಆಹಾರ ಸೇವಿಸಲು ಹೀಗೆ ಖರ್ಚು ಕಳೆದು ತಿಂಗಳ ಕೊನೆಯಲ್ಲಿ ಸ್ವಲ್ಪ ಹಣವನ್ನು ಉಳಿತಾಯ ಮಾಡುತ್ತಿದ್ದೆದ್ದೆ. ಆ ಕ್ಷಣವು ನನ್ನ ಜೀವನದ ಸಂತೋಷದ ಕ್ಷಣಗಳಲ್ಲಿ ಒಂದು. ಆದರೆ ಇಂದು ದುಬೈಯಲ್ಲಿ ನನಗೆ ಕೈ ತುಂಬಾ ಸಂಬಳ ದೊರೆಯುತ್ತಿದೆ, ಸಂತೋಷವಿಲ್ಲ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ:Viral: ಸಹೋದರನ ಮದುವೆಗೆ ರಜೆ ಕೊಡದ ಬಾಸ್, ಜಾಬ್ ರಿಸೈನ್ ಮಾಡಿದ ಉದ್ಯೋಗಿ
ಈ ವಿಡಿಯೋ ಎಪ್ಪತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಈ ರೀತಿ ಅನುಭವ ನಮಗೂ ಆಗಿದೆ. ಸಂಬಳ ಹೆಚ್ಚಾದಷ್ಟು ನೆಮ್ಮದಿ ಹಾಳಾಗುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬರು ಬಹುಷಃ ನೀವು ದುಬೈನಲ್ಲಿ ಹೆಚ್ಚು ಖರ್ಚು ಮಾಡುತ್ತಿರಬೇಕು ಅದಕ್ಕಾಗಿ ನಿಮಗೆ ಉಳಿತಾಯವು ಕಷ್ಟ ಎನಿಸುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ದುಬೈನಲ್ಲಿನ ಜೀವನವು ನಿಮ್ಮ ಮಾನಸಿಕ ನೆಮ್ಮದಿಯ ಮೇಲೆ ಪರಿಣಾಮ ಬೀರುತ್ತಿದ್ದರೆ, ಮನೆಗೆ ಹಿಂತಿರುಗಿ. ಭಾರತದಲ್ಲಿಯೂ ನಿಮಗೆ ಉತ್ತಮ ಉದ್ಯೋಗ ಸಿಗುತ್ತದೆ, ನಿಮ್ಮ ಸಂತೋಷವನ್ನು ತ್ಯಾಗ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:14 pm, Wed, 17 September 25