ನವದೆಹಲಿ: ನಮ್ಮ ದೇಶದಲ್ಲೇ ಸೀರೆಯುಟ್ಟ ಮಹಿಳೆಯನ್ನು ಬೆರಗುಗಣ್ಣುಗಳಿಂದ ನೋಡುವ ಜಮಾನಾ ಇದು ಮಾರಾಯ್ರೇ. ಆದರೆ ಭಾರತೀಯ ಮಹಿಳೆಯೊಬ್ಬರು ನಮ್ಮ ಸಂಪ್ರದಾಯದಂತೆ ಸೀರೆಯುಟ್ಟು ವಿದೇಶದ ಬೀಚೊಂದರಲ್ಲಿ ಬಿಕಿನಿಯಲ್ಲಿ (bikini) ಓಡಾಡುತ್ತಿರುವ ಬಿಳಿ ಮಹಿಳೆಯರ ನಡುವೆ ಮುಗುಳ್ನಗುತ್ತಾ ನಡೆದು ಬರುತ್ತಿರುವ ವಿಡಿಯೋ ಗಮನ ಸೆಳೆಯುತ್ತದೆ ಮತ್ತು ಅದು ಸಖತ್ ವೈರಲ್ ಕೂಡ ಆಗಿದೆ. ಈ ವಿಡಿಯೋದಿಂದ ಒಂದು ವಿಷಯ ವೇದ್ಯವಾಗುತ್ತದೆ. ನಾವು ಯಾವುದೇ ದೇಶದಲ್ಲಿರಲಿ, ನಮ್ಮ ಉಡುಗೆ-ತೊಡುಗೆ, ನಾವು ಸೇವಿಸುವ ಆಹಾರ (food) ಮತ್ತು ನಾವಾಡುವ ಮಾತುಗಳಿಂದ (language) ಜನ ನಮ್ಮನ್ನು ಗುರುತಿಸುತ್ತಾರೆ.
ವಿಡಿಯೋದಲ್ಲಿ ಮಹಿಳೆ ತನ್ನ ರಾಷ್ಟ್ರೀಯತೆಯನ್ನು ಬಹಳ ಸುಂದರವಾಗಿ, ಆರ್ಥಗರ್ಭಿತವಾಗಿ ಮತ್ತು ನಾವೆಲ್ಲ ಖುಷಿ ಮತ್ತು ಹೆಮ್ಮೆಪಟ್ಟುಕೊಳ್ಳುವ ರೀತಿಯಲ್ಲಿ ಪ್ರದರ್ಶಿಸುತ್ತಿದ್ದಾರೆ!
अरे काकी कहां पहुंच गई ?? pic.twitter.com/tQkIsGRuWD
— Rishika gurjar (@Rishikagurjjar) August 22, 2022
ವಿಡಿಯೋ ಕ್ಲಿಪ್ ನಲ್ಲಿ ನಿಮಗೆ ಕಾಣುತ್ತಿರುವ ಹಾಗೆ ನಮ್ಮ ಕಥಾನಾಯಕಿ ಉತ್ತರ ಭಾರತದ ಕೆಲಭಾಗಗಳ ಮಹಿಳೆಯರು ಧರಿಸುವ ಶೈಲಿಯಲ್ಲಿ ಸೀರೆಯನ್ನುಟ್ಟು ಬೀಚ್ ನಲ್ಲಿ ವಿಹರಿಸುತ್ತಿದ್ದಾರೆ.
ಈ ವಿಡಿಯೋ ನಮಗೆ ವಿಶಿಷ್ಟ ಮತ್ತು ಕುತೂಹಲಕಾರಿಯಾಗಿ ಕಾಣೋದಿಕ್ಕೆ ಕಾರಣಗಳಿವೆ. ಮೊಲನೆಯದ್ದು. ಬೀಚ್ ಬೇರೆ ದೇಶದಲ್ಲಿರುವಂಥದ್ದು, ಭಾರತದಲ್ಲಿ ಅಲ್ಲ ಮತ್ತು ಬೀಚ್ ನಲ್ಲಿ ಕಾಣುವ ಮಹಿಳೆಯರೆಲ್ಲ ಬಿಕಿನಿ ತೊಟ್ಟಿರುವ ಸ್ಥಳೀಯರು ಇಲ್ಲವೇ ಪ್ರವಾಸಿಗರಾಗಿದ್ದಾರೆ. ಹಾಗಾಗಿ ನಮ್ಮ ಕಥಾನಾಯಕಿ ಅವರಿಗಿಂತ ಭಿನ್ನ ಮತ್ತು ಸುಂದರ ಅನಿಸುತ್ತಾರೆ.
ಸದರಿ ವಿಡಿಯೋವನ್ನು ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ ಮತ್ತು ಬೇರೆ ಬೇರೆ ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಶೇರ್ ಮಾಡಲಾಗುತ್ತಿದೆ.
ವಿದೇಶದ ನೆಲದಲ್ಲಿ ಅದರಲ್ಲೂ ವಿಶೇಷವಾಗಿ ಬೀಚ್ ನಲ್ಲಿ ಅಲ್ಲಿನ ಸಂಸ್ಕೃತಿಗೆ ಮಾರುಹೋಗದೆ ತನಗೆ ಖುಷಿ ಮತ್ತು ತೃಪ್ತಿ ನೀಡುವ ಉಡುಗೆ ತೊಟ್ಟು ಬೀಚ್ ನಲ್ಲಿ ಯಾವುದೇ ಹಮ್ಮು ಬಿಮ್ಮು ಇಲ್ಲದೆ ಓಡಾಡುತ್ತಿರುವುದನ್ನು ಹಲವಾರು ಯೂಸರ್ಸ್ ಶ್ಲಾಘಿಸಿದ್ದಾರೆ.
ಸೀರೆಗಳ ಬಗ್ಗೆಯೇ ಮುಂದುವರಿದು ಮಾತಾಡುವುದಾದರೆ ಕೆಲ ತಿಂಗಳ ಹಿಂದೆ ಬ್ರಿಟನ್ನಿನ ಪ್ರಸಿದ್ಧ ರಾಯಲ್ ಅಸ್ಕಾಟ್ ರೇಸ್ ಮೀಟಿಂಗ್ ನಲ್ಲಿ ಭಾಗವಹಿಸಿದ ಸುಮಾರು 100 ಕ್ಕೂ ಹೆಚ್ಚು ಮಹಿಳೆಯರು-ಅವರಲ್ಲಿ ಹೆಚ್ಚಿನವರು ಬ್ಯಾಂಕ್ ಉದ್ಯೋಗಿಗಳು ಮತ್ತು ವೈದ್ಯೆಯರು-ಎಲ್ಲರೂ ಭಾರತೀಯ ಸಂಪ್ರದಾಯವನ್ನು ಸ್ಫುಟವಾಗಿ ಪ್ರತಿನಿಧಿಸುವ 9 ಮೊಳದ ಸೀರೆಗಳನ್ನೇ ಉಟ್ಟು ಕಂಗೊಳಿಸುತ್ತಿದ್ದರು.
Published On - 4:48 pm, Tue, 23 August 22