Video: 79 ವರ್ಷ ವಯಸ್ಸಲ್ಲೂ ಇಡ್ಲಿ-ಸಾಂಬಾರ್‌ ಮಾರಿ ಸ್ವಾವಲಂಬಿ ಜೀವನ ನಡೆಸುತ್ತಿರುವ ನಿವೃತ್ತ ಯೋಧೆ

ಬರೀ ಸ್ವಾರ್ಥಿಗಳೇ ತುಂಬಿರುವ ಈ ಪ್ರಪಂಚದಲ್ಲಿ ಯಾರಿಗೂ ತೊಂದರೆ ಕೊಡದೆ ತಮ್ಮದೇ ಸ್ವಾಭಿಮಾನದ ಜೀವನ ನಡೆಸುವವರೂ ಇದ್ದಾರೆ. ಅದೇ ರೀತಿ ಇಲ್ಲೊಬ್ಬರು ವೃದ್ಧೆ ತನ್ನ 79 ವರ್ಷ ವಯಸ್ಸಿನಲ್ಲೂ ಬೀದಿ ಬದಿಯಲ್ಲಿ ಇಡ್ಲಿ-ಸಾಂಬಾರ್‌ ಮಾರಿ ಜೀವನ ಸಾಗಿಸುತ್ತಿದ್ದಾರೆ. ಒಂದು ಕಾಲದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಇವರು, ತಮ್ಮ ಇಳಿ ವಯಸ್ಸಿನಲ್ಲಿ ಯಾರಿಗೂ ಭಾರವಾಗದೆ ಸ್ವಾವಲಂಬಿ ಜೀವನ ನಡೆಸುತ್ತಿದ್ದು, ಇವರ ಈ ಸ್ಫೂರ್ತಿದಾಯಕ ಕಥೆ ಎಲ್ಲರ ಮನ ಗೆದ್ದಿದೆ.

Video: 79 ವರ್ಷ ವಯಸ್ಸಲ್ಲೂ ಇಡ್ಲಿ-ಸಾಂಬಾರ್‌ ಮಾರಿ ಸ್ವಾವಲಂಬಿ ಜೀವನ ನಡೆಸುತ್ತಿರುವ ನಿವೃತ್ತ ಯೋಧೆ
ಸ್ವಾವಲಂಬಿ ಅಜ್ಜಿ
Image Credit source: Kashish Soni/Instagram

Updated on: Jun 25, 2025 | 4:56 PM

ಲೈಫಲ್ಲಿ ಏನಾದ್ರೂ ಆದ್ರೆ ಜೀವನವೇ ಮುಗಿದು ಹೋಯ್ತು ಎಂದು ಕೊರಗುತ್ತಾ ಜೀವನದಲ್ಲಿನ ಉತ್ಸಾಹವನ್ನೇ ಕಳೆದುಕೊಳ್ಳುವವರು  ಒಂದು ಕಡೆಯಾದ್ರೆ, ಗಟ್ಟಿಮುಟ್ಟಾಗಿದ್ರೂ ದುಡಿಯಲು ಉದಾಸಿನತೆಯನ್ನು ತೋರುತ್ತಿರುವವರು ಇನ್ನೊಂದು ಕಡೆ. ಇಂತಹ ಜನಗಳ ನಡುವೆ ಸ್ವಾಭಿಮಾನದ  ಜೀವನ ((self-reliant life) ನಡೆಸುತ್ತಿರುವವರು ಅದೆಷ್ಟೋ ಜನರಿದ್ದಾರೆ. ಇವರುಗಳ ಸ್ಫೂರ್ತಿದಾಯಕ ಕಥೆಗಳು ಸೋಷಿಯಲ್‌ ಮೀಡಿಯಾದಲ್ಲಿ ಕಾಣ ಸಿಗುತ್ತಲೇ ಇರುತ್ತವೆ. ಇದೀಗ ಇಲ್ಲೊಬ್ರು ಗಟ್ಟಿಗಿತ್ತಿಯ ಇಂತಹದ್ದೇ ಕಥೆಯೊಂದು ವೈರಲ್‌ ಆಗಿದ್ದು, ವಯಸ್ಸಾಯಿತು ಮನೆಯಲ್ಲಿ ಕೂತರಾಯಿತು, ಮನೆಯವರು ಸಾಕುತ್ತಾರೆ ಎಂದು ಕೈ ಕಟ್ಟಿ ಕೂರದೆ, ಇದ್ದಷ್ಟು ದಿನ ಸ್ವಾವಲಂಬಿ ಜೀವನ ನಡೆಸಬೇಕೆಂದು ಇಳಿ ವಯಸ್ಸಿನಲ್ಲೂ  ಬೀದಿ ಬದಿಯಲ್ಲಿ ಇಡ್ಲಿ ಸಾಂಬಾರ್‌ ಮಾರಿ (idli sambhar vendor) ಜೀವನ ಸಾಗಿಸುತ್ತಿದ್ದಾರೆ.  ಇವರ ಈ ಸ್ಫೂರ್ತಿದಾಯಕ ಕಥೆ ಎಲ್ಲರ ಮನ ಗೆದ್ದಿದೆ.

ಇಳಿ ವಯಸ್ಸಿನಲ್ಲೂ ಇಡ್ಲಿ ಸಾಂಬಾರ್‌ ಮಾರಿ ಜೀವನ ಸಾಗಿಸುತ್ತಿರುವ ಅಜ್ಜಿ:

ಒಂದು ಕಾಲದಲ್ಲಿ ಭಾರತೀಯ ಸೇನೆಯಲ್ಲಿ ಆಡಳಿತ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ 79 ವರ್ಷ ವಯಸ್ಸಿನ ವೃದ್ಧೆಯೊಬ್ಬರು, ಇಂದು ಇಂದೋರ್‌ನ ಬೀದಿ ಬದಿಯಲ್ಲಿ ಇಡ್ಲಿ ಸಾಂಬಾರ್‌ ಮಾರಿ ಜೀವನ ಸಾಗಿಸುತ್ತಿದ್ದಾರೆ. ಅವಿವಾಹಿತೆವಾಗಿಯೇ ಉಳಿದಿರುವ ಇವರು ತಮ್ಮ ಸಕಾರಾತ್ಮಕ ಮನೋಭಾವ ಮತ್ತು ಸ್ವಾವಲಂಬಿ ಜೀವನದ ಮೂಲಕವೇ ಎಲ್ಲರ ಮನ ಗೆದ್ದಿದ್ದಾರೆ.

ಇದನ್ನೂ ಓದಿ
ತಳ್ಳುಗಾಡಿಯಲ್ಲಿದ್ದ ಹಣ್ಣನ್ನು ಕದ್ದು ತಿಂದ ಮರಿ ಆನೆ
ಅಪ್ಪ-ಅಮ್ಮನ ಕನಸಿನ ಹಾರಾಟ, ಮಗಳಿಗೆ ಹೆಮ್ಮೆಯ ಕ್ಷಣ ಹೇಗಿತ್ತು ನೋಡಿ?
ಫುಡ್ ಡೆಲಿವರಿ ಬಾಯ್‌ಗೆ ಬರ್ತ್ಡೇ ಸರ್ಪ್ರೈಸ್ ನೀಡಿದ ಮನೆಮಂದಿ
ಶ್ವಾನದ ಮೇಲೆ ಕಾರು ಹತ್ತಿಸಿ, ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದ ವ್ಯಕ್ತಿ

ವೈರಲ್‌  ವಿಡಿಯೋ ಇಲ್ಲಿದೆ ನೋಡಿ:

ಫುಡ್‌ ಬ್ಲಾಗರ್‌ ಕಾಶಿಶ್‌ ಸೋನಿ (Kashish Soni) ಎಂಬವರು ವೃದ್ಧೆಯ ಈ ಸ್ಪೂರ್ತಿದಾಯಕ ಕಥೆಯನ್ನು ತಮ್ಮ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ವೈರಲ್‌ ವಿಡಿಯೋದಲ್ಲಿ ʼಸ್ವಾಭಿಮಾನಿ ಅಜ್ಜಿ ಅವಿವಾಹಿತೆಯಾದ ನಾನು ಮುಂಬೈನಲ್ಲಿ ಲಲಿತಕಲೆ ಪದವಿ ಪಡೆದಿದ್ದೇನೆ.  ನಾನು ಮೊದಲು ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿದ್ದೆ ನಿವೃತ್ತಿಯ ನಂತರ, ಅಡುಗೆ ಮಾಡುವ ಹವ್ಯಾಸವನ್ನು ಕೆಲಸವನ್ನಾಗಿ ಮಾಡಿಕೊಂಡು ಸ್ವಾವಲಂಬಿ ಜೀವನ ನಡೆಸುತ್ತಿದ್ದೇನೆ ಎಂದು ಹೇಳುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಹುಟ್ಟುಹಬ್ಬದ ದಿನ ಫುಡ್ ಡೆಲಿವರಿ ಮಾಡಲು ಹೋದ ವ್ಯಕ್ತಿಗೆ ಕಾದಿತ್ತು ಸರ್ಪ್ರೈಸ್, ಏನದು ಗೊತ್ತಾ?

ಜೂನ್‌ 22 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5.2 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಯಾರ ಕಿರಿಕಿರಿಯೂ ಇಲ್ಲದೆ ಶಾಂತಿಯುತವಾಗಿ ಜೀವನ ನಡೆಸುತ್ತಿದ್ದಾರೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಒಂಟಿಯಾಗಿದ್ದರೂ ಖುಷಿಯಿಂದ ಜೀವನ ನಡೆಸಬಹುದು ಎಂದು ಇವರು ತೋರಿಸಿಕೊಟ್ಟಿದ್ದಾರೆʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಿಜಕ್ಕೂ ಇವರ ಕಥೆ ಸ್ಪೂರ್ತಿದಾಯಕವಾಗಿದೆʼ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ