ಖ್ಯಾತ ಉದ್ಯಮಿ ಅನಂದ್ ಮಹಿಂದ್ರ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಸಕ್ರಿಯರಾಗಿರುತ್ತಾರೆ. ಗುರುವಾರದಂದು ಅವರು ಭೀತಿ ಮೂಡಿಸುವ ವಿಡಿಯೋವೊಂದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಕರಡಿಗಳ ಗುಂಪೊಂದು ಕೆಲ ಬೈಕ್ ಸವಾರರ ಬೆನ್ನಟ್ಟಿವೆ. ಅವರ ಕ್ಯಾಪ್ಷನ್ ನೋಡಿದರೆ ಸದರಿ ವಿಡಿಯೋ ತಮಿಳುನಾಡಿನ ನೀಲಗಿರಿ ಬೆಟ್ಟ್ಗಳಲ್ಲಿ ಶೂಟ್ ಮಾಡಲಾಗಿದೆ. ಆನಂದ್ ಅವರ ವಿಡಿಯೋವನ್ನು ಈಗಾಗಲೇ 52,000 ಕ್ಕಿಂತ ಹೆಚ್ಚು ಜನ ನೋಡಿದ್ದಾರೆ. ಅದರೊಂದಿಗೆ ಜಾವಾ ಮೊಟಾರ್ಸೈಕಲ್ಗಳನ್ನೂ ಅವರು ಟ್ಯಾಗ್ ಮಾಡಿ ಒಂದು ಧೈರ್ಯಶಾಲಿ ಸಲಹೆಯನ್ನು ಅವರು ನೀಡಿದ್ದಾರೆ.
ಬೈಕ್ ಓಡಿಸುತ್ತಿರುವವನೊಬ್ಬ ಈ ವಿಡಿಯೋವನ್ನು ಶೂಟ್ ಮಾಡಿರುವಂತಿದೆ. ಅಸಲಿಗೆ ಇದು ಒಂದು ಚಹಾ ತೋಟದ ಮೂಲಕ ಹಾದುಹೋಗುವಾಗ ಶೂಟ್ ಮಾಡಿದ್ದಾರೆ. ಅದು ಆರಂಭವಾಗೋದೇ ರಮಣೀಯ ತೋಟದ ದೃಶ್ಯದಿಂದ. ರಸ್ತೆಯ ಎರಡೂ ಬದಿಗಳಲ್ಲಿ ಹಚ್ಚ ಹಸಿರು ಮರಗಿಡಗಳು, ಪೊದೆಗಳು ಮನಸ್ಸಿಗೆ ಮುದ ನೀಡುತ್ತವೆ. ಹಾಗೆ ಮುಂದೆ ಸಾಗುತ್ತಿರುವಾಗಲೇ, ಒಂದು ತಿರುವಿನಲ್ಲಿ ರಸ್ತೆ ಮೇಲೆ ನಿಂತಿರುವ ಮೂರು ಕರಡಿಗಳನ್ನು ಅವನು ಗಮನಿಸುತ್ತಾನೆ. ಆ ಕ್ಷಣಕ್ಕೆ ಅವನಾಗಲೀ ಅವನ ಜೊತೆಗಾರರರಾಗಲೀ ಹೆದರದೆ ಅವುಗಳನ್ನು ಶೂಟ್ ಮಾಡುವುದು ಮುಂದುವರೆಸಿದ್ದಾರೆ. ಆದರೆ ಮೂರರಲ್ಲಿ ಒಂದು ಕರಡಿಯು ಇವರತ್ತ ನುಗ್ಗಿದಾಗ ಪ್ರಾಣಭಯದಿಂದ ಯು-ಟರ್ನ್ ತೆಗೆದುಕೊಂಡಿದ್ದಾರೆ. ಅಲ್ಲಿಗೆ ವಿಡಿಯೋ ನಿಂತುಹೋಗುತ್ತದೆ.
Somewhere in the Nilgiris… Wait till the end of the clip if you want to feel an adrenaline rush…To the @jawamotorcycles team: We need to introduce a ‘Bear Charge’ warning on our bikes… pic.twitter.com/Zy24TuBroF
— anand mahindra (@anandmahindra) June 24, 2021
‘ನೀಲಗಿರಿ ಬೆಟ್ಟಗಳ ಒಂದು ಭಾಗದಲ್ಲಿ ಈ ವಿಡಿಯೋ ಶೂಟ್ ಆಗಿದೆ. ನಿಮ್ಮೊಳಗಿನ ವೀರರಸ ಜಾಗೃತಗೊಳ್ಳಬೇಕಾದರೆ, ಈ ಕ್ಲಿಪ್ ಅನ್ನು ಕೊನೆಯವರೆಗೆ ನೋಡಿರಿ……@jawamotorcycles ಟೀಮ್ಗೆ: ನಮ್ಮ ಬೈಕ್ಗಳ ಮೇಲೆ ಕರಡಿಗಳ ದಾಳಿಯ ಬಗ್ಗೆ ಎಚ್ಚರಿಕೆ ಹಾಕಿಕೊಳ್ಳುವ ಅಗತ್ಯವಿದೆ. …’ ಎಂದು ಆನಂದ ಮಹಿಂದ್ರ ತಮ್ಮ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಈ ಟ್ವೀಟ್ ನೋಡಿರುವ ಹಲವಾರು ಜನರಿಗೆ ಹೆದರಿಕೆಯಾದರೆ ಇನ್ನೂ ಕೆಲವರಿಗೆ ಬೈಕರ್ಗಳ ಯೋಗಕ್ಷೇಮದ ಚಿಂತೆಯಾಗಿದೆ, ಯಾಕೆಂದರೆ, ಕರಡಿ ನುಗ್ಗುವಲ್ಲಿಗೆ ವಿಡಿಯೋ ನಿಂತುಹೋಗುತ್ತದೆ.
ಶ್ರೀ ಮಹಿಂದ್ರ ಅವರೇ, ಕರಡಿ ಬೈಕರ್ಗಳ ಕಡೆ ನುಗ್ಗಿದ ನಂತರ ಏನಾಯಿತು ಅನ್ನೋದು ಗೊತ್ತಾಗಲಿಲ್ಲ, ಇದರ ಫೀಡ್ಬ್ಯಾಕ್ ಆಗಿ ನೀವು ಇನ್ನೊಂದು ಟ್ಟೀಟ್ ಮಾಡುವರೆಂಬ ನಿರೀಕ್ಷೆ ನನ್ನದು. ಆ ಬೈಕರ್ಗಳ ಜೊತೆ ಕರಡಿಗಳೂ ಸುರಕ್ಷಿತವಾಗಿವೆಯೇ ಅಂತ ತಿಳಿಯುವುದು ಮುಖ್ಯವಾಗಿದೆ, ಯಾಕೆಂದರೆ ಪ್ರತಿ ಜೀವವೂ ಅಮೂಲ್ಯವಾದದ್ದು, ಅಂತ ಒಬ್ಬ ಬಳಕೆದಾರ ಪ್ರತಿಕ್ರಿಯಿಸಿದ್ದಾರೆ.
ಮತ್ತೊಬ್ಬರು, ಶ್ರೀ ಮಹಿಂದ್ರ ಅವರೇ, ಇದು ನಿಜಕ್ಕೂ ಭಯಾನಕವಾಗಿದೆ. ಕರಡಿಯಿಂದ ಬೆನ್ನಟ್ಟಿಸಿಕೊಳ್ಳವುದು ಅಂದ್ರ ಸುಮ್ಮೇನಾ. ನನ್ನ ಹೃದಯ ಬಡಿತವೇ ನಿಂತಂತಾಗಿ ಫೋನ್ ಕೈಯಿಂದ ಜಾರಿ ಕೆಳಗೆ ಬೀಳುವುದರಲ್ಲಿತ್ತು…. ಅಂತ ಹೇಳಿದ್ದಾರೆ.
Oh wow!! that was a close call. ?but I can't take my eyes off those wild flowers..what a beautiful color…
— ?₳₭ⱧłⱠ₳ ??✨ (@Akhila_jade) June 24, 2021
ಮಾನವ ಹಾಗೂ ವನ್ಯ ಪ್ರಾಣಿಗಳು ಸುರಕ್ಷಿತವಾಗಿರುವರೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅಹ್ಮದ್ ಸಯೀದ್ ಅನ್ನುವವರು ಎಲ್ಲರೂ ಸೇಫಾಗಿದ್ದಾರೆಂದು ಹೇಳಿ ಆ ವಿಡಿಯೋದ ಮುಂದುವರಿದ ಭಾಗವನ್ನು ಶೇರ್ ಮಾಡಿದ್ದಾರೆ. ಮಳೆ ಸುರಿಯಾರಂಭಿಸಿದೆ ಮತ್ತ ಕರಡಿಗಳು ವಾಪಸ್ಸು ಹೋಗುತ್ತಿವೆ…….
Both are safe. The rider while on his way back home. Still bears in the same vicinity. pic.twitter.com/n1tcAhTzQE
— Ahmed Sayeed (@sayeed4470) June 24, 2021
ಇದನ್ನೂ ಓದಿ: Viral Video: ಸೀರೆಯುಟ್ಟು ಸ್ಟೈಲಾಗಿ ಸೊಂಟ ಬಳುಕಿಸುತ್ತಿರುವ ಮಹಿಳೆ ನೋಡಿ ನೆಟ್ಟಿಗರು ಫಿದಾ!