ಕಾಂತಾರ (Kantara) ಸಿನಿಮಾ ದೇಶದ್ಯಾಂತ ಭಾರೀ ಸದ್ದು ಮಾಡುತ್ತಿದೆ. ಈ ಸಿನಿಮಾ ವಿಚಾರಕ್ಕಾಗಿ ವಿವಾದವನ್ನು ಸೃಷ್ಟಿ ಮಾಡಿತ್ತು. ಇದರ ಜೊತೆಗೆ ಸಿನಿಮಾದಲ್ಲಿ ಬರುವ “ವರಾಹ ರೂಪಂ”(Varaha Roopam..) ಹಾಡು ‘ತೈಕ್ಕುಡಂ ಬ್ರಿಡ್ಜ್’ ಬ್ಯಾಂಡ್ನ ‘ನವರಸಂ..’ ಹಾಡಿನ ಟ್ಯೂನ್ ಅನ್ನು ‘ವರಾಹ ರೂಪಂ..’ನಲ್ಲಿ ಬಳಕೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ‘ತೈಕ್ಕುಡಂ ಬ್ರಿಡ್ಜ್’ನವರು ಕೇರಳದ ಕೋಯಿಕ್ಕೋಡ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ‘ವರಾಹ ರೂಪಂ..’ ಹಾಡನ್ನು ಪ್ರಸಾರ ಮಾಡದಂತೆ ಮಧ್ಯಂತರ ತಡೆಯಾಜ್ಞೆ ಆದೇಶ ಹೊರಡಿಸಿತ್ತು. ಈ ಸಂಬಂಧ ‘ಹೊಂಬಾಳೆ ಫಿಲ್ಮ್ಸ್’ ಮೇಲ್ಮನವಿ ಸಲ್ಲಿಕೆ ಮಾಡಿತ್ತು. ಇದೀಗ ಕೋರ್ಟ್ ತೀರ್ಪು ಕಾಂತಾರದ ಕಡೆಯಾಗಿದೆ.
ಇದೀಗ ಮತ್ತೊಂದು ವಿಡಿಯೊ ವೈರಲ್ ಆಗುತ್ತಿದೆ, ಕಾಂತಾರ ಸಿನಿಮಾದ ‘ವರಾಹ ರೂಪಂ..’ ಹಾಡಿನ ಬಗ್ಗೆ ತೀರ್ಪು ನೀಡಿದ ನಂತರ ಕಾಂತಾರ ಸಿನಿಮಾದ ಮೇಲೆ ಕೇಸ್ ಹಾಕಿದ್ದಕ್ಕೆ ಕೇರಳದ ಸಮುದ್ರದ ನೀರು ಪಂಜುರ್ಲಿ ಖಾಲಿ ಮಾಡಿದೆ ಎಂದು ವಿಡಿಯೊ ಒಂದು ವೈರಲ್ ಆಗಿದೆ. ಇದೀಗ ಎಲ್ಲ ಕಡೆ ಸುದ್ದಿಯಾಗುತ್ತಿದೆ.
ಇದನ್ನು ಓದಿ: ಧರ್ಮದಿಂದ ಬದುಕುವವರನ್ನು ಧರ್ಮವೇ ರಕ್ಷಿಸುತ್ತದೆ, ಈ ಮಗುವಿನಿಂದ ಕಲಿಯಬೇಕಿದೆ ನೋಡಿ
ಕಾಂತಾರ ಸಿನಿಮಾ ಮೇಲೆ ಕೇಸ್ ಹಾಕಿದ್ದಕ್ಕೆ ಪಂಜುರ್ಲಿ ದೈವ ಈ ಶಿಕ್ಷೆ ನೀಡಿದೆ ಎಂದು ಹೇಳುವ ವಿಡಿಯೋ ವೈರಲ್ ಆಗಿದೆ. ಕೇರಳದ ಸಮುದ್ರದಲ್ಲಿ ನೀರು ಖಾಲಿಯಾಗಿದೆ, ಅದರ ಅಲೆಗಳು ಅಪ್ಪಳಿಸುತ್ತಿಲ್ಲ, ಈ ಕಡೆ ಕಸಗಳು ತುಂಬಿಕೊಂಡಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಆದರೆ ಇದಕ್ಕೆ ಕಾರಣ ಪಂಜುರ್ಲಿ ದೈವದ ಶಿಕ್ಷೆ ಎಂದು ವೈರಲ್ ಮಾಡಲಾಗಿದೆ. ಆದರೆ ಈ ವಿಡಿಯೊ ಎಷ್ಟು ಸತ್ಯ ಎಷ್ಟು ಸುಳ್ಳು ಎಂಬುದು ಇನ್ನೂ ತಿಳಿದಿಲ್ಲ.
ಈ ವಿಡಿಯೊವನ್ನು KA 11 LEGENDS ಎಂಬ ಪೇಜ್ ಹಂಚಿಕೊಂಡಿದೆ. ಆದರೆ ಈ ವಿಡಿಯೊವನ್ನು 2 ದಿನಗಳ ಹಿಂದೆ ಹಂಚಿಕೊಂಡಿದ್ದಾರೆ. 104,222 ಜನ ಈ ವಿಡಿಯೊವನ್ನು ಲೈಕ್ ಮಾಡಿದ್ದಾರೆ. 400ಕ್ಕೂ ಹೆಚ್ಚು ಜನ ಕಮೆಂಟ್ ಮಾಡಿದ್ದಾರೆ. ಇನ್ಸ್ಟಾ ಬಳಕೆದಾರರೂ, ಯಾರೋ ಒಬ್ಬ ತಪ್ಪು ಮಾಡಿದ್ದಕ್ಕೆ ದೇವರು ಇಡೀ ಊರಿಗೆ ಶಿಕ್ಷೆ ಕೊಡಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಬಿಟ್ಟರೆ ಕೆರಳ ರಾಜ್ಯದಲ್ಲಿ ಹೆಚ್ಚಾಗಿ ದೈವಾರಾಧನೆಯು ನಡೆಯುತ್ತದೆ . ಸುಮ್ಮನೆ ಇಲ್ಲ ಸಲ್ಲದ ತಪ್ಪು ಮಾಹಿತಿ ನೀಡಬೇಡಿ ಎಂದು ಕಮೆಂಟ್ ಮಾಡಿದ್ದಾರೆ.
ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:17 pm, Mon, 28 November 22