ಜರ್ಮನ್ ಶೆಫರ್ಡ್ ಮೊದಲ ಸಲ ಬೆಕ್ಕಿನ ಹಸುಗೂಸುಗಳನ್ನು ನೋಡಲು ಬಂದಾಗ
Kittens : ‘ಅಭಿನಂದನೆ ಬೆಕ್ಕಮ್ಮ, ಎಂಥ ಮುದ್ದಾದ ಮರಿಗಳನ್ನು ಹೆತ್ತಿದ್ದೀಯಾ. ನೀನು ಹುಷಾರಾಗಿದ್ದೀ ತಾನೆ?’ ಬೆಕ್ಕಮ್ಮ ತುಸು ಆತಂಕದಲ್ಲಿಯೇ ಹೂಂ ಎನ್ನುತ್ತಾಳೆ. ಆಕೆಯನ್ನು, ಮರಿಗಳನ್ನು ನೆಕ್ಕಿ ವಿಶ್ವಾಸ ತೋರ್ಪಡಿಸುತ್ತದೆ ಜರ್ಮನ್ ಶೆಫರ್ಡ್ ನಾಯಿ.
Viral Video : ಬೆಕ್ಕುನಾಯಿಪ್ರಿಯರು ನೀವಾಗಿದ್ದರೆ ದಿನಕ್ಕೆ ಒಮ್ಮೆಯಾದರೂ ಅವುಗಳ ವಿಡಿಯೋ ನೋಡಿಯೇ ಮಲಗುತ್ತೀರಿ. ಬಹುಶಃ ಈಗ ವೈರಲ್ ಆಗಿರುವ ಇಷ್ಟು ಮುದ್ದಾದ ವಿಡಿಯೋ ಈತನಕ ನೋಡಿಲ್ಲವೇನೋ. ಬೆಕ್ಕು ಮರಿಗಳನ್ನು ಹಾಕಿದೆ. ಜರ್ಮನ್ ಶೆಫರ್ಡ್ ಅವುಗಳನ್ನು ನೋಡಲು ಬಂದಿದೆ. ಆ ಚೆಂದದ ಕ್ಷಣಗಳನ್ನು ನೋಡಿಯೇ ಅನುಭವಿಸಬೇಕು. ಈತನಕ 15,000 ಜನರು ಈ ವಿಡಿಯೋ ನೋಡಿ ಈ ಸ್ವರ್ಗದಲ್ಲಿ ಕಳೆದುಹೋಗಿದ್ದಾರೆ.
German Shepherd puppy meets the new kittens for the first time.
ಇದನ್ನೂ ಓದಿ? https://t.co/RM6envcpjW pic.twitter.com/nrnHsiYzF2
— Danny Deraney (@DannyDeraney) November 28, 2022
ಡ್ಯಾನಿ ಡೆರಾನಿ ಎನ್ನುವವರು ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ಬಾಣಂತಿ ಬೆಕ್ಕಮ್ಮ ತನ್ನ ಮರಿಗಳೊಂದಿಗೆ ಹಾಸಿಗೆಯ ಮೇಲೆ ಮಲಗಿದ್ದಾಳೆ. ಜರ್ಮನ್ ಶೆಫರ್ಡ್ ಸ್ವಲ್ಪ ಹಿಂಜರಿಕೆಯಿಂದಲೇ ಮಂಚದ ಬಳಿ ಬಂದು ನಿಲ್ಲುತ್ತದೆ. ಅದರ ಪೋಷಕಿ ಅದನ್ನು ಹಾಸಿಗೆಯ ಮೇಲೆ ಏರಿ ಕುಳಿತುಕೊಳ್ಳಲು ಸಹಾಯ ಮಾಡುತ್ತಾಳೆ. ಇಂಚಿಂಚೇ ಸರಿದು ಮರಿಗಳ ಹತ್ತಿರ ಬರುತ್ತದೆ. ಬೆಕ್ಕಮ್ಮನನ್ನು ಮುದ್ದು ಮಾಡುತ್ತದೆ. ಆದರೆ ಬೆಕ್ಕಮ್ಮನಿಗೆ ತನ್ನ ಮರಿಗಳ ಚಿಂತೆ. ಮಿಯಾಂವ್ ಎಂದು ತನ್ನ ಆತಂಕವನ್ನು ತೋರ್ಪಡಿಸುತ್ತದೆ. ನಾ ಅಂಥವನಲ್ಲ ಎಂದು ಜರ್ಮನ್ ಶೆಫರ್ಡ್ ಬೆಕ್ಕಮ್ಮಳನ್ನು ನೆಕ್ಕುತ್ತ ವಿಶ್ವಾಸ ಗಳಿಸಿಕೊಳ್ಳುತ್ತದೆ.
ನೂರಾರು ಜನರು ಈ ಹೃದಯಸ್ಪರ್ಶಿಯಾದ ವಿಡಿಯೋ ನೋಡಿ ಭಾವುಕರಾಗಿದ್ದಾರೆ. ಸಾಮಾನ್ಯವಾಗಿ ಬೆಕ್ಕು ನಾಯಿ ಎರಡೂ ಶತ್ರುಗಳೇ. ಬೀದಿನಾಯಿಗಳಾದರೆ ಬೆಕ್ಕಿನ ಮರಿಗಳನ್ನು ಒಂದೇ ಏಟಿಗೆ ಕೊಂದುಬಿಡುತ್ತವೆ. ಆದರೆ ಸಾಕಿದ ನಾಯಿಗಳು ಹೀಗೆ ಮಾಡಲು ಸಾಧ್ಯವಿಲ್ಲ. ಅವುಗಳಿಗೆ ತಿಳಿಹೇಳಿದರೆ ಖಂಡಿತ ತನ್ನ ಸ್ವಂತಮರಿಗಳೇ ಎಂಬಂತೆ ನೋಡಿಕೊಳ್ಳುತ್ತವೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:11 am, Tue, 29 November 22