Instagram: ಪ್ರತೀ ಮನುಷ್ಯನೂ ತನ್ನ ಅನ್ನವನ್ನು ತಾನೇ ಗಳಿಸಿಕೊಳ್ಳಬೇಕು. ಆರಂಭದಲ್ಲಿ ಸೇರಿದ ಕೆಲಸ ಯಾವತ್ತೂ ಕನಸಿನ ಕೆಲಸ ಆಗಲು ಸಾಧ್ಯವೇ? ಅವಶ್ಯಕತೆ ಪೂರೈಸಿಕೊಳ್ಳಲು ದುಡಿಯಬೇಕು. ಇಂದು ಜಗತ್ಪ್ರಸಿದ್ಧರಾದ ಅನೇಕರು ಕೂಡ ಈ ಹಾದಿಯಲ್ಲಿಯೇ ಸಾಗಿದವರು ಇನ್ನು ಸಾಮಾನ್ಯರ ಪಾಡು? ಇದೀಗ ಇನ್ಸ್ಟಾಗ್ರಾಂನ ಮುಖ್ಯಸ್ಥ ಆ್ಯಡಮ್ ಮೊಸ್ಸೇರಿ (Adam Mosseri) ತಮ್ಮ ವೃತ್ತಿಜೀವನದ ಹಿನ್ನೋಟವನ್ನು ಥ್ರೆಡ್ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ಗೆ ಸುಮಾರು 2,000 ಜನರು ಲೈಕ್ ಮಾಡಿದ್ದಾರೆ. ಸುಮಾರು 260 ಜನರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : Viral Video: ಈ ಕೊಕ್ಕರೆಯಮ್ಮ ಯಾಕೆ ತನ್ನ ಮಗುವನ್ನು ಕುಕ್ಕಿ ಕುಕ್ಕಿ ಕೆಳಗೆಸೆದಳೋ?
ಆ್ಯಡಮ್ ಮೊಸ್ಸೇರಿ ತಮ್ಮ ವೃತ್ತಿಯ ಇತಿಹಾಸವನ್ನು ಥ್ರೆಡ್ (Thread) ನಲ್ಲಿ ಪೋಸ್ಟ್ ಮಾಡಿದ್ದರ ಸಾರಾಂಶ ಇಲ್ಲಿದೆ. ಒಂದು ದಿನದ ಹಿಂದೆ ಹಂಚಿಕೊಂಡ ಈ ಪೋಸ್ಟ್ ಇದೀಗ ವೈರಲ್ ಆಗಿದೆ. ಆ್ಯಡಮ್ ತಮ್ಮ ವೃತ್ತಿಜೀವನ ಆರಂಭಿಸಿದ್ದು ಹೋಟೆಲ್ ಒಂದರಲ್ಲಿ ವೇಟರ್ ಆಗಿ. ಆನಂತರ ಬಾರ್ಟೆಂಡರ್ ಆದರು. ಆಮೇಲೆ ಡಿಸೈನರ್ ತದನಂತರ ಪ್ರಾಡಕ್ಟ್ ಮ್ಯಾನೇಜರ್ ಸದ್ಯ ಇನ್ಸ್ಟಾಗ್ರಾಂನ ಮುಖ್ಯಸ್ಥರು.
ಅನೇಕರು ಈ ಪೋಸ್ಟ್ನಿಂದ ಪ್ರಭಾವಿತರಾಗಿ ತಮ್ಮ ವೃತ್ತಿ ಇತಿಹಾಸವನ್ನು ಆ್ಯಡಮ್ ಮಾದರಿಯಲ್ಲಿ ಹಂಚಿಕೊಂಡಿದ್ದಾರೆ. ನಿಜಕ್ಕೂ ಇದು ಅತ್ಯಂತ ಆಕರ್ಷಕವಾಗಿದೆ. ನೀವು ಒಂದೊಂದೇ ಹಂತಗಳನ್ನು ಏರಿರುವ ರೀತಿ ನಿಜಕ್ಕೂ ಮೆಚ್ಚುವಂಥದ್ದು ಎಂದು ಒಬ್ಬರು ಹೇಳಿದ್ದಾರೆ. ವೇಟರ್ ಆಗಿ ವೃತ್ತಿಜೀವನ ಆರಂಭಿಸಿದವರಿಗಂತೂ ಈ ಪೋಸ್ಟ್ ಸಾಕಷ್ಟು ಸ್ಫೂರ್ತಿ ತುಂಬಿದೆ. ತಮ್ಮ ಮುಂದಿನ ಪ್ರಯಾಣದ ಮೈಲುಗಲ್ಲುಗಳನ್ನು ಅವರು ಬರೆದುಕೊಂಡಿದ್ದಾರೆ. ಇಷ್ಟೆಲ್ಲಾ ಆದರೂ ಆ್ಯಡಮ್ ಟ್ರೆಂಡಿಂಗ್ನಲ್ಲಿ ಇಲ್ಲ ನೋಡಿ ಎಂದು ಒಬ್ಬರು ಹೇಳಿದ್ದಾರೆ.
ಇದನ್ನೂ ಓದಿ : Viral Video: ತ್ರೀಡಿ ಟ್ಯುಟೋರಿಯಲ್; ಈ ಕಲಾಕೃತಿ ರಚಿಸುವುದನ್ನು ತೋರಿಸಿಕೊಟ್ಟ ಮೋಹಿತ ಕಶ್ಯಪ
ಕ್ಲರ್ಕ್, ಕ್ಯಾಷಿಯರ್, ಸಹಾಯಕ, ಸಹಾಯಕ ಸ್ಟೋರ್ ಮ್ಯಾನೇಜರ್, ಹೌಸ್ ಕ್ಲೀನರ್, ಆಫೀಸ್ ಮ್ಯಾನೇಜರ್, ಸದ್ಯ ಅವಳಿ ಮಕ್ಕಳ ತಾಯಿ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಲೈಬ್ರರಿ ಬುಕ್ ಸ್ಟ್ಯಾಕರ್, ಕ್ಯಾಷಿಯರ್, ವೇಟರ್, ಬಾರ್ಟೆಂಡರ್, ಫೋಟೋಗ್ರಾಫರ್, ವಿಪಿ ಡಿಜಿಟಲ್ ಸ್ಟ್ರ್ಯಾಟಜಿ, ಡಿಜಿಟಲ್ ಏಜನ್ಸಿ ಹೆಡ್, ಪ್ರೊಡಕ್ಟ್ ಮ್ಯಾನೇಜ್ಮೆಂಟ್ ಪ್ರೊಫೆಸರ್, ಇನ್ನೋವೇಷನ್ ಕನ್ಸಲ್ಟಂಟ್, ಸಿಎಕ್ ಸ್ಟ್ರಾಟಜಿ ಡೈರೆಕ್ಟರ್. ಹೀಗೆ ಒಂದು ಹಂತಕ್ಕೆ ಬರುವ ಮುನ್ನ ತಾವು ನಿರ್ವಹಿಸಿದ ಕೆಲಸ, ಕ್ಷೇತ್ರಗಳನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ