
ನಿನ್ನೆ (ಜೂನ್ 21) ಅಂತರಾಷ್ಟ್ರಿಯ ಯೋಗ ದಿನವನ್ನು ಆರಿಸಲಾಯಿತು. ಹಲವರು ತಾವು ಯೋಗ ಅಭ್ಯಾಸದಲ್ಲಿ ತೊಡಗಿಕೊಂಡಿರುವ ವಿಡಿಯೋ ಅಥವಾ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಅಂತೆಯೇ, ಕಾಂಗ್ರೆಸ್ ಸಂಸದ ಶಶಿ ತರೂರ್ ಕೂಡಾ ಅವರ ನೆಚ್ಚಿನ ಯೋಗ ಭಂಗಿಯನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ‘ಸೋಫಾಸನ’ ಇದು ನನ್ನಿಷ್ಟದ ಯೋಗ ಭಂಗಿ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಗ್ರಾಫಿಕ್ ಫೋಟೋವನ್ನು ಹಂಚಿಕೊಂಡ ಶಶಿ ತರೂರ್, ಇದು ನನ್ನ ಪರವಾಗಿ ಮಾತನಾಡುತ್ತಿದೆ ಎಂದು ಶೀರ್ಷಿಗೆ ನೀಡಿದ್ದಾರೆ. ಸೋಫಾದ ಮೇಲೆ ಆರಾಮವಾಗಿ ಕುಳಿತು ಬೆಕ್ಕಿನ ಮರಿಯನ್ನು ಮಲಗಿಸಿಕೊಂಡು ಸಂಗೀತವನ್ನು ಕೇಳುತ್ತಿರುವುದು ದೃಶ್ಯದಲ್ಲಿ ಕಾಣಿಸುತ್ತದೆ.
ಹಾಸ್ಯ ಪ್ರಜ್ಞೆಗಾಗಿ ಕೆಲವುರು ಶಶಿ ತರೂರ್ ಅವರನ್ನು ಶ್ಲಾಘಿಸಿದ್ದಾರೆ. ಇನ್ನು ಕೆಲವರು ಗುಡ್ ಒನ್ ಸರ್… ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೋರ್ವರು, ಆರಾಮವಾಗಿರುವ ಆನಸವಿದು ಎಂದು ಹಾಸ್ಯ ಮಾಡಿದ್ದಾರೆ.
ಇದನ್ನೂ ಓದಿ:
Yoga Day 2021: ಕರ್ನಾಟಕದ 311 ಮಂಡಲಗಳ 622 ಕಡೆ ಕೊವಿಡ್ ನಿಯಮ ಅನುಸರಿಸಿ ಯೋಗ ದಿನ ಆಚರಣೆ