Trending : ಪದವಿ ಪ್ರಮಾಣಪತ್ರ ಕಳೆದಿದೆ. ಮದುವೆ ಪ್ರಮಾಣಪತ್ರ ಕಳೆದಿದೆ. ಜನನ ಪ್ರಮಾಣಪತ್ರ ಕಳೆದಿದೆ. ಹಸು ಕಳೆದಿದೆ, ಬೆಕ್ಕು ಕಳೆದಿದೆ, ನಾಯಿ ಕಳೆದಿದೆ, ಮಗು ಕಾಣೆಯಾಗಿದೆ ಇಂತೆಲ್ಲ ಜಾಹೀರಾತನ್ನು ಓದಿರುತ್ತೀರಿ. ಆದರೆ ವ್ಯಕ್ತಿಯೊಬ್ಬ ತನ್ನ ಮರಣ ಪ್ರಮಾಣಪತ್ರ ಕಳೆದಿದೆ ಎಂದು ತಾನೇ ಜಾಹೀರಾತು ಕೊಟ್ಟಿದ್ದನ್ನು ಎಲ್ಲಿಯಾದರೂ ಓದಿದ್ದೀರಾ? ಓದಿಲ್ಲವಾದರೆ ಇಲ್ಲಿ ಓದಿ. ಈ ವ್ಯಕ್ತಿಯು ಮರಣಪ್ರಮಾಣ ಪತ್ರದ ಕ್ರಮಸಂಖ್ಯೆ, ನೋಂದಣಿ ಸಂಖ್ಯೆಯನ್ನೂ ಈ ಜಾಹೀರಾತಿನಲ್ಲಿ ನೀಡಲಾಗಿದೆ. ನೆಟ್ಟಿಗರಲ್ಲಂತೂ ಇದು ತೀವ್ರ ಸಂಚಲನ ಮೂಡಿಸಿದೆ.
It happens only in #India??? pic.twitter.com/eJnAtV64aX
— Rupin Sharma (@rupin1992) September 18, 2022
ನವದೆಹಲಿಯ ಪತ್ರಿಕೆಯೊಂದರಲ್ಲಿ ರಂಜಿತ್ ಕುಮಾರ್ ಎಂಬುವವರು ನೀಡಿದ ಜಾಹೀರಾತು ಇದು. ಜಾಹೀರಾತಿನಲ್ಲಿ, ರಂಜಿತ್ ಕುಮಾರ್ ಎಂಬುವವರು ಅಸ್ಸಾಂನ ಹೋಜೈ ಜಿಲ್ಲೆಯ ಲುಮ್ಡಿಂಗ್ ಬಜಾರ್ನಲ್ಲಿ ತಮ್ಮ ಮರಣ ಪ್ರಮಾಣಪತ್ರವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ; ‘ನಾನು ಲುಮ್ಡಿಂಗ್ ಬಜಾರ್‌ನಲ್ಲಿ ದಿನಾಂಕ 7/09/22 ರಂದು ಬೆಳಿಗ್ಗೆ ಸುಮಾರು 10 ಗಂಟೆಗೆ (ನೋಂದಣಿ ಸಂಖ್ಯೆ: 93/18 SL ಕ್ರಮ ಸಂಖ್ಯೆ: 0068132) ನನ್ನ ಮರಣ ಪ್ರಮಾಣಪತ್ರವನ್ನು ಕಳೆದುಕೊಂಡಿದ್ದೇನೆ.’
ಈ ಜಾಹೀರಾತಿನ ತುಣುಕನ್ನು ಐಪಿಎಸ್ ರೂಪಿನ್ ಶರ್ಮಾ, ಇಂಥದೆಲ್ಲ ಇಂಡಿಯಾದಲ್ಲಿ ಮಾತ್ರ ನಡೆಯುವಂಥದ್ದು ಎಂದು ತಮಾಷೆ ಮಾಡುತ್ತಿದ್ದಾರೆ. ಅವರು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ ನಂತರ ವೈರಲ್ ಆಗುತ್ತಿದೆ.
ಇದು ಬಹುಶಃ ವಾಕ್ಯರಚನೆ ಮಾಡುವಾಗ ಉಂಟಾಗಿರುವ ದೋಷವಾಗಿರಬಹುದು ಎಂದು ಕೆಲವರು ಊಹಿಸಿದ್ದಾರೆ. ಜಾಹೀರಾತು ಟೈಪ್ ಮಾಡುವಾಗ ಪದಗಳೇನಾದರೂ ಬಿಟ್ಟು ಹೋಗಿದ್ದರೂ ಹೋಗಿರಬಹುದು.
ಒಟ್ಟಿನಲ್ಲಿ ನೆಟ್ಟಿಗರು ಇದು ಅಸಂಭವ! ಎಂದು ಬಿದ್ದುಬಿದ್ದು ನಗುತ್ತಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:52 pm, Mon, 26 September 22