ಮದುವೆ ದಿನದಂದು ವಧು ವರರ ದಿಬ್ಬಣದ ಕಾರುಗಳನ್ನು ಬಹಳ ಅದ್ಧೂರಿಯಾಗಿ ಅಲಂಕರಿಸುತ್ತಾರೆ. ಕೆಲವೊಬ್ಬರು ಗುಲಾಬಿ ಹೂವುಗಳಿಂದ ಸಿಂಪಲ್ ಆಗಿ ಕಾರುಗಳನ್ನು ಅಲಂಕಾರ ಮಾಡಿದರೆ ಇನ್ನೂ ಕೆಲವರು ವಿಭಿನ್ನ ಥೀಮ್ ಗಳನ್ನು ಇಟ್ಟುಕೊಂಡು ಕಾರುಗಳನ್ನು ಚಂದವಾಗಿ ಅಲಂಕರಿಸುತ್ತಾರೆ. ಹೀಗೆ ಮದುವೆಯ ದಿಬ್ಬಣದ ಕಾರನ್ನು ಹೂವುಗಳಿಂದ ವೈಭವೋಪೇತವಾಗಿ ಡೆಕೋರೆಟ್ ಮಾಡ್ತಾರೆ.ಆದ್ರೆ ಇಲ್ಲೊಂದು ದಿಬ್ಬಣದ ಕಾರನ್ನು ಮಾತ್ರ ಚಿಪ್ಸ್ ಪ್ಯಾಕೆಟ್ ಗಳಿಂದ ಅದ್ಧೂರಿಯಾಗಿ ಅಲಂಕರಿಸಲಾಗಿದ್ದು, ದಿಬ್ಬಣದ ವಾಹನದ ಈ ವಿಚಿತ್ರ ಡೆಕೊರೇಷನ್ ಕಂಡು ನೋಡುಗರು ಆಶ್ಚರ್ಯಚಕಿತರಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮದುಮಗ ಚಿಪ್ಸ್ ಗಳಿಂದ ಅಲಂಕರಿಸಲ್ಪಟ್ಟ ದಿಬ್ಬಣದ ಕಾರಿನಲ್ಲಿ ಅದ್ಧೂರಿಯಾಗಿ ಪ್ರವೇಶಿಸುತ್ತಿರುವ ದೃಶ್ಯವನ್ನು ಕಾಣಬಹುದು. ಈ ವಿಡಿಯೋವನ್ನು @desimojito ಎಂಬ ಹೆಸರಿನ X ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
Dulha chakhna sath laya hai pic.twitter.com/9lAq7HCsal
— desi mojito 🇮🇳 (@desimojito) February 15, 2024
ವೈರಲ್ ವಿಡಿಯೋದಲ್ಲಿ ಯಾವುದೋ ಒಂದು ಮದುವೆ ಕಾರ್ಯಕ್ರಮದಲ್ಲಿ ಮದುಮಗನ ದಿಬ್ಬಣದ ವಾಹನವನ್ನು ಸಂಪೂಣರ್ವಾಗಿ ಚಿಪ್ಸ್ ಪ್ಯಾಕೆಟ್ ಗಳು ಮತ್ತು ಒಂದಷ್ಟು ಗುಲಾಬಿ ಹೂವುಗಳಿಂದ ಅಲಂಕರಿಸಿರುವುದನ್ನು ಕಾಣಬಹುದು. ವಿಶಿಷ್ಟವಾಗಿ ಅಲಂಕರಿಸಲಾದ ಈ ದಿಬ್ಬಣದ ವಾಹನದಲ್ಲಿ ವರ ಮದುವೆ ಮಂಟಪಕ್ಕೆ ಪ್ರವೇಶಿಸಿದ್ದಾನೆ.
ಇದನ್ನೂ ಓದಿ: ಕೈ ಹಿಡಿದು ಸುತ್ತುವುದು ಪ್ರೇಮವಲ್ಲ, ಜೀವನದ ಪ್ರತಿ ಹಂತದಲ್ಲೂ ಈ ರಿಯಲ್ ಜೋಡಿಯಂತಿರಬೇಕು
ಫೆಬ್ರವರಿ 15 ರಂದು ಹಂಚಿಕೊಳ್ಳಲಾದ ಈ ವಿಡಿಯೋ 93 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನೀವು ಕಿರಾಣಿ ಅಂಗಡಿಯನ್ನು ನಡೆಸುತ್ತಿರುವ ವ್ಯಕ್ತಿಯನ್ನು ಮದುವೆಯಾದ್ರೆ ಹೀಗೆ ಆಗೋದುʼ ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಬಹುಶಃ ಇದು ಬಾಲ್ಯ ವಿವಾಹ ಇರಬೇಕು, ಅದಕ್ಕಾಗಿ ದಿಬ್ಬಣದ ವಾಹನವನ್ನು ಚಿಪ್ಸ್ ಪ್ಯಾಕೆಟ್ ಗಳಿಂದ ಅಲಂಕರಿಸಿದ್ದಾರೆʼ ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼ ಅದು ಬ್ಯಾಚುಲರ್ ಪಾರ್ಟಿಯಲ್ಲಿ ಮಿಕ್ಕಿರುವಂತಹ ಚಿಪ್ಸ್ ಪೊಟ್ಟಣ ಇರ್ಬೇಕುʼ ಎಂದು ತಮಾಷೆ ಮಾಡಿದ್ದಾರೆ. ಇನ್ನೂ ಅನೇಕರು ಇದು ದಿಬ್ಬಣದ ಗಾಡಿಯೋ ಅಥವಾ ಪೆಟ್ಟಿ ಅಂಗಡಿಯೋ ಎಂದು ಕನ್ಫ್ಯೂಸ್ ಆಗಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ