ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಡುವೆ ಭೀಕರ ಯುದ್ಧವೇ ನಡೆಯುತ್ತಿದೆ. ಹಮಾಸ್ ಉಗ್ರಗಾಮಿ ಗುಂಪನ್ನು ಹೊಡೆದುರಿಳಿಸಲು ಇಸ್ರೇಲ್ ಕೆಲ ದಿನಗಳ ಹಿಂದೆಯಷ್ಟೇ ಮತ್ತೊಂದು ಬಾರಿ ಪ್ಯಾಲೆಸ್ತೀನ್ ಮೇಲೆ ವೈಮಾನಿಕ ದಾಳಿಯನ್ನು ನಡೆಸಿತ್ತು. ಇಸ್ರೇಲ್ ದಾಳಿಯಿಂದ ಅಮಾಯಕ ಜನರು, ಮಕ್ಕಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಹಲವರು ಪ್ಯಾಲೆಸ್ತೀನ್ ಪರವಾಗಿ ಮತನಾಡುತ್ತಿದ್ದಾರೆ. ಆದರೆ ಇದೀಗ ಆಘಾತಕಾರಿ ವಿಡಿಯೋವೊಂದು ವೈರಲ್ ಆಗಿದ್ದು, ಪ್ಯಾಲೆಸ್ತೀನ್‌ನ ಇಬ್ಬರು ಪುಟ್ಟ ಹುಡುಗರು ಸುಮ್ಮನೆ ತಮ್ಮ ಪಾಡಿಗೆ ನಿಂತಿದ್ದ ಇಸ್ರೇಲ್ ಪೊಲೀಸ್ ಅಧಿಕಾರಿಗಳ ಮೇಲೆ ಚಾಕು ಚುಚ್ಚಲು ಮುಂದಾಗಿದ್ದಾರೆ. ತಮ್ಮ ಜೀವವನ್ನು ಉಳಿಸಲು ಅಧಿಕಾರಿಗಳು ಮಕ್ಕಳಿಬ್ಬರ ಮೇಲೆ ಗುಂಡಿನ ದಾಳಿ ನಡೆಸಿ ಅವರನ್ನು ಹೊಡೆದುರುಳಿಸಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಮರೀನಾ ಮೆಡ್ವಿನ್ (MarinaMedvin) ಎಂಬವರು ಈ ಕುರಿತ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಪ್ಯಾಲೆಸ್ತೀನ್ ಹುಡುಗರು ಇಸ್ರೇಲ್ ಪೊಲೀಸ್ ಅಧಿಕಾರಿಗಳ ಮೇಲೆ ಚಾಕುವಿನಿಂದ ದಾಳಿ ಮಾಡಲು ಬಂದ ಕಾರಣಕ್ಕೆ ಅವರ ಮೇಲೆ ಗುಂಡು ಹಾರಿಸಿದರು. ಆದ್ರೆ ಎಲ್ಲರೂ ಇಸ್ರೇಲ್ ಬೇಕಂತಲೇ ಪ್ಯಾಲೆಸ್ತೀನ್ ಮಕ್ಕಳನ್ನು ಕೊಲ್ಲುತ್ತಿದೆ ಎಂದು ಹೇಳುತ್ತಾರೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕೈಯಲ್ಲಿ ಚಾಕು ಹಿಡಿದು ಬಂದಂತಹ ಇಬ್ಬರು ಪ್ಯಾಲೆಸ್ತೀನ್ ಹುಡುಗರು ಇಸ್ರೇಲ್‌ನ ಪೊಲೀಸ್ ಅಧಿಕಾರಿಗಳ ಮೇಲೆ ದಾಳಿ ಮಾಡಲು ಮುಂದಾಗುವಂತಹ ದೃಶ್ಯವನ್ನು ಕಾಣಬಹುದು. ಆ ಸಂದರ್ಭದಲ್ಲಿ ತಮ್ಮ ಪ್ರಾಣ ಉಳಿಸಿಕೊಳ್ಳಲು ಅಧಿಕಾರಿಗಳು ಆ ಇಬ್ಬರು ಮಕ್ಕಳ ಮೇಲೆ ಗುಂಡಿನ ದಾಳಿ ನಡೆಸಿ ಅವರನ್ನು ಹೊಡೆದುರುಳಿಸಿದ್ದಾರೆ.
ಅಕ್ಟೋಬರ್ 17 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5.5 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈಗ ನೋಡ್ತಾ ಇದ್ದೇವೆ ಪ್ಯಾಲೆಸ್ತೀನ್‌ನ ಮಕ್ಕಳು ಎಷ್ಟು ಮುಗ್ಧರೆಂದುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ವಿಡಿಯೋವನ್ನು ಕೆಲ ತಿಂಗಳುಗಳ ಹಿಂದೆ ನಾನು ನೋಡಿದ್ದೇನೆ. ಇದು ಬ್ರೆಜಿಲ್‌ನಲ್ಲಿ ನಡೆದ ಘಟನೆಯಾಗಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ