Video: ಹಿಮವೀರರ ಜೋಶ್​​; ಹಿಮದ ಮೇಲೆ, ನಡುಗುವ ಚಳಿಯಲ್ಲಿ ಕಬಡ್ಡಿ ಆಡಿ ಖುಷಿಪಟ್ಟ ಐಟಿಬಿಪಿ ಯೋಧರು

| Updated By: Lakshmi Hegde

Updated on: Mar 13, 2022 | 4:09 PM

ಐಟಿಬಿಪಿ ಯೋಧರು ಬಿಳಿ ಬಣ್ಣದ, ಪ್ಯಾಡೆಡ್​ ಜಾಕೆಟ್​ಗಳನ್ನು ಧರಿಸಿ, ಗಟ್ಟಿಯಾದ ಬೂಟುಗಳನ್ನು ಹಾಕಿಕೊಂಡು ಫುಲ್ ಖುಷಿಯಿಂದ ಕಬಡ್ಡಿ ಆಡಿದ್ದಾರೆ. ವಿಡಿಯೋವನ್ನು ಐಟಿಬಿಪಿ ಕೂಡ ತನ್ನ ಟ್ವಿಟರ್​ ಅಕೌಂಟ್​​ನಲ್ಲಿ ಶೇರ್ ಮಾಡಿಕೊಂಡಿದೆ.

Video: ಹಿಮವೀರರ ಜೋಶ್​​; ಹಿಮದ ಮೇಲೆ, ನಡುಗುವ ಚಳಿಯಲ್ಲಿ ಕಬಡ್ಡಿ ಆಡಿ ಖುಷಿಪಟ್ಟ ಐಟಿಬಿಪಿ ಯೋಧರು
ಕಬಡ್ಡಿ ಆಡಿದ ಹಿಮವೀರರು
Follow us on

ಹಿಮವೀರರು ಎಂದೇ ಕರೆಯಲ್ಪಡುವ ಇಂಡೋ ಟಿಬೆಟಿಯನ್​ ಬಾರ್ಡರ್​ ಪೊಲೀಸರು, (ITBP), ಹಿಮಾಚ್ಛಾದಿತ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಯೋಧರ ವಿವಿಧ ವಿಡಿಯೋಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ತಾವಿದ್ದಲ್ಲಿ ಕರ್ತವ್ಯ ನಿಭಾಯಿಸುತ್ತ, ಅಲ್ಲಿಯೇ ಆಟ, ಮನರಂಜನೆಯಲ್ಲಿ ತೊಡಗಿಕೊಳ್ಳುತ್ತ, ಸ್ವಾತಂತ್ರ್ಯೋತ್ಸವ, ಆರ್ಮಿ ಡೇ ಇತರ ವಿಶೇಷ ದಿನಗಳನ್ನು ಖುಷಿಯಿಂದ ಆಚರಿಸುವ ಈ ಹಿಮವೀರರ ಇನ್ನೊಂದು ವಿಡಿಯೋ ಇದೀಗ ಸಿಕ್ಕಾಪಟೆ ವೈರಲ್​ ಆಗುತ್ತಿದೆ. ಹಿಮಾಚಲ ಪ್ರದೇಶದಲ್ಲಿ ತಣ್ಣನೆಯ, ಶ್ವೇತಬಣ್ಣದಿಂದ ಕಂಗೊಳಿಸುತ್ತಿರುವ ಹಿಮದಲ್ಲಿ, ಕೊರೆವ ಚಳಿಯಲ್ಲಿ 15-20 ಜನಯೋಧರು ಸೇರಿ ಕಬಡ್ಡಿ ಆಡಿದ್ದಾರೆ. ಈ ವಿಡಿಯೋವನ್ನು ಎಎನ್​ಐ ಸುದ್ದಿ ಸಂಸ್ಥೆಯೂ ಹಂಚಿಕೊಂಡಿದೆ. ಹಾಗೇ ನೆಟ್ಟಿಗರೂ ತುಂಬ ಖುಷಿಯಿಂದ ಶೇರ್​ ಮಾಡಿಕೊಳ್ಳುತ್ತಿದ್ದಾರೆ.

ಐಟಿಬಿಪಿ ಯೋಧರು ಬಿಳಿ ಬಣ್ಣದ, ಪ್ಯಾಡೆಡ್​ ಜಾಕೆಟ್​ಗಳನ್ನು ಧರಿಸಿ, ಗಟ್ಟಿಯಾದ ಬೂಟುಗಳನ್ನು ಹಾಕಿಕೊಂಡು ಫುಲ್ ಖುಷಿಯಿಂದ ಕಬಡ್ಡಿ ಆಡಿದ್ದಾರೆ. ವಿಡಿಯೋವನ್ನು ಐಟಿಬಿಪಿ ಕೂಡ ತನ್ನ ಟ್ವಿಟರ್​ ಅಕೌಂಟ್​​ನಲ್ಲಿ ಶೇರ್ ಮಾಡಿಕೊಂಡಿದೆ. ಕೆಲವು ವಾರಗಳ ಹಿಮದೆ ಐಟಿಬಿಪಿ ಯೋಧರು ಹಿಮದಲ್ಲಿಯೇ ವಾಲಿಬಾಲ್ ಆಡಿದ ವಿಡಿಯೋ ಸಿಕ್ಕಾಪಟೆ ವೈರಲ್ ಆಗಿತ್ತು. ಇವರು ಭಾರತ-ಚೀನಾ ಗಡಿಯಲ್ಲಿ, 15 ಸಾವಿರ ಅಡಿ ಎತ್ತರದಲ್ಲಿ -20 ಡಿಗ್ರಿ ಸೆಲ್ಸಿಯಸ್​ ಚಳಿಯಲ್ಲಿ ವಾಲಿಬಾಲ್ ಆಡಿದ್ದರು. ಪ್ರಸ್ತುತ ಕಬಡ್ಡಿ ನೋಡಿದ ನೆಟ್ಟಿಗರು ಯೋಧರಿಗೊಂದು ಸಲಾಂ ಹೇಳಿದ್ದಾರೆ. ಅಂದಹಾಗೆ, ಇದೇ ಚಳಿಯಲ್ಲೇ ಅವರಿಗೆ ಕಠಿಣ ತರಬೇತಿಗಳನ್ನೂ ನೀಡಲಾಗುತ್ತದೆ. ಅವರ ಜೀವನವೇ ಈ ಪ್ರದೇಶದಲ್ಲಿ ನಡೆಯುತ್ತಿರುತ್ತದೆ. ಶತ್ರುಗಳ ವಿರುದ್ಧ ದೇಶವನ್ನು ಕಾಪಾಡಲು ಅವರು ಸದಾ ಮೈಮೇಲೆ ಅಪಾಯ ಎಳೆದುಕೊಂಡೇ ಬದುಕುತ್ತಿರುತ್ತಾರೆ.

ಇದನ್ನೂ ಓದಿ: Video: ರಷ್ಯಾದಲ್ಲಿ ಮಳಿಗೆಗಳನ್ನು ಮುಚ್ಚುವುದಾಗಿ ಹೇಳಿದ ಮೆಕ್ ಡೊನಾಲ್ಡ್​​​; ಗಡಿಬಿಡಿಯಿಂದ ಹೊರಟ ಗ್ರಾಹಕರು, ಕಾರುಗಳ ಉದ್ದನೆ ಸಾಲು !

Published On - 4:09 pm, Sun, 13 March 22