ಜಪಾನಿನ ಕೊನೊಮಿಯಾ ಎಂಬ ಧಾರ್ಮಿಕ ಕೇಂದ್ರವು ಪ್ರತಿವರ್ಷ ಬೆತ್ತಲೆ ಹಬ್ಬ ಎಂದೇ ಪ್ರಸಿದ್ಧಿ ಪಡೆದಿರುವ ಹಡಕ ಮತ್ಸುರಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತದೆ. 1650 ವರ್ಷಗಳ ಇತಿಹಾಸವಿರುವ ಈ ವಿಶೇಷ ಉತ್ಸವದಲ್ಲಿ ಕೇವಲ ಪುರುಷರಿಗೆ ಮಾತ್ರ ಭಾಗವಹಿಸಲು ಅವಕಾಶವಿತ್ತು. ಆದರೆ ಇದೇ ಮೊದಲ ಬಾರಿಗೆ ಮಹಿಳೆಯರಿಗೂ ಈ ಉತ್ಸವದಲ್ಲಿ ಭಾಗವಹಿಸಲು ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಲಿಂಗ ಸಮಾನತೆಯ ಸಲುವಾಗಿ ಈ ಒಂದು ಮಹತ್ತರದ ಹೆಜ್ಜೆಯನ್ನು ತೆಗೆದುಕೊಳ್ಳಲಾಗಿದೆ ಎಂದು ಕೊನೊಮಿಯಾ ಧಾರ್ಮಿಕ ಕೇಂದ್ರ ತಿಳಿಸಿದೆ. ಕೆಲವು ಷರತ್ತುಗಳ ಜೊತೆಗೆ ಇದೇ ಮೊದಲ ಬಾರಿಗೆ ಕೇವಲ 40 ಮಹಿಳೆಯರಿಗೆ ಮಾತ್ರ ಈ ಉತ್ಸವದಲ್ಲಿ ಭಾಗವಹಿಸಲು ಅವಕಾಶವನ್ನು ನೀಡಲಾಗಿದೆ.
ಸ್ಥಳೀಯ ಭಾಷೆಯಲ್ಲಿ ಹಡಕ ಮತ್ಸುರಿ ಎಂದು ಕರೆಯಲ್ಪಡುವ ಈ ಹಬ್ಬವು ಜಪಾನಿನ ಐಚಿ ಪ್ರಾಂತ್ಯದ ಇನಾಜಾವಾ ಪಟ್ಟಣದಲ್ಲಿರುವ ಕೊನೊಮಿಯ ಎಂಬ ಜಪಾನಿಯರ ಧಾರ್ಮಿಕ ಕೇಂದ್ರವು ಆಯೋಜಿಸುವಂತಹ ಸಾಂಪ್ರದಾಯಿಕ ಉತ್ಸವವಾಗಿದೆ. ಸಂಪ್ರದಾಯದಂತೆ ಪುರುಷರು ಫಂಡೋಶಿ ಎಂದು ಕರೆಯಲ್ಪಡುವ ಜಪಾನೀಸ್ ಲೋನ್ಕ್ಲೋತ್ ಮತ್ತು ಟ್ಯಾಬಿ ಎಂದು ಕರೆಯಲ್ಪಡುವ ಒಂದು ಜೋಡಿ ಬಿಳಿ ಸಾಕ್ಸ್ಗಳನ್ನು ಧರಿಸಿ ಈ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಈ ವರ್ಷ ಫೆಬ್ರವರಿ 22 ರಂದು ನೇಕೆಡ್ ಮ್ಯಾನ್ ಉತ್ಸವವು ನಡೆಯಲಿದ್ದು, ಸುಮಾರು 10,000 ಸ್ಥಳೀಯ ಪುರುಷರು ಭಾಗವಹಿಸುವ ನಿರೀಕ್ಷೆಯಿದೆ. ಜೊತೆಗೆ ಈ ಬಾರಿ 40 ಮಹಿಳೆಯರಿಗೂ ಉತ್ಸವದಲ್ಲಿ ಭಾಗಿಯಾಗಲು ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. .
ಇದನ್ನೂ ಓದಿ: 7 ಸೆಕೆಂಡುಗಳಲ್ಲಿ ಚಿತ್ರದಲ್ಲಿ ಅಡಗಿರುವ 2 ಬೆಕ್ಕುಗಳನ್ನು ಹುಡುಕಬಲ್ಲಿರಾ?
ಜಪಾನಿನ ಸ್ಥಳೀಯ ಭಾಷೆಯಲ್ಲಿ ಹಡಕ ಮತ್ಸುರಿ ಎಂದು ಕರೆಯಲ್ಪಡುವ ನೇಕೆಡ್ ಮ್ಯಾನ್ ಉತ್ಸವವವು, ಜಪಾನಿನ ಸುಗ್ಗಿಯ ಹಬ್ಬವಾಗಿದೆ. ಯುವಕರಲ್ಲಿ ಕೃಷಿಯತ್ತ ಒಲವು ಮೂಡಿಸಲು ಈ ಹಬ್ಬವನ್ನು ಪ್ರತಿವರ್ಷ ಫೆಬ್ರವರಿ ತಿಂಗಳಿನಲ್ಲಿ ಆಚರಿಸಲಾಗುತ್ತದೆ. ಸುಮಾರು 1650 ವರ್ಷಗಳ ಇತಿಹಾಸವಿರುವ ಈ ಹಬ್ಬದಲ್ಲಿ ಪುರುಷರು ಕನಿಷ್ಟ ಉಡುಗೆಯನ್ನು ತೊಟ್ಟು ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಈ ಹಬ್ಬದಲ್ಲಿ ಪುರುಷರು ಫಂಡೋಶಿ ಎಂದು ಕರೆಯಲ್ಪಡುವ ಜಪಾನೀಸ್ ಲೋನ್ಕ್ಲೋತ್ ಮತ್ತು ಟ್ಯಾಬಿ ಎಂದು ಕರೆಯಲ್ಪಡುವ ಒಂದು ಜೋಡಿ ಬಿಳಿ ಸಾಕ್ಸ್ ಧರಿಸಿ ಧಾರ್ಮಿಕ ಕೇಂದ್ರದ ಸುತ್ತಲೂ ಸಂಚರಿಸಿ ನಂತರ ತಮ್ಮ ದೇಹವನ್ನು ತಣ್ಣೀರಿನಿಂದ ಶುದ್ಧೀಕರಿಸಿ ಧಾರ್ಮಿಕ ಕೇಂದ್ರದ ಒಳಗೆ ಪ್ರವೇಶಿಸುತ್ತಾರೆ. ನಂತರ ಈ ಉತ್ಸವದಲ್ಲಿ ಭಾಗವಹಿಸುವ ಪುರುಷರು ಎರಡು ಅದೃಷ್ಟದ ಕೋಲುಗಳನ್ನು ಹುಡುಕಬೇಕಾಗುತ್ತದೆ. ಈ ಅದೃಷ್ಟದ ಕೋಲುಗಳನ್ನು ಹುಡುಕುವುದು ಅತ್ಯಂತ ಕಷ್ಟಕರ ಕೆಲಸವಾಗಿದ್ದು, ಕೊನೆಯಲ್ಲಿ ಅದೃಷ್ಟವಂತರಿಗೆ ಈ ಕೋಲು ಸಿಗುತ್ತದೆ. ಈ ಅದೃಷ್ಟದ ಕೋಲನ್ನು ಗುರುತಿಸುವ ವ್ಯಕ್ತಿಯನ್ನು ʼಶಿನ್-ಒಟೊಕೊʼ ಎಂದು ಕರೆಯಲಾಗುತ್ತದೆ. ಮತ್ತು ಅವರು ಇಡೀ ವರ್ಷ ಅದೃಷ್ಟವಂತರಾಗಿರುತ್ತಾರೆ ಎಂಬ ನಂಬಿಕೆಯೂ ಇದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:48 pm, Wed, 24 January 24