Japan : ಉತ್ತರ ಕರ್ನಾಟಕದ ಕಡೆ ಹೋದರೆ ಇದು ಅನ್ನ ಬೇಳೆ. ಉತ್ತರ ಭಾರತದ ಕಡೆ ಹೋದರೆ ಇದು ದಾಲ್ ಚಾವಲ್ (Dal Chawal) ಬೆಂಗಳೂರಿನಲ್ಲಿ ರೈಸ್ ದಾಲ್ (Rice Dal)! ಉಳಿದ ಯಾವ ಪದಾರ್ಥವೂ ಇಲ್ಲದಿದ್ದರೆ ನಡೆಯುತ್ತದೆ. ಊಟಕ್ಕೆ ಈ ಸರಳ ಮತ್ತು ಪೌಷ್ಠಿಕವಾದ ಖಾದ್ಯ ಮಾತ್ರ ಇರಲೇಬೇಕು. ಇದೀಗ ಇದು ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ. ಅನ್ನದಿಂದ ಮಾಡುವ ಸುಶಿ ಎಂಬ ಜಪಾನೀ ಖಾದ್ಯದ ಬಗ್ಗೆ ನಿಮಗೆ ಗೊತ್ತಿರಬಹುದು. ಅನ್ನದ ರೋಲ್ನಲ್ಲಿ ಮೀನುಗಳನ್ನು ಹಾಕುತ್ತಾರೆ ಇಲ್ಲವೇ ತರಕಾರಿಗಳನ್ನೂ ಹಾಕುತ್ತಾರೆ. ಆದರೆ ಇದೀಗ ವೈರಲ್ ಆಗಿರುವ ಈ ರೋಲ್ಜೊತೆ ಬೇಳೆ ಪದಾರ್ಥವನ್ನೂ ಬಡಿಸಿದ್ದಾರೆ ಅನುಶ್ರೀ ಎಂಬ ಇನ್ಸ್ಟಾಗ್ರಾಂ ಖಾತೆದಾರರು. ನೆಟ್ಟಿಗರಂತೂ ಸಿಟ್ಟಿಗೆದ್ದಿದ್ದಾರೆ, ಇದು ನಮ್ಮ ಅನ್ನ ಮತ್ತು ಬೇಳೆಗೆ ಮಾಡುವ ಅವಮಾನ ಎಂದು.
ಓಹ್ ದೇವರೇ! ಅನ್ನ ಮತ್ತು ಬೇಳೆಯಿಂದ ನಾನು ಸುಶಿ ತಯಾರಿಸಿದೆ ಎಂದು ಅನುಶ್ರೀ ವಿಡಿಯೋಗೆ ಒಕ್ಕಣೆ ಬರೆದಿದ್ದಾರೆ. ಇದಕ್ಕೆ ಉಪಯೋಗಿಸಿದ ಸಾಮಗ್ರಿಗಳ ಪಟ್ಟಿಯನ್ನೂ ನೀಡಿದ್ದಾರೆ; ಅಕ್ಕಿ, ದಾಳಿಂಬೆ ಮತ್ತು ಬೆಳ್ಳುಳ್ಳಿ ಚಟ್ನಿ, ಈರುಳ್ಳಿ ಮತ್ತು ಬೇಳೆ. ಆದರೆ ನೆಟ್ಟಿಗರು, “ದಯವಿಟ್ಟು ಅಡುಗೆಯನ್ನು ಈ ರೀತಿ ಅವಮಾನಿಸಬೇಡಿ” ಎಂದಿದ್ದಾರೆ. “ನಾನಂತೂ ಕೂತು ಅಳುತ್ತಿದ್ದೇನೆ, ದಯವಿಟ್ಟು ಹೀಗೆಲ್ಲ ಪ್ರಯೋಗ ಮಾಡಬೇಡಿ” ಎಂದು ಮತ್ತೊಬ್ಬರು.
ಇದನ್ನೂ ಓದಿ : Viral Video: ವಿಶೇಷ ಮಕ್ಕಳ ಕ್ಷೌರದಂಗಡಿ; ಮನದುಂಬಿ ಪ್ರತಿಕ್ರಿಯಿಸುತ್ತಿರುವ ಬಿಲ್ಲಿಯ ಗ್ರಾಹಕರು
ಬೇಡ ಬೇಡ ಬೇಡವೇ ಬೇಡ ಎಂದು ಅನೇಕರು ಹೇಳಿದ್ದಾರೆ. ಆಹಾ ಎಂಥಾ ವಿಶಿಷ್ಟ ಪರಿಕಲ್ಪನೆ, ನಿಮ್ಮ ಸೃಜನಶೀಲತೆಯನ್ನು ಪ್ರೀತಿಸುತ್ತಿದ್ದೇನೆ ಎಂದು ಕೆಲವರು ಮಾತ್ರ ಹೇಳಿದ್ದಾರೆ. ಈತಕ ಸುಮಾರು 2 ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ. ಈ ಪ್ರಯೋಗದ ಬಗ್ಗೆ ನಿಮ್ಮ ಅನಿಸಿಕೆ ಏನು? ಇದು ಜಪಾನಿನ ಸುಶಿಯೋ ಭಾರತದ ಅನ್ನ ಬೇಳೆಯೋ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:45 am, Mon, 3 July 23