ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದೆನಿಸಿಕೊಂಡಿದ್ದ ಜಾನ್ ಆಲ್ಫ್ರೆಡ್ ಟಿನ್ನಿಸ್ವುಡ್(112) ಸೋಮವಾರ (ನ.25)ರಂದು ನಿಧನ ಹೊಂದಿರುವುದಾಗಿ ವರದಿಯಾಗಿದೆ. ಈ ವರ್ಷದ ಏಪ್ರಿಲ್‌ನಲ್ಲಿ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದು ದಾಖಲೆ ಬರೆದಿದ್ದ ಆಲ್ಫ್ರೆಡ್ ಟಿನ್ನಿಸ್ವುಡ್ ತನ್ನ 112ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದ ಇಂಗ್ಲೆಂಡ್‌ನ ಲಿವರ್‌ಪೂಲ್ ಕೇರ್ ಹೋಮ್ನಲ್ಲಿ ಕೊನೆಯುಸಿರೆಳೆದಿದ್ದಾರೆ.
1912, ಆಗಸ್ಟ್ 26 ರಂದು ಜನಿಸಿದ ಜಾನ್ ಟಿನ್ನಿಸ್ವುಡ್ ಅವನು ತನ್ನ ಜೀವಿತಾವಧಿಯಲ್ಲಿ ಎರಡು ಮಹಾಯುದ್ಧಗಳನ್ನು ಕಂಡಿದ್ದಾರೆ. ಎರಡನೆಯ ಮಹಾಯುದ್ಧದ ಸಮಯದಲ್ಲಿ ಅವರು ಬ್ರಿಟಿಷ್ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದರು. ಲೆಕ್ಕಪರಿಶೋಧಕರಾಗಿ ನಿವೃತ್ತರಾದ ಬಳಿಕ ಆರೋಗ್ಯಕರ ಜೀವನ ಶೈಲಿಯನ್ನು ಕಾಪಾಡಿಕೊಂಡಿದ್ದರು. ಧೂಮಪಾನ ಮಾಡುವ ಅಭ್ಯಾಸವಿರಲ್ಲಿಲ್ಲ, ಅದರಂತೆ ಮಿತವಾಗಿ ಮದ್ಯ ಸೇವಿಸುತ್ತಿದ್ದರು ಎಂದು ಅವರು ಕುಟುಂಬಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ: ಜೈಲಿಂದ ಬಿಡುಗಡೆಯಾದ ಖುಷಿಯಲ್ಲಿ ಯುವಕನ ಸಖತ್ ಬ್ರೇಕ್ ಡಾನ್ಸ್; ವಿಡಿಯೋ ವೈರಲ್
ಇದೀಗ ಇವರ ಸಾವಿನ ಕುರಿತು ಗಿನ್ನೆಸ್ ವಿಶ್ವ ದಾಖಲೆಯ ಅಧಿಕೃತ ಇನ್ಸಗ್ರಾಮ್ ಖಾತೆಯಲ್ಲಿ ಫೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಸದ್ಯ ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:10 pm, Thu, 28 November 24