ಹಿಂದಿನ ಕಾಲದಲ್ಲಿ ಹೆಚ್ಚಾಗಿ ಹಳ್ಳಿ ಕಡೆಗಳಲ್ಲಿ ಸಣ್ಣ ವಯಸ್ಸಿನ ಹುಡುಗರೆಲ್ಲಾ ಗುಂಪು ಕಟ್ಟಿಕೊಂಡು ಮರ ಕೋತಿ, ಮರವೇರುವ ಆಟವನ್ನೆಲ್ಲಾ ಆಡ್ತಾ ಇದ್ರು. ಇಂತಹ ಹಳ್ಳಿ ಆಟಗಳ ಮಜಾನೇ ಬೇರೆ. ಇಂದಿನ ದಿನಗಳಲ್ಲಿ ಇಂತಹ ಆಟಗಳು ಕಣ್ಮರೆಯಾಗುತ್ತಿದೆ. ಅಂತದ್ರಲ್ಲಿ ಇಲ್ಲೆರಡು ಕರಡಿಗಳು ಕಾಡಿನಲ್ಲಿ ಮರವೇರಿ ಮರಕೋತಿ ಆಟವಾಡಿವೆ. ಈ ಮುದ್ದಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಮರಿ ಕರಡಿಯ ತುಂಟತನಕ್ಕೆ ಪ್ರಾಣಿ ಪ್ರಿಯರು ಮನಸೋತಿದ್ದಾರೆ.
ಈ ವಿಡಿಯೋವನ್ನು ಭಾರತೀಯ ಅರಣ್ಯಧಿಕಾರಿ ಪರ್ವೀನ್ ಕಸ್ವಾನ್ (@ParveenKaswan) ಅವರು ತಮ್ಮ ಅಧೀಕೃತ ಎಕ್ಸ್ ಖಾತೆಯಲ್ಲಿ “ಕರಡಿಗಳು ಮರ ಹತ್ತಲು ಸಾಧ್ಯವಿಲ್ಲ ಎಂದು ಹೇಳ್ತಾರೆ, ಆದರೆ ಇಲ್ಲಿ ತಾಯಿ ಮತ್ತು ಮರಿ ಕರಡಿ ಮರವೇರಿ ಕುಳಿತಿವೆ; ನಿನ್ನೆ ಈ ದೃಶ್ಯವನ್ನು ಸೆರೆ ಹಿಡಯಲಾಗಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
You all must have heard story how a friend saved his life from Bear by climbing a tree. Here a Himalayan Black Bear mother and cub showing how our childhood was a lie !! Captured this yesterday. pic.twitter.com/15pLH1D6HX
— Parveen Kaswan, IFS (@ParveenKaswan) May 9, 2024
ವೈರಲ್ ವಿಡಿಯೋದಲ್ಲಿ ತಾಯಿ ಕರಡಿ ಹಾಗೂ ಮರಿ ಕರಡಿ ಮರವೇರಿ ಕುಳಿತಿರುವ ದೃಶ್ಯವನ್ನು ಕಾಣಬಹುದು. ನಂತರ ತಾಯಿ ಕರಡಿ ಜೋಪಾನ ಕಣೋ ಬಿದ್ಬಿಟ್ಟೀಯಾ ಎಂದು ಹೇಳುತ್ತಾ ನಿಧಾನಕ್ಕೆ ಮರದಿಂದ ಕೆಳಗೆ ಇಳಿದಿವೆ. ಬಳಿಕ ಮರಿ ಕರಡಿ ಇನ್ನೂ ಸ್ವಲ್ಪ ಆಟವಾಡ್ತೀನಿ ಅಮ್ಮಾ ಎಂದು ಹೇಳುತ್ತಾ ಅಲ್ಲೇ ಪಕ್ಕದಲ್ಲಿದ್ದ ಇನ್ನೊಂದು ಮರವನ್ನು ಹತ್ತಿ ಆಟವಾಡಿದೆ.
ಇದನ್ನೂ ಓದಿ; ಮಹಿಳೆಯ ಮೂಗಿನೊಳಗೆ 100ಕ್ಕೂ ಹೆಚ್ಚು ಜೀವಂತ ಕೀಟಗಳು ಪತ್ತೆ, ಅಚ್ಚರಿಪಟ್ಟ ವೈದ್ಯರು
ಇಂದು ಮುಂಜಾನೆ ಹಂಚಿಕೊಳ್ಳಲಾದ ಈ ವಿಡಿಯೋ 32 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡದುಕೊಂಡಿದ್ದು, ಕರಡಿ ಮರಿಯ ತುಂಟಾಟಕ್ಕೆ ನೆಟ್ಟಿಗರು ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ