Viral Video: ಮಗಳೇ, ಕರೆಕ್ಟ್ ಆಗಿ ಹೇಳು ಏನು ಮಾಡಿದೀ ಅಂತ; ಗಣೇಶ ಮಗಳ ಪಾಕಶಾಲೆ

Golden Star Ganesh : ಗೋಲ್ಡನ್​ ಸ್ಟಾರ್​ ಗಣೇಶ ಅವರ ಅಡುಗೆ ಮನೆಯಲ್ಲಿ ಯಾವ ಖಾದ್ಯ ತಯಾರಾಗುತ್ತಿದೆ ಎನ್ನುವುದಕ್ಕಿಂತ, ಮಗಳು ಚಾರಿತ್ರ್ಯಾ ಜೊತೆ ನಡೆಸಿದ ಸಂಭಾಷಣೆಯ ತುಣುಕು ಬಹಳ ರುಚಿಯಾಗಿದೆ! ನೋಡಿ ವಿಡಿಯೋ

Viral Video: ಮಗಳೇ, ಕರೆಕ್ಟ್ ಆಗಿ ಹೇಳು ಏನು ಮಾಡಿದೀ ಅಂತ; ಗಣೇಶ ಮಗಳ ಪಾಕಶಾಲೆ
ನಾಯಕ ನಟ ಗಣೇಶ್​ ಮತ್ತು ಮಗಳು ಚಾರಿತ್ರ್ಯಾ
Updated By: ಶ್ರೀದೇವಿ ಕಳಸದ

Updated on: May 19, 2023 | 10:34 AM

Omelet  : ಸೆಲೆಬ್ರಿಟಿ, ಸಿನೆಮಾ ತಾರೆಯರ ಖಾಸಗಿ ಬದುಕು ಹೇಗಿರುತ್ತದೆ ಎಂದು ತಿಳಿದುಕೊಳ್ಳುವ ಕುತೂಹಲ ಜನಸಾಮಾನ್ಯರಿಗೆ ಇದ್ದೇ ಇರುತ್ತದೆ. ಸಾಮಾಜಿಕ ಜಾಲತಾಣಗಳು ಜನಜನಿತವಾಗುವ ಮೊದಲು ಇಂಥದೆಲ್ಲ ತೀರಾ ಅಪರೂಪವಾಗಿತ್ತು. ಮಾಧ್ಯಮದವರೆದುರು ಬಿಚ್ಚಿಟ್ಟರೆ ಮಾತ್ರ ಅದು ಉಳಿದವರಿಗೆ ತಲುಪುತ್ತಿತ್ತು. ಆದರೆ ಇಂದು ಹಾಗಲ್ಲ. ಸೆಲೆಬ್ರಿಟಿಗಳು ತಮ್ಮನ್ನು ಮುನ್ನೆಲೆಯಲ್ಲಿಟ್ಟುಕೊಳ್ಳಲು ಸಾಮಾಜಿಕ ಜಾಲತಾಣಗಳು ವರದಾನ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಗೋಲ್ಡನ್ ಸ್ಟಾರ್​ ಗಣೇಶ್ ಮಗಳು ಅಡುಗೆಮನೆಯಲ್ಲಿದ್ದಾಳೆ. ಆಕೆ ಏನು ಮಾಡುತ್ತಿದ್ದಾಳೆ ನೋಡಿ.

ಆಹಾ ಆಮ್ಲೆಟ್​! ತೆರೆಯ ಮೇಲೂ ಮನೆಯ ಒಳಗೂ ಗಣೇಶ್​ ಒಂದೇ ಥರ ಎನ್ನಿಸುವುದಿಲ್ಲವಾ ಈ ರೀಲ್ಸ್​ ನೋಡಿದರೆ? ಮಗಳು ಇಂಗ್ಲೀಷ್​ನಲ್ಲಿ ತಾನು ಮಾಡುತ್ತಿರುವ ಖಾದ್ಯದ ಕುರಿತು ವಿವರಿಸಲು ಹೋಗುತ್ತಾಳೆ. ಮಗಳೇ, ಕರೆಕ್ಟ್​ ಆಗಿ ಹೇಳು ಏನು ಮಾಡ್ತಿದ್ದೀಯಾ ಅಂತ ಗಣೇಶ್​ ಕೇಳಿದಾಗ, ನಾನೀವತ್ತು ಆಮ್ಲೇಟ್ ಮಾಡ್ತಿದ್ದೀನಿ ಎನ್ನುತ್ತಾಳೆ. ‘ಆಮ್ಲೇಟ್ ಮಾಡ್ತಿದಾರೆ ಅಷ್ಟೇ’ ಪ್ರೇಕ್ಷಕರನ್ನುದ್ದೇಶಿ ಆಪ್ತಾಗಿ ಹೇಳುತ್ತಾರೆ ಗಣೇಶ್​.

ಇದನ್ನೂ ಓದಿ : Viral: ವರ್ಕ್ ಫ್ರಮ್ ರ್‍ಯಾಪಿಡೋ ಬೈಕ್! ಇದು ನಮ್ಮ ಬೆಂಗಳೂರಿನಲ್ಲಿ

ಈ ವಿಡಿಯೋಗೆ ಅಪಾರ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ಓಹ್​ ಗಣೇಶ್​ ಅವರ ಮಗಳಿಗೆ ಕನ್ನಡ ಮಾತನಾಡೋದಕ್ಕೆ ಬರುತ್ತದೆ. ಇದು ಖುಷಿಯ ಸಂಗತಿ ಎಂದು ಸಂಭ್ರಮಿಸಿದ್ದಾರೆ. ಚಾರಿತ್ರ್ಯಾ, ನನಗೆ ನಿಮ್ಮಂಥ ಅಪ್ಪ ಇರಬೇಕಿತ್ತು ಎಂದು ಮತ್ತೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ : Viral Video: 74 ದಿನಗಳ ಕಾಲ ನೀರಿನಾಳದೊಳಗಿದ್ದು ದಾಖಲೆ ಬರೆದ ಅಮೆರಿಕದ ವ್ಯಕ್ತಿ

ಬ್ರಿಟಿಷ್​ ಆ್ಯಕ್ಸೆಂಟ್ ಸೂಪರ್​ ಎಂದು ಇನ್ನೊಬ್ಬರು ಹೇಳಿದ್ದಾರೆ. ಚಾರಿತ್ರ್ಯಾ ಹುಟ್ಟುಹಬ್ಬದ ದಿನ ಅಂದರೆ ಮಾರ್ಚ್ 26ರಂದು ಈ ವಿಡಿಯೋ ಪೋಸ್ಟ್ ಮಾಡಲಾಗಿದೆ.  ಈ ವಿಡಿಯೋ ಅನ್ನು ಈಗಾಗಲೇ ಸುಮಾರು 52,000 ಜನರು ಇಷ್ಟಪಟ್ಟಿದ್ದಾರೆ. ಆದರೆ ಇದು ಈಗ ವೈರಲ್ ಆಗುತ್ತಿದೆ.

ಯೂಟ್ಯೂಬ್​ ಕಾಲದ ಮಕ್ಕಳಿಗೆ ಅನ್ಯಭಾಷೆಯ ಶೈಲಿಯಷ್ಟೇ ಅಲ್ಲ ಏನನ್ನೂ ಅನುಕರಿಸುವುದು ಈಗ ಸುಲಭವೇ. ನೀವೇನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:30 am, Fri, 19 May 23