Viral: ನಿಮ್ಮ ರಾಜ್ಯದ ಆರ್ಥಿಕತೆ ನಡೆಯುತ್ತಿರುವುದು ನಮ್ಮಂತಹ ಕನ್ನಡ ಗೊತ್ತಿರದ ಜನರಿಂದ

ನಮ್ಮ ರಾಜ್ಯದಲ್ಲಿ ಎಲ್ಲಾ ಮಳಿಗೆಗಳಲ್ಲಿ ನಾಮ ಫಲಕಗಳನ್ನು ಹಾಕುವಾಗ ಕನ್ನಡಕ್ಕೆ ಆದ್ಯತೆ ನೀಡಬೇಕು ಹಾಗೂ ಜಾಹಿರಾತು ಫ್ಲೆಕ್ಸ್​​ಗಳಲ್ಲಿಯೂ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯಿಂದ ಬಹುದೊಡ್ಡ ಆಂದೋಲನ ಕಾರ್ಯಕ್ರಮ ನಡೆಯುತ್ತಿದೆ. ಇದೀಗ ಈ ಆಂದೋಲನದ ವಿರುದ್ಧ ಮಹಿಳೆಯೊಬ್ಬರು ಅಪಸ್ವರವನ್ನು ಎತ್ತಿದ್ದು,  ಒತ್ತಾಯಪೂರ್ವಕವಾಗಿ ಕನ್ನಡ ನಾಮಫಲಕಗಳನ್ನು ಹಾಕಿಸುವುದು ಸರಿಯಲ್ಲ, ನಿಮ್ಮ ರಾಜ್ಯದ ಆರ್ಥಿಕತೆಯು ನಡೆಯುತ್ತಿರುವುದೇ ನಮ್ಮಂತಹ ಕನ್ನಡ ಗೊತ್ತಿರದ ಜನರಿಂದ ಎಂಬ ಹೇಳಿಕೆ ನೀಡಿದ್ದಾರೆ. ಆಕೆಯ ಮಾತು ಎಷ್ಟರ ಮಟ್ಟಿಗೆ ಸರಿ, ಕರ್ನಾಟಕದಲ್ಲಿ ಕನ್ನಡಕ್ಕೆ ಮಾತ್ರ ಪ್ರಧಾನ ಆದ್ಯತೆ ಎಂದು ಕನ್ನಡಿಗರು ಈ ಮಹಿಳೆಯ ಉದ್ಧಟತನದ ಮಾತಿಗೆ ಸರಿಯಾದ ಉತ್ತರವನ್ನು ನೀಡಿದ್ದಾರೆ. 

Viral: ನಿಮ್ಮ ರಾಜ್ಯದ ಆರ್ಥಿಕತೆ ನಡೆಯುತ್ತಿರುವುದು ನಮ್ಮಂತಹ ಕನ್ನಡ ಗೊತ್ತಿರದ ಜನರಿಂದ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 27, 2023 | 6:49 PM

ರಾಜ್ಯದಲ್ಲಿ ನಾಮ ಫಲಕಗಳನ್ನು ಹಾಕುವಾಗ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು, ನಾಮಫಕಲಗಳಲ್ಲಿ ಕನ್ನಡ ಕಡ್ಡಾಯ ಬಳಕೆ ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯಿಂದ ಬಹುದೊಡ್ಡ ಆಂದೋಲನ ಕಾರ್ಯಕ್ರಮ ನಡೆಯುತ್ತಿದೆ. ಈ ಒಂದು ಆಂದೋಲನ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲವೂ ದೊರಕಿದ್ದೂ, ಮಾಲ್ ಆಫ್ ಏಷ್ಯಾ ಸೇರಿದಂತೆ ಬಹುತೇಕ ಬೆಂಗಳೂರಿನಲ್ಲಿರುವ ವಾಣಿಜ್ಯ ಮಳಿಗೆಗಳ ನಾಮ ಫಲಕಗಳಲ್ಲಿ ಕನ್ನಡಕ್ಕೆ ಮೊದಲ ಆಧ್ಯತೆಯನ್ನು ನೀಡಲಾಗಿದೆ. ಇದೀಗ ಬಹುದೊಡ್ಡ ಮಟ್ಟದಲ್ಲಿ ಈ ಆಂದೋಲನವು ನಡೆಯುತ್ತಿದೆ. ಈ ನಡುವೆ ಮಹಿಳೆಯೊಬ್ಬರು ಈ ಆಂದೋಲನದ ವಿರುದ್ಧ ಅಪಸ್ವರವನ್ನು ಎತ್ತಿದ್ದು,  ಹೀಗೆ ಒತ್ತಾಯ ಪೂರ್ವಕವಾಗಿ ನಾಮಫಕಲಗಳನ್ನೆಲ್ಲಾ ಹಾಕಿಸುವುದು ಸರಿಯಲ್ಲ, ಬೇರೆ ರಾಜ್ಯ ಮತ್ತು ದೇಶಗಳಿಂದ ಪ್ರವಾಸಿಗರು ಕರ್ನಾಟಕಕ್ಕೆ ಬರುತ್ತಾರೆ. ನಿಮ್ಮ ರಾಜ್ಯದ ಆರ್ಥಿಕತೆಯು  ನಮ್ಮಂತ ಹೊರಗಿನ ಪ್ರವಾಸಿಗ ಮೇಲೆ ಅವಲಂಬಿತವಾಗಿದೆ ಎಂಬ ಸ್ಟೇಟ್ಮೆಂಟ್ ನೀಡಿದ್ದಾರೆ. ಈ ವಿಡಿಯೋವನ್ನು ಕನ್ನಡಿಗರೊಬ್ಬರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ನಮ್ಮ ಆರ್ಥಿಕತೆಯು ಇವರ ಮೇಲೆ ಅವಲಂಬಿತವಾಗಿದೆ ಎಂಬ ಉದ್ಧಟತನದ  ಮಾತುಗಳನ್ನಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.

ಈ ವಿಡಿಯೋವನ್ನು ಅಭಿಷೇಕ್ (@gundigre) ಎಂಬವರು ತಮ್ಮ ಖಾತೆಯಲ್ಲಿ X ಹಂಚಿಕೊಂಡಿದ್ದು, “ಈ ಮಹಿಳೆ ಹೇಳುತ್ತಾಳೆ, ನೀವು ನಮ್ಮ ಕಾರಣದಿಂದ ಊಟ ಮಾಡುತ್ತಿದ್ದೀರಿ ಹಾಗೂ ನಿಮ್ಮ ಆರ್ಥಿಕತೆಯು ನಮ್ಮಂತಹ ಕನ್ನಡ ಗೊತ್ತಿಲ್ಲದ ಪ್ರವಾಸಿಗರ ಮೇಲೆ ಅವಲಂಬಿತವಾಗಿದೆ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವಿಡಿಯೋದಲ್ಲಿ ಆ ಮಹಿಳೆ ರಿಪೋರ್ಟರ್  ಬಳಿ, ನಿಮ್ಮ ರಾಜ್ಯಕ್ಕೆ ಬಹು ಸಂಖ್ಯೆಯಲ್ಲಿ ಹೊರ ರಾಜ್ಯ, ಹೊರ ದೇಶಗಳಿಂದ ಪ್ರವಾಸಿಗರು ಬರುತ್ತಾರೆ. ನಿಮ್ಮ ಆರ್ಥಿಕತೆಯು ಕನ್ನಡ ಗೊತ್ತಿಲ್ಲದ ನಮ್ಮಂತವರ ಮೇಲೆ ಅವಲಂಬಿತವಾಗಿದೆ ಎಂದು ನಮ್ಮ ರಾಜ್ಯದ ಬಗ್ಗೆ ಕೇವಲವಾಗಿ ಮಾತನಾಡಿರುವುದನ್ನು ಕಾಣಬಹುದು.

ಇದನ್ನೂ ಓದಿ: ಚಿಂತೆಗಳನ್ನೆಲ್ಲಾ ಬದಿಗಿಟ್ಟು ಟ್ರಾಫಿಕ್ ಮಧ್ಯೆ  ಹಾಡು ಕೇಳುತ್ತಾ ಎಂಜಾಯ್ ಮಾಡಿದ ಆಟೋ ಚಾಲಕ

ಡಿಸೆಂಬರ್ 27 ರಂದು ಹಂಚಿಕೊಳ್ಳಲಾದ ಈ ವಿಡಿಯೋ 30 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ಮಹಿಳೆಯ ಮಾತಿನ ವಿರುದ್ಧ ಕನ್ನಡಿಗರು ಫುಲ್ ಗರಂ ಆಗಿದ್ದಾರೆ.  ಒಬ್ಬ ಬಳಕೆದಾರರು ʼಕನ್ನಡದಲ್ಲಿ ನಾಮ ಫಲಕ ಹಾಕಿದರೆ ಏನು ತೊಂದ್ರೆ? ವಿಡಿಯೋದಲ್ಲಿರುವಂತಹ ಆ ಪುಣ್ಯಾತಗಿತ್ತಿ ಮಹಿಳೆ ನಮ್ಮ ಬೆಂಗಳೂರಿನಲ್ಲಿಯೇ ಇದ್ದು ಜೀವನ ನಡೆಸುತ್ತಿರುವುದೆಂದು ಆಕೆಗೆ ನೆನಪಿರಲಿʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಾನು ಉತ್ತರ ಭಾರತದವನು. ಆದ್ರೆ ಆ ಮಹಿಳೆ ಈ ರೀತಿ  ಮಾತನಾಡಿದ್ದು ಯಾವುದೇ ಕಾರಣಕ್ಕೂ ಸರಿಯಲ್ಲ. ಅಲ್ಲಿದ್ದ ಮೇಲೆ ಅಲ್ಲಿನ ಪ್ರಾದೇಶಿಕ ಭಾಷೆಯನ್ನು ಸಹ ಕಲಿಯಬೇಕುʼ ಎಂದು ಕನ್ನಡಿಗರ ಪರವಾಗಿ ಮಾತನಾಡಿದ್ದಾರೆ. ಇನ್ನೂ ಅನೇಕರು ಈ ಮಹಿಳೆಯ ಉದ್ದಟತನದ ಮಾತಿಗೆ ಫುಲ್ ಗರಂ ಆಗಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: