Video Viral: ಗೆಲುವಿನ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ಕಾವ್ಯ ಮಾರನ್, ಇತಿಹಾಸ ಸೃಷ್ಟಿಸಿದ SRH

2024ರ ಐಪಿಎಲ್ ಟೂರ್ನಿಯ  ಎಂಟನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ (SRH) ತಂಡ ಮುಂಬೈ ಇಂಡಿಯನ್ಸ್ (MI) ವಿರುದ್ಧ  ದಾಖಲೆಯ 277 ರನ್​​​ಗಳನ್ನು ಕಲೆ ಹಾಕುವ ಮೂಲಕ ದಾಖಲೆ ಸೃಷ್ಟಿಸಿದ್ದು ಮಾತ್ರವಲ್ಲದೆ ಮುಂಬೈ ಇಂಡಿಯನ್ಸ್  ತಂಡವನ್ನು 31 ರನ್​​​ಗಳಿಂದ ಸೋಲಿಸುವ ಮೂಲಕ ತನ್ನ ಮೊದಲ ಗೆಲುವನ್ನು ಸಾಧಿಸಿದೆ. ಈ ಗೆಲುವಿನ ಖುಷಿಯಲ್ಲಿ SRH ಮಾಲಕಿ ಕಾವ್ಯ ಮಾರನ್ ಸ್ಟೇಡಿಯಂನಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಇದೀಗ ಅವರ ಮುದ್ದಾದ ಡಾನ್ಸ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. 

Video Viral: ಗೆಲುವಿನ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ಕಾವ್ಯ ಮಾರನ್, ಇತಿಹಾಸ ಸೃಷ್ಟಿಸಿದ SRH
Edited By:

Updated on: Mar 28, 2024 | 12:34 PM

ಬುಧವಾರ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಯ  8ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ (MI) ತಂಡವನ್ನು 31 ರನ್ ಗಳಿಂದ ಸೋಲಿಸುವ ಮೂಲಕ ತನ್ನ ಮೊದಲ ಗೆಲುವನ್ನು ಸಾಧಿಸಿದೆ. ಅಷ್ಟೇ ಅಲ್ಲದೆ SRH ತನ್ನ ಪಾಲಿನ 20 ಓವರ್ ಗಳಿಗೆ 3 ವಿಕೆಟ್ ಗಳನ್ನು ಕಳೆದುಕೊಂಡು 277 ರನ್ ಗಳನ್ನು ಕಲೆ ಹಾಕುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಗರಿಷ್ಠ ಮೊತ್ತ ಗಳಿಸಿದ ತಂಡ ಎಂಬ ದಾಖಲೆಯನ್ನು ಬರೆಯುವ ಮೂಲಕ ಈ ಹಿಂದೆ  2013 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಡಿದ್ದ  ದಾಖಲೆಯನ್ನು ಮುರಿದಿದೆ. ತನ್ನ ತಂಡದ ಅಭೂತಪೂರ್ವ ಪಂದ್ಯವನ್ನು ಕಂಡು ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಕಾವ್ಯಾ ಮಾರನ್ ಸ್ಟೇಡಿಯಂನಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಈ ಕುರಿತ ಮುದ್ದಾದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಮುಂಬೈ ಇಂಡಿಯನ್ಸ್ ವಿರುದ್ಧದ  ಪಂದ್ಯದಲ್ಲಿ ಕಾವ್ಯ ತನ್ನ ತಂಡದ ಬ್ಯಾಟ್ಸ್ಮ್ಯಾನ್​​​​ಗಳು ಹೊಡೆದ ಪ್ರತಿ ಫೋರ್ ಮತ್ತು ಸಿಕ್ಸರ್​​​ಗಳು ಚಪ್ಪಾಳೆ ತಟ್ಟಿದ್ದರು. ಜೊತೆಗೆ  ಮುಂಬೈ ತಂಡದ ವಿಕೆಟ್ ಗಳನ್ನು ಬೌಲರ್​​​ಗಳು ಉರುಳಿಸಿದಾಗ ಅವರ ಖುಷಿಗೆ ಮಿತಿಯೇ ಇರಲಿಲ್ಲ.   ಹೀಗೆ ತನ್ನ ತಂಡದ ಗೆಲುವಿನ ಖುಷಿಯಲ್ಲಿ ಕಾವ್ಯ ಸ್ಟೇಡಿಯಂನಲ್ಲಿ ಎದ್ದು ನಿಂತು  ಸಖತ್ ಸ್ಟೆಪ್ಸ್ ಹಾಕಿದ್ದಾರೆ.  ಇವರ ಡಾನ್ಸ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಶಾಲೆಗೆ ಕುಡಿದು ಬಂದ ಶಿಕ್ಷಕನನ್ನು ಚಪ್ಪಲಿಯಲ್ಲಿ ಹೊಡೆದು ಓಡಿಸಿದ ವಿದ್ಯಾರ್ಥಿಗಳು

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

@Dhonified_07 ಎಂಬ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲೀಕರಾದ ಕಾವ್ಯ ಮಾರನ್ ತನ್ನ ತಂಡದ ಅಭೂತಪೂರ್ವ ಪ್ರದರ್ಶನವನ್ನು ಕಂಡು ಸ್ಟೇಡಿಯಂ ನಲ್ಲಿ ಎದ್ದು ನಿಂತು ಖುಷಿಯಿಂದ ಕುಣಿದು ಕುಪ್ಪಳಿಸುತ್ತಿರುವ ಹಾಗೂ ಜೋರಾಗಿ ಚಪ್ಪಾಳೆ ತಟ್ಟುವ ಮೂಲಕ ತನ್ನ ತಂಡದ ಆಟಗಾರರನ್ನು ಪ್ರೋತ್ಸಾಹಿಸುವ ದೃಶ್ಯವನ್ನು ಕಾಣಬಹುದು.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ