Viral Video: ‘ಪಾಳಾ ಪಳ್ಳಿ ತಿರುಪಳ್ಳಿ’ ಹಾಡಿಗೆ ಹೆಜ್ಜೆ ಹಾಕಿದ ಕೇರಳದ ವೈದ್ಯರ ವಿಡಿಯೋ

Kerala Doctors Dance : ಕೇರಳದ ಟ್ರೈಬಲ್ ಆಸ್ಪತ್ರೆಯ ವೈದ್ಯರು ನರ್ತಿಸಿದ ವಿಡಿಯೋವನ್ನು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಮ್ಮ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ.

Viral Video: ‘ಪಾಳಾ ಪಳ್ಳಿ ತಿರುಪಳ್ಳಿ’ ಹಾಡಿಗೆ ಹೆಜ್ಜೆ ಹಾಕಿದ ಕೇರಳದ ವೈದ್ಯರ ವಿಡಿಯೋ
ಕೇರಳದ ವೈದ್ಯರಿಬ್ಬರು ನೃತ್ಯ ಮಾಡುತ್ತಿರುವುದು
Edited By: ಶ್ರೀದೇವಿ ಕಳಸದ

Updated on: Aug 16, 2022 | 10:52 AM

Pala Palli Tirupalli : ಕೇರಳದ ಇಬ್ಬರು ವೈದ್ಯರು ಪೃಥ್ವಿರಾಜ್ ಸುಕುಮಾರನ್ ಅಭಿನಯದ ಮಲಯಾಳಂ ಸಿನೆಮಾ ‘ಕಡುವಾ’ (Kaduva)ದ ಜನಪ್ರಿಯ ಹಾಡು ‘ಪಾಳಾ ಪಳ್ಳಿ ತಿರುಪಳ್ಳಿ’ಗೆ ನರ್ತಿಸಿದ ವಿಡಿಯೋ ನೆಟ್ಟಿಗರ ಹೃದಯ ಗೆದ್ದಿದೆ. ವಯನಾಡಿನ ಟ್ರೈಬಲ್  ಆಸ್ಪತ್ರೆಯ ವೈದ್ಯರಾದ ಇವರಿಬ್ಬರ ಈ ವಿಡಿಯೋವನ್ನು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಇದು ವೈರಲ್ ಆಗಿದೆ. ಈ ವಿಡಿಯೋದಲ್ಲಿರುವ ನಲ್ಲೂರ್ನಾಡ್ ಕ್ಯಾನ್ಸರ್ ಚಿಕಿತ್ಸಾ ಕೇಂದ್ರದ ಅಧೀಕ್ಷಕ ಡಾ. ಸಾವನ್ ಸಾರಾ ಮ್ಯಾಥ್ಯೂ ಮತ್ತು ವೈದ್ಯಾಧಿಕಾರಿ ಡಾ. ಸಫೀಜ್ ಅಲಿ ಅವರನ್ನು ವೀಣಾ ಜಾರ್ಜ್ ಶ್ಲಾಘಿಸಿ, ‘ಈ ಆಸ್ಪತ್ರೆಯ ತಂಡವು ಸಾವಿರಾರು ರೋಗಿಗಳಿಗೆ ಅತ್ಯುತ್ತಮ ಸೇವೆಯನ್ನು ಒದಗಿಸುತ್ತಿದೆ’ ಎಂದಿದ್ದಾರೆ.

ಕಳೆದ ತಿಂಗಳು ಬಿಡುಗಡೆಯಾದ ‘ಕಡುವಾ’ ಚಿತ್ರದಲ್ಲಿರುವ ಒಂದು ದೃಶ್ಯವು ವಿಶೇಷ ಚೇತನ ಮಕ್ಕಳ ವಿಷಯವಾಗಿ ಸಂವೇದನಾರಹಿತವಾಗಿ ಚಿತ್ರಿಸಲಾಗಿದೆ ಎಂಬ ಕಟುವಿಮರ್ಶೆಗೆ ಒಳಗಾಗಿತ್ತು. ನಟ ಪೃಥ್ವಿರಾಜ ಸುಕುಮಾರನ್ ಕ್ಷಮೆಯಾಚಿಸಿ ಆ ದೃಶ್ಯವನ್ನು ಸಿನೆಮಾದಿಂದ ಕೈಬಿಟ್ಟಿದ್ದರು. ಈ ಚಿತ್ರವು ಪ್ರಥ್ವಿರಾಜ ಪ್ರೊಡಕ್ಷನ್​ನಿಂದ ನಿರ್ಮಾಣವಾಗಿದ್ದು ನಿರ್ಮಾಪಕಿ ಸುಪ್ರಿಯಾ ಮೆನನ್. ವಿವೇಕ ಒಬೆರಾಯ್ ಮತತು ಸಂಯಕ್ತಾ ಮೆನನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 10:48 am, Tue, 16 August 22

TV9 Web

TV9 Kannada

Read More
Loading...
Unable to load recommendations.
Follow Us