‘ದಿ ವರ್ಡ್​ ಇಸ್​ ಗೋಯಿಂಗ್ ಅಪ್​ಸೈಡ್​ ಡೌನ್’ ಕೇರಳದ ವ್ಯಕ್ತಿ ಕ್ಲಿಕ್ಕಿಸಿದ ಚಿತ್ರಕ್ಕೆ ಉತ್ತಮ ಛಾಯಾಗ್ರಹಣ ಪ್ರಶಸ್ತಿ

| Updated By: shruti hegde

Updated on: Jun 04, 2021 | 5:13 PM

ಮರವನ್ನು ಹಿಡಿದಿರುವ ಒರಾಂಗೂಟಾನ್ ಚಿತ್ರ ಬಹಳ ಆಕರ್ಶಕವಾಗಿದೆ. ಇದಕ್ಕೂ ಮೀರಿದ ಫೋಟೋ ಕ್ಲಿಕ್ಕಿಸಲು ಬಹಳ ಕಷ್ಟ. ವಿಶಿಷ್ಟ ದೃಷ್ಟಿಕೋನ ಹಾಗೂ ಹೊಸ ಸಂಯೋಜನೆಯುಳ್ಳ ಚಿತ್ರವಿದು ಎಂದು ನೇಚರ್​ ಟಿಟಿಎಲ್​ ಸಂಸ್ಥಾಪಕ ವಿಲ್​ ನಿಕೋಲ್ಸ್​ ಶ್ಲಾಘಿಸಿದ್ದಾರೆ.

‘ದಿ ವರ್ಡ್​ ಇಸ್​ ಗೋಯಿಂಗ್ ಅಪ್​ಸೈಡ್​ ಡೌನ್’ ಕೇರಳದ ವ್ಯಕ್ತಿ ಕ್ಲಿಕ್ಕಿಸಿದ ಚಿತ್ರಕ್ಕೆ ಉತ್ತಮ ಛಾಯಾಗ್ರಹಣ ಪ್ರಶಸ್ತಿ
‘ದಿ ವರ್ಡ್​ ಇಸ್​ ಗೋಯಿಂಗ್ ಅಪ್​ಸೈಡ್​ ಡೌನ್’
Follow us on

ಕೇರಳ ಮೂಲದ ವಿಜಯನ್​ ಅವರು ಕ್ಲಿಕ್ಕಿಸಿದ ಫೋಟೋ 2021ರ ನೇಚರ್​ ಟಿಟಿಎಲ್​ ಛಾಯಾಚಿತ್ರಗ್ರಹಣ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಬಾಚಿಕೊಂಡಿದ್ದು, ಬಾರೀ ಮೆಚ್ಚುಗೆ ಪಾತ್ರವಾಗಿದೆ.  ಹಾಗೂ ಸ್ಪರ್ಧೆಯಲ್ಲಿ ವಿಜಯನ್​ ವಿಜೇತರಾಗಿದ್ದು 1,500 ಪೌಂಡ್​ಗಳ ಬಹುಮಾನ ನೀಡಿ ಅವರನ್ನು ಗೌರವಿಸಲಾಗಿದೆ.

ಅವರು ಕ್ಲಿಕ್ಕಿಸಿದ, ಮರವನ್ನು ಹಿಡಿದಿರುವ ಒರಾಂಗೂಟಾನ್ ಚಿತ್ರ ಬಹಳ ಆಕರ್ಶಕವಾಗಿದೆ. ಇದಕ್ಕೂ ಮೀರಿದ ಫೋಟೋ ಕ್ಲಿಕ್ಕಿಸಲು ಬಹಳ ಕಷ್ಟ. ವಿಶಿಷ್ಟ ದೃಷ್ಟಿಕೋನ ಹಾಗೂ ಹೊಸ ಸಂಯೋಜನೆಯುಳ್ಳ ಚಿತ್ರವಿದು ಎಂದು ನೇಚರ್​ ಟಿಟಿಎಲ್​ ಸಂಸ್ಥಾಪಕ ವಿಲ್​ ನಿಕೋಲ್ಸ್​ ಶ್ಲಾಘಿಸಿದ್ದಾರೆ.

ಈ ಚಿತ್ರವನ್ನು ಸೆರೆಹಿಡಿಯಲು ಅದೆಷ್ಟೋ ದಿನಗಳಿಂದ ಕಾದುಕುಳಿತಿದ್ದೆ. ಈ ರೀತಿಯ ಚಿತ್ರ ಸೆರೆಹಿಡಿಯಬೇಕೆಂಬ ಆಸೆ ಇತ್ತು. ನೀರಿನ ಮಧ್ಯದಲ್ಲಿರುವ ಮರವನ್ನು ಹುಡುಕಿದೆ. ಆಕಾಶ, ಮರ ನೀರಿನಲ್ಲಿ ಪ್ರತಿಬಿಂಬಿಸಬೇಕಿತ್ತು. ಆಗ ಚಿತ್ರ ತಲೆಕೆಳಗಾಗಿ ಕಾಣಿಸುವಂತೆ ಮಾಡುತ್ತದೆ. ಇಂತಹ ಯೋಚನೆಯನ್ನು ಮಾಡಿದ್ದೆ. ಸ್ಪಷ್ಟವಾದ ಫೋಟೋ ಸೆರೆಹಿಡಿಯಲು ಅದೆಷ್ಟೋ ಗಂಟೆಗಳಿಂದ ಕಾಡು ಕುಳಿತಿದ್ದೆ ಎಂದು ಕೆನಡಾದಲ್ಲಿ ನೆಲೆಸಿರುವ ಕೇರಳದ ವ್ಯಕ್ತಿ ವಿಜಯನ್​ ಹೇಳಿದ್ದಾರೆ.

ಮರದ ಮೇಲೆ ಹತ್ತಿ ಕುಳಿತು ಅದೆಷ್ಟೋ ಸಮಯದವರೆಗೆ ಕಾದು ಕುಳಿತಿದ್ದೆ. ಒರಾಂಗೂಟಾನ್ ಚಿತ್ರ ಸೆರೆಹೊಡಿಯಲು ತಾಳ್ಮೆ ಬೇಕು ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಸೆರೆಹಿಡಿದ ಚಿತ್ರ ಯಶಸ್ವಿಯಾಗಿರುವುದು ನನಗೆ ತುಂಬಾ ಸಂತೋಷವನ್ನು ಉಂಟು ಮಾಡಿದೆ. ಚಿತ್ರಕ್ಕೆ ನೀಡಿದ್ದ ದಿ ವರ್ಲ್ಡ್​ ಇಸ್​ ಗೋಯಿಂಗ್​ ಅಪ್​ಸೈಡ್​ ಡೌನ್​ ಎಂಬ ಶೀರ್ಷಿಕೆ ಬಹಳ ವಿಶೇಷವೆನಿಸಿತು. ಈ ಚಿತ್ರ ಬಹಳಷ್ಟು ಅರ್ಥವನ್ನು ನೀಡುತ್ತದೆ. ಪ್ರಸ್ತುತದಲ್ಲಿ ಒರಾಂಗೂಟಾನ್ ಅತೀ ವಿರಳವಾಗಿದೆ. ಈ ಸಮಸ್ಯೆಯನ್ನು ವಿಶಾಲ ಜಗತ್ತಿಗೆ ಸಾರಿ ಹೇಳಲು ಇದು ನನಗೆ ಅವಕಾಶ ನೀಡುತ್ತದೆ ಎಂದು ವಿಜಯನ್​ ಹೇಳಿದ್ದಾರೆ.

ಈ ವರ್ಷ 8,000 ಕ್ಕೂ ಹೆಚ್ಚು ಚಿತ್ರಗಳನ್ನು ಸ್ಪರ್ಧೆಗೆ ಆಯ್ಕೆ ಮಾಡಲಾಗಿತ್ತು. 13 ವರ್ಷದ ಥಾಮಸ್​ ಈಸ್ಟರ್​ಬ್ರೂಕ್​ 2021ರ ಯುವ ನೇಚರ್​ ಟಿಟಿರಲ್​ ಛಾಯಾಚಿತ್ರಗ್ರಾಹಕ ಕೀರಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಈ ಸ್ಪರ್ಧೆಯಲ್ಲಿ ಇತರ ವಿಭಾಗದಲ್ಲಿ ವಿಜೇತ ಸ್ಥಾನ ಪಡೆದ ಇತರ ಚಿತ್ರಗಳು