ಕೇರಳದ ಪೊಲೀಸ್​ ತಮಿಳಿನ ‘ಮುಂಬೇ ವಾ’ ಹಾಡಿದ್ದಕ್ಕೆ ನೆಟ್ಟಿಗರೆಲ್ಲ ವಾಹ್​

Kerala Police : ಕೇರಳ ಪೊಲೀಸರ ಅಧೀಕೃತ ಟ್ವಿಟರ್​ ಪುಟದಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವಿರಾಮದ ಸಮಯದಲ್ಲಿ ಈ ಪೊಲೀಸ್​ ತಮಿಳು ಸಿನೆಮಾದ ಈ ಹಾಡನ್ನು ಹಾಡಿದ್ಧಾರೆ.

ಕೇರಳದ ಪೊಲೀಸ್​ ತಮಿಳಿನ ‘ಮುಂಬೇ ವಾ’ ಹಾಡಿದ್ದಕ್ಕೆ ನೆಟ್ಟಿಗರೆಲ್ಲ ವಾಹ್​
ಕೇರಳದ ಪೊಲೀಸ್​ ತಮಿಳು ಹಾಡನ್ನು ಹಾಡುತ್ತಿರುವುದು
Updated By: ಶ್ರೀದೇವಿ ಕಳಸದ

Updated on: Dec 09, 2022 | 4:02 PM

Viral Video : ಪೊಲೀಸ್ ಎಂದಾಕ್ಷಣ ಸದಾ ಸಿಡುಕು ಮೋರೆ, ದೊಡ್ಡ ಧ್ವನಿ, ಕೈಯಲ್ಲೊಂದು ಲಾಟಿ… ನಮ್ಮ ಸಿನೆಮಾಗಳು ಪೊಲೀಸರನ್ನು ಹೀಗೆ ತೋರಿಸಿ ತೋರಿಸಿ ನಮ್ಮ ಮನಸಿನೊಳಗೆ ಅವರ ಚಿತ್ರವನ್ನು ಹೀಗೆಯೇ ಎಂಬಂತೆ ಅಚ್ಚಾಗಿಸಿಬಿಟ್ಟಿವೆ. ಆದರೆ ಟ್ರಾಫಿಕ್​ನಲ್ಲಿಯೋ ಅಥವಾ ದಾರಿಯಲ್ಲೋ ಪೊಲೀಸರು ಒಬ್ಬೊಬ್ಬರೇ ಓಡಾಡುತ್ತಿರುವಾಗಲೋ, ಮಾತನಾಡಿಸಿ ನೋಡಿ ಅವರೂ ನಮ್ಮಂತೆಯೇ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಹಾಡಿರುವ ಪೊಲೀಸರನ್ನು ಗಮನಿಸಿ. ಇವರು ಕೇರಳದ ಪೊಲೀಸ್​ ಇಲಾಖೆಯಲ್ಲಿದ್ದಾರೆ. ತಮಿಳು ಸಿನೆಮಾ ‘ಸಿಲ್ಲೋನು ಓರು ಕಾದಲ್​’ನ  ‘ಮುಂಬೆ ವಾ’ ಹಾಡನ್ನು ಹಾಡಿದ್ದಾರೆ. ಮೂಲದಲ್ಲಿ ಈ ಹಾಡನ್ನು ಹಾಡಿದ್ದು ಶ್ರೇಯಾ ಘೋಷಾಲ್​ ಮತ್ತು ನರೇಶ್ ಅಯ್ಯರ್.

ಇಷ್ಟು ಭಾವಪೂರ್ಣವಾಗಿ ಈ ಹಾಡನ್ನು ಹಾಡಿದ ಈ ಪೊಲೀಸ್ ಯಾರಿಗೆ ತಾನೆ ಇಷ್ಟವಾಗಲ್ಲ? ಕೇರಳ ಪೊಲೀಸರ ಅಧೀಕೃತ ಟ್ವಿಟರ್​ ಪುಟದಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವಿರಾಮದ ವೇಳೆಯಲ್ಲಿ ಈ ಹಾಡನ್ನು ಈ ಪೊಲೀಸ್ ಹಾಡಿದ್ದಾರೆ. 8,000ಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಸುಮಾರು 500 ಜನರು ಇದನ್ನು ಇಷ್ಟಪಟ್ಟಿದ್ದಾರೆ.

ತುಂಬಾ ಒಳ್ಳೆಯ ಧ್ವನಿಯನ್ನು ಹೊಂದಿದ್ದೀರಿ ಎಂದು ಅನೇಕರು ಹೊಗಳಿದ್ದಾರೆ. ಅದ್ಭುತವಾಗಿದೆ ನಿಮ್ಮ ಕಂಠ, ಹಾಡುವುದನ್ನು ಬಿಡಬೇಡಿ ಎಂದಿದ್ದಾರೆ ಹಲವರು.

ಉಳಿದ ಪೊಲೀಸರು ಎಷ್ಟು ಖುಷಿಯಿಂದ ಇವರ ಹಾಡನ್ನು ವಿಡಿಯೋ ಮಾಡುತ್ತಿದ್ಧಾರೆ ಎಂಬುದನ್ನು ಗಮನಿಸಿದರಾ?

ಇದನ್ನು ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ