Viral Video: ವಿದ್ಯಾರ್ಥಿಯ ಡೆಸ್ಕ್​ವಾದನಕ್ಕೆ ಶಿಕ್ಷಕಿಯ ಜಾನಪದ ಹಾಡಿನ ಸಾಥ್!

|

Updated on: Jul 06, 2023 | 5:33 PM

Wayanad : ನಾನು ಶಾಲೆಯಲ್ಲಿದ್ದಾಗ ಹೀಗೆಯೇ ಡೆಸ್ಕ್​ ನುಡಿಸಿದ್ದೆ, ಆಗ ನನ್ನ ಶಿಕ್ಷಕಿ ಏನು ಮಾಡಿದ್ದರು ಗೊತ್ತೇ? ಎಂದು ಒಬ್ಬರು ಕೇಳಿದ್ದಾರೆ. ಆದರೆ ಈ ಶಿಕ್ಷಕಿಯಂತೂ ಈ ಹುಡುಗನೊಂದಿಗೆ ಕುಳಿತು ಮಲಯಾಳದ ಛಂದನೆಯ ಜಾನಪದ ಗೀತೆ ಹಾಡಿದ್ದಾರೆ!

Viral Video: ವಿದ್ಯಾರ್ಥಿಯ ಡೆಸ್ಕ್​ವಾದನಕ್ಕೆ ಶಿಕ್ಷಕಿಯ ಜಾನಪದ ಹಾಡಿನ ಸಾಥ್!
ವಯನಾಡಿನ ಜಾನಪದ ಗೀತೆ ಹಾಡುತ್ತಿರುವ ಶಿಕ್ಷಕಿ ಮತ್ತು ಡೆಸ್ಕ್​ ನುಡಿಸುತ್ತಿರುವ ವಿದ್ಯಾರ್ಥಿ
Follow us on

Kerala : ಪ್ರತಿಭೆ ಪ್ರತಿಯೊಬ್ಬರಲ್ಲಿಯೂ ಇರುತ್ತದೆ. ಆದರೆ ಎಲ್ಲ ಪೋಷಕರಿಗೂ ಅಷ್ಟೊಂದು ಸೂಕ್ಷ್ಮವಾಗಿ ಗಮನಿಸಲು ಮತ್ತು ಪ್ರೋತ್ಸಾಹಿಸಲು ಸಮಯವಿರುತ್ತದೆಯೇ? ಅದರಲ್ಲೂ ಕೆಳವರ್ಗ ಮತ್ತು ದುಡಿಯುವ ವರ್ಗದ ಪೋಷಕರಿಗೆ ಮನೆಮಂದಿಯ ಹೊಟ್ಟೆ ತುಂಬಿಸುವುದೇ ಕಷ್ಟ. ಆದರೂ ಮಕ್ಕಳನ್ನು ಶಾಲೆಗೆ ಕಳಿಸುವ ಸಾಹಸಕ್ಕಂತೂ ಕೈಹಾಕುತ್ತಾರೆ. ಆದರೆ ಕಲೆ? ಅದು ಕಷ್ಟವೇ. ಹೀಗಿದ್ದಾಗ ಮಕ್ಕಳೊಳಗಿನ ಪ್ರತಿಭೆಯನ್ನು ಹೊರಜಗತ್ತಿಗೆ ಕಾಣಿಸುವ ಪ್ರಯತ್ನದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎನ್ನಿಸಿಕೊಳ್ಳುತ್ತದೆ. ಈ ವಿಡಿಯೋ ನೋಡಿ. ಕೇರಳದ ಸರ್ಕಾರಿ ಶಾಲೆಯ ಶಿಕ್ಷಕಿ ಮಕ್ಕಳೊಂದಿಗೆ ಡೆಸ್ಕಿನಲ್ಲಿ ಕುಳಿತು ವಯನಾಡಿನ (Wayanad) ಜಾನಪದ ಹಾಡೊಂದನ್ನು ಹಾಡಿದ್ದಾರೆ. ಈ ಪುಟ್ಟ ಬಾಲಕ ಡೆಸ್ಕ್​ನ್ನೇ ತಾಳವಾದ್ಯವನ್ನಾಗಿಸಿಕೊಂಡಿದ್ಧಾನೆ!

ಈತನಕ ಈ ವಿಡಿಯೋ ಅನ್ನು ಸುಮಾರು 75,000 ಜನರು ವೀಕ್ಷಿಸಿದ್ದಾರೆ. ಸಾವಿರಕ್ಕಿಂತಲೂ ಹೆಚ್ಚು ಜನ ಇಷ್ಟಪ್ಟಿದ್ದಾರೆ. 200ಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ಅನೇಕರು ಹೃದಯ ತುಂಬಿ ಪ್ರತಿಕ್ರಿಯಿಸಿದ್ದಾರೆ. ವಜ್ರವೊಂದು ಪತ್ತೆಯಾಗಿದೆ! ಇದನ್ನು ಕತ್ತರಿಸಿ ನಯಗೊಳಿಸಿ ಹೊಳೆಯುವಂತೆ ಮಾಡಬೇಕಿದೆ ಎಂದಿದ್ಧಾರೆ ಒಬ್ಬರು. ಶಾಲೆಯಲ್ಲಿದ್ದಾಗ ಶಿಕ್ಷಕರೊಬ್ಬರು ನನ್ನನ್ನು ಹಾಡಲು ಒತ್ತಾಯಿಸಿ ಬಹುಮಾನ ಗೆಲ್ಲುವಂತೆ ಮಾಡಿದ್ದನ್ನು ನಾನು ಎಂದಿಗೂ ಮರೆಯಲಾರೆ ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral: ಬಾಡಿಗೆದಾರರಿಗೆ 1 ಕಿಲೋ ಕ್ಯಾಬೇಜ್​ ಉಪ್ಪಿನಕಾಯಿ ತಯಾರಿಸಿ ಸ್ವಾಗತಿಸಿದ ಬೆಂಗಳೂರಿನ ಮಹಿಳೆ 

ಜನ್ಮಜಾತ ಪ್ರತಿಭೆ, ಇಂಥ ಮಕ್ಕಳಲ್ಲಿರುವ ಕಲೆಯನ್ನು ಗುರುತಿಸಿ, ಪೋಷಿಸಿ, ವೇದಿಕೆಯನ್ನು ಕಲ್ಪಿಸಿಕೊಡುವ ಶಿಕ್ಷಕರು ಈಗಿನ ದಿನಗಳಲ್ಲಿ ವಿರಳ, ಈ ಶಿಕ್ಷಕಿಯು ಈತನಿಗೆ ಒಳ್ಳೆಯ ಭವಿಷ್ಯ ಕಟ್ಟಿಕೊಡುವಲ್ಲಿ ಸಹಾಯ ಮಾಡಲಿ ಎಂದು ಹಾರೈಸಿದ್ದಾರೆ ಇನ್ನೂ ಒಬ್ಬರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:31 pm, Thu, 6 July 23