
Viral Video : ಆಗಾಗ ಬೆಕ್ಕು ನಾಯಿಗಳ ವಿಡಿಯೋ ಅನ್ನು ನೀವು ನೋಡುತ್ತಿರುತ್ತೀರಿ. ಆದರೆ ಇದೀಗ ವೈರಲ್ ಆಗಿರುವ ಈ ವಿಡಿಯೋ ಮಾತ್ರ ಬಹಳ ಮುದ್ದಾಗಿದೆ. ಈ ಪುಟ್ಟ ಹುಡುಗ ಸೇಬು ಆರಿಸಲು ತೋಟಕ್ಕೆ ಹೋಗುತ್ತಿದ್ದಾನೆ. ನಾನೂ ಬರುವೆ ಎಂದು ಅವನೊಂದಿಗೆ ಹೊರಟೇ ಬಿಟ್ಟಿದೆ ಈ ಬೆಂಗಾಲಿ ಬೆಕ್ಕು. ಹದಬಿಸಿಲು ನೆರಳಿನ ತೋಟ ಎಂಥ ಮನೋಹರವಾಗಿದೆ. ಅಲ್ಲಲ್ಲಿ ಹಸಿರು ಕೆಂಪು ಸೇಬುಗಳು ಬೇರೆ. ನೋಡಿದ ಯಾರಿಗೂ ಹೋಗಬೇಕೆಂದು ಅನ್ನಿಸುವುದು ಸಹಜ.
ಕಝುಕಿ ಇದು ಈ ಬೆಕ್ಕಿನ ಹೆಸರು. ಮಗು ಹೇಗೆ ಓಡುತ್ತದೋ ಹಾಗೆ ಓಡೋಡಿ ಹೋಗುತ್ತದೆ. ನಂತರ ಮರಕ್ಕೆ ಏಣಿ ಇಟ್ಟಾಗಲೂ ಏರುತ್ತದೆ. ಸೇಬು ಕೀಳಲು ಬಂದಿದ್ದರೆ ಅದನ್ನೂ ಮಾಡುತ್ತಿತ್ತೇನೋ! ಈತನಕ ಈ ವಿಡಿಯೋ ಅನ್ನು ಸುಮಾರು 2 ಮಿಲಿಯನ್ ಜನರು ನೋಡಿದ್ದಾರೆ. 32,000ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ.
ಈ ಬೆಂಗಾಲಿ ಬೆಕ್ಕು ಬಹಳ ಮುದ್ದಾಗಿದೆ. ನನ್ನ ಬಳಿಯೂ ಇದೆ ಎಂದು ಒಬ್ಬರು ಹೇಳಿದ್ದಾರೆ. ಇವರಿಬ್ಬರೂ ಅದೆಷ್ಟು ಅನ್ಯೋನ್ಯವಾಗಿದ್ದಾರೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಎಂಥ ಮುದ್ದಾದ ಜೋಡಿ ಇದು ಎಂದು ಮಗದೊಬ್ಬರು ಹೇಳಿದ್ದಾರೆ.
ಮಕ್ಕಳೇ ಹಾಗೇ. ಇದೇ ನಿನ್ನ ತಮ್ಮ ಅಥವಾ ತಂಗಿ ಎಂದು ಹೇಳಿಬಿಟ್ಟರೆ ಸ್ವೀಕರಿಸಿಬಿಡುತ್ತವೆ. ಈಗ ಹೀಗೆ ಈ ಪುಟ್ಟ ಹುಡುಗ ಬೆಕ್ಕಿನೊಂದಿಗೆ ಹೊಂದಿಕೊಂಡಂತೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 2:08 pm, Sat, 29 October 22