Kidnapping TV Anchor: ಮದುವೆಯಾಗಲು ಖ್ಯಾತ ನಿರೂಪಕನನ್ನೇ ಕಿಡ್ನಾಪ್​ ಮಾಡಿದ ಯುವತಿ

|

Updated on: Feb 24, 2024 | 4:19 PM

ಖ್ಯಾತ ನಿರೂಪಕನನ್ನು ಮದುವೆಯಾಗುವ ಆಸೆಯನ್ನು ಹೊಂದಿದ್ದ ಉದ್ಯಮಿ ಯುವತಿಯೊಬ್ಬಳು ಹೈದರಾಬಾದ್‌ನ ಟಿವಿ ಆ್ಯಂಕರ್​​ ಪ್ರಣವ್ ಸಿಸ್ತಲಾ ಅವರನ್ನು ತನ್ನ ಐವರು ಸಹಚರರೊಂದಿಗೆ ಕಿಡ್ನಾಪ್ ಮಾಡಿದ್ದಾಳೆ. ಆದರೆ ಪ್ರಣವ್​​​​ ನೀಡಿದ ಕೇಸಿನ ಆಧಾರದ ಮೇಲೆ ಯುವತಿ ಹಾಗೂ ಆಕೆಯ ಐವರು ಸಹಚರರನ್ನು ಫೆಬ್ರವರಿ 22 ರಂದು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ. ಒಟ್ಟಾರೆಯಾಗಿ ಸಿನಿಮೀಯ ರೀತಿಯಲ್ಲಿ ಈ ಘಟನೆ ನಡೆದಿದೆ.

Kidnapping TV Anchor: ಮದುವೆಯಾಗಲು ಖ್ಯಾತ ನಿರೂಪಕನನ್ನೇ ಕಿಡ್ನಾಪ್​ ಮಾಡಿದ ಯುವತಿ
Follow us on

ಹೈದರಾಬಾದ್‌ನಲ್ಲಿ ಉದ್ಯಮಿಯೊಬ್ಬಳು ಮ್ಯಾಟ್ರಿಮೋನಿ ಸೈಟ್‌ನಲ್ಲಿ ಮೋಸ ಹೋಗಿದ್ದಾಳೆ. ಖ್ಯಾತ ನಿರೂಪಕನನ್ನು ಮದುವೆಯಾಗುವ ಆಸೆಯನ್ನು ಹೊಂದಿದ್ದ ಐದು ಸ್ಟಾರ್ಟಪ್ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕಿಯಾಗಿರುವ ಭೋಗಿರೆಡ್ಡಿ ತ್ರಿಶಾ(31) ಟಿವಿ ಆ್ಯಂಕರ್​​ ಪ್ರಣವ್ ಸಿಸ್ತಲಾ ಅವರನ್ನು ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಹಿಂಬಾಲಿಸಲು ಶುರು ಮಾಡಿದ್ದಳು. ಆದರೆ ಟಿವಿ ಆ್ಯಂಕರ್​​ ಪ್ರಣವ್ ಸಿಸ್ತಲಾ ಹೆಸರಲ್ಲಿ ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ನಕಲಿ ಪ್ರೊಫೈಲ್​​​​ ಒಂದನ್ನು ಕ್ರಿಯೇಟ್​​​ ಮಾಡಲಾಗಿತ್ತು. ಈ ವಿಚಾರ ಕೆಲವು ದಿನಗಳ ಬಳಿಕ ಮಹಿಳೆಗೆ ಮೋಸ ಹೋಗಿರುವುದು ತಿಳಿದುಬಂದಿದೆ.

ಪೊಲೀಸರ ಪ್ರಕಾರ, ಯುವತಿ ಪ್ರಣವ್ ಸಿಸ್ತಲಾ ಎಂದು ನಂಬಿ ನಕಲಿ ಪ್ರೊಫೈಲ್​​​​ ಕ್ರಿಯೇಟ್​​​ ಮಾಡಿದ ವ್ಯಕ್ತಿಯ ಅಕೌಂಟಿಗೆ 40 ಲಕ್ಷ ರೂ ಪಾವತಿಸಿದ್ದಾಳೆ. ಆದರೆ ಹಣ ಪಡೆದ ನಂತರ,ಆ ವ್ಯಕ್ತಿ ತನ್ನಿಂದ ತಪ್ಪಿಸಲು ಪ್ರಾರಂಭಿಸಿದ್ದಾನೆ ಎಂದು ಯುವತಿ ಹೇಳಿದ್ದಾಳೆ. ವಂಚನೆಗೆ ಒಳಗಾದುದನ್ನು ಅರಿತ ಯುವತಿ ಆ ಪ್ರೊಫೈಲ್‌ನಲ್ಲಿ ನೀಡಲಾದ ಫೋನ್ ಸಂಖ್ಯೆಯನ್ನು ಸಂಪರ್ಕಿಸಿದಾಗ ಅದು ಖ್ಯಾತ ಆ್ಯಂಕರ್​​ ಪ್ರಣವ್‌ನದ್ದೇ ನಂಬರ್​​ ಎಂದು ತಿಳಿದುಬಂದಿದೆ. ಆದರೆ ಚೈತನ್ಯ ರೆಡ್ಡಿ ಎಂಬ ಹೆಸರಿನ ಅಪರಿಚಿತ ವ್ಯಕ್ತಿ ತನ್ನ ಫೋಟೋವನ್ನು ಬಳಸಿಕೊಂಡು ಭಾರತ್ ಮ್ಯಾಟ್ರಿಮೋನಿಯಲ್ಲಿ ನಕಲಿ ಖಾತೆಗಳನ್ನು ಕ್ರಿಯೇಟ್​​ ಮಾಡಿದ್ದು, ಈ ಕುರಿತು ಸೈಬರ್ ಸೆಲ್‌ಗೆ ದೂರು ನೀಡುವುದಾಗಿ ಆ್ಯಂಕರ್​​ ಪ್ರಣವ್ ಸಿಸ್ತಲಾ ಹೇಳಿದ್ದರು.

ಇದನ್ನೂ ಓದಿ: ವಿಶ್ವದ ಅತ್ಯಂತ ಚಿಕ್ಕ ವಾಷಿಂಗ್ ಮೆಷಿನ್ ತಯಾರಿಸಿ ಗಿನ್ನೆಸ್ ದಾಖಲೆ ಬರೆದ ಆಂಧ್ರಪ್ರದೇಶದ ಯುವಕ

ಇಷ್ಟೆಲ್ಲಾ ಘಟನೆಗಳು ನಡೆದರೂ ಕೂಡ ಪ್ರಣವ್ ಮೇಲೆ ತ್ರಿಶಾಗೆ ಒಲವು ಮೂಡಿತ್ತು. ಆದ್ದರಿಂದ ಮತ್ತೆ ಮತ್ತೆ ಆತನಿಗೆ ಕರೆ ಮಾಡಲು ಶುರು ಮಾಡಿದ್ದಳು. ಆದರೆ ಪಣವ್ ಆಕೆಯ ಫೋನ್ ನಂಬರ್ ಬ್ಲಾಕ್ ಮಾಡಿದ್ದಾನೆ. ಇದರಿಂದ ಕೋಪಗೊಂಡಿದ್ದ ತ್ರಿಶಾ ಆತನನ್ನು ಅಪಹರಿಸಲು ಪ್ಲಾನ್​​​ ಮಾಡಿದ್ದಾಳೆ. ನಾಲ್ವರು ಅಪಹರಣಕಾರರನ್ನು ಬಾಡಿಗೆಗೆ ಪಡೆದುಕೊಂಡಿದ್ದಳು. ಆತನ ಕಾರಿನಲ್ಲಿ ಟ್ರ್ಯಾಕಿಂಗ್ ಉಪಕರಣ ಅಳವಡಿಸಿದ್ದಳು. ಫೆ 11ರಂದು ನಾಲ್ವರು ಬಾಡಿಗೆ ಗೂಂಡಾಗಳು ಪ್ರಣವ್‌ನನ್ನು ಅಪಹರಿಸಿ, ಉದ್ಯಮಿಯ ಕಚೇರಿಗೆ ಎಳೆದುಕೊಂಡು ಹೋಗಿ ಮನಸೋ ಇಚ್ಛೆ ಥಳಿಸಿದ್ದರು. ಇನ್ನು ಮುಂದೆ ಆಕೆಯ ಎಲ್ಲಾ ಕರೆಗಳನ್ನು ಸ್ವೀಕರಿಸುವುದಾಗಿ ಒಪ್ಪಿಕೊಂಡಿದ್ದ. ಇದರ ನಂತರ ಆತನನ್ನು ಬಿಡುಗಡೆ ಮಾಡಲಾಗಿತ್ತು.

ಇದೀಗಾ ಪ್ರಣವ್​​​​ ನೀಡಿದ ಕೇಸಿನ ಆಧಾರದ ಮೇಲೆ ಪೊಲೀಸರು ಕಿಡ್ನಾಪ್​​ ಮಾಡಲು ಹೇಳಿದ್ದ ಮಹಿಳೆ ಹಾಗೂ ಆಕೆಯ ಐವರು ಸಹಚರರನ್ನು ಫೆಬ್ರವರಿ 22 ರಂದು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ. ಒಟ್ಟಾರೆಯಾಗಿ ಸಿನಿಮೀಯ ರೀತಿಯಲ್ಲಿ ಈ ಘಟನೆ ನಡೆದಿದೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:13 pm, Sat, 24 February 24