Viral Video: ಸ್ಕರ್ಟ್ ತೊಟ್ಟು ರೈಲಿನಲ್ಲಿ ಯುವತಿಯ ಹಾಟ್ ಡ್ಯಾನ್ಸ್; ಪ್ರಯಾಣಿಕರು ಕಂಗಾಲು
ಭೋಜ್ ಪುರಿಯವರ 'ಸೈಯಾ ಮಾರೆ ಸಾಥಾ ಸಾಥ್' ಹಾಡಿಗೆ ಮುಂಬೈನ ಲೋಕಲ್ ರೈಲಿನ ಮಹಿಳೆಯರ ಕಂಪಾರ್ಟ್‌ಮೆಂಟ್‌ನಲ್ಲಿ ಯುವತಿಯೊಬ್ಬಳು ಅರೆಬರೆ ಬಟ್ಟೆಯಲ್ಲಿ ಅಶ್ಲೀಲವಾಗಿ ರೀಲ್ಸ್ ಮಾಡಿದ್ದಾಳೆ. ಈ ವಿಡಿಯೋವನ್ನು ಫೆಬ್ರವರಿ 23ರಂದು ಹಂಚಿಕೊಳ್ಳಲಾಗಿದೆ. ವಿಡಿಯೋ ಹಂಚಿಕೊಂಡ ಕೇವಲ ಎರಡೇ ದಿನದಲ್ಲಿ 10 ಲಕ್ಷಕ್ಕಿಂತಲೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.
ಇತ್ತೀಚಿಗಂತೂ ಈ ರೈಲಿನಲ್ಲಿ ಹಾಗೂ ಮೆಟ್ರೋದಲ್ಲಿ ರೀಲ್ಸ್ ಮಾಡುವವರ ಕಾಟ ತುಂಬಾನೇ ಹೆಚ್ಚಾಗಿದೆ. ಇತ್ತೀಚೆಗಷ್ಟೇ ಮುಂಬೈ ಲೋಕಲ್ ರೈಲಿನಲ್ಲಿ ಯುವತಿಯೊಬ್ಬಳು ಅಶ್ಲೀಲವಾಗಿ ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಯುವತಿ ಡ್ಯಾನ್ಸ್ ಮಾಡಲು ಪ್ರಾರಂಭಿಸುತ್ತಿದ್ದಂತೆ ಪ್ರಯಾಣಿಕರು ದಂಗಾಗಿ ಹೋಗಿದ್ದಾರೆ. ಭೋಜ್ ಪುರಿಯವರ ‘ಸೈಯಾ ಮಾರೆ ಸಾಥಾ ಸಾಥ್’ ಹಾಡಿಗೆ ಮುಂಬೈನ ಲೋಕಲ್ ರೈಲಿನ ಮಹಿಳೆಯರ ಕಂಪಾರ್ಟ್‌ಮೆಂಟ್‌ನಲ್ಲಿ ರೀಲ್ಸ್ ಮಾಡಿದ್ದಾಳೆ.
ಈ ವಿಡಿಯೋವನ್ನು @desimojito ಎಂಬ ಟ್ವಿಟರ್ ಖಾತೆಯಲ್ಲಿ ಫೆಬ್ರವರಿ 23ರಂದು ಹಂಚಿಕೊಳ್ಳಲಾಗಿದೆ. ವಿಡಿಯೋ ಹಂಚಿಕೊಂಡ ಕೇವಲ ಎರಡೇ ದಿನದಲ್ಲಿ 10 ಲಕ್ಷಕ್ಕಿಂತಲೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಅಂತರ್ಜಾಲದಲ್ಲಿ ಸಂಚಲನ ಮೂಡಿಸಿದ ಡ್ಯಾನ್ಸ್ ರೀಲ್ ಅನ್ನು ಗಮನಿಸಿದ ರೈಲ್ವೆ ಅಧಿಕಾರಿಗಳು ಪೋಸ್ಟ್‌ನಲ್ಲಿ ಪ್ರತಿಕ್ರಿಯಿಸಿ, ಈ ವಿಷಯವನ್ನು ಪರಿಗಣನೆಗೆ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಘಟನೆಯ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಂಬೈ ರೈಲ್ವೆ ಪೊಲೀಸ್ ಕಮಿಷನರೇಟ್ ಕೇಂದ್ರ ರೈಲ್ವೆ ಭದ್ರತಾ ಇಲಾಖೆಗೆ ಸೂಚಿಸಿದೆ.
ಇದನ್ನೂ ಓದಿ: ಮೊದ್ಲು ಮದುವೆ ಆಮೇಲೆ ಓದು, 13 ವರ್ಷಕ್ಕೆ ಮದುವೆಗೆ ರೆಡಿಯಾದ ಬಾಲಕ;ವಿಡಿಯೋ ವೈರಲ್
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Now I know why railways stocks are skyrocketing pic.twitter.com/HBaExbats4
— desi mojito 🇮🇳 (@desimojito) February 23, 2024
ರೈಲಿನಲ್ಲಿ ಯುವತಿಯ ಅಶ್ಲೀಲವಾಗಿ ನೃತ್ಯ ಕಂಡು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಕಷ್ಟು ನೆಟ್ಟಿಗರು “ರೈಲಿನಲ್ಲಿ ಹಾಗೂ ಮೆಟ್ರೋದಲ್ಲಿ ರೀಲ್ಸ್ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು” ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ