ತಮ್ಮ ಕೈಯಾರೆ ಟೀ ಮಾಡಿ ಪಿನ್ಸಿಪಾಲರಿಗೆ ಕುಡಿಯಲು ಕೊಟ್ಟ ಶಿಶುವಿಹಾರದ ಪುಟಾಣಿಗಳು, ವಿಡಿಯೋ ವೈರಲ್

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 22, 2025 | 6:08 PM

ಈಗಿನ ಕಾಲದ ಮಕ್ಕಳು ಯಾವುದರಲ್ಲಿ ಕಮ್ಮಿ ಹೇಳಿ, ಚಿಕ್ಕ ವಯಸ್ಸಿನಲ್ಲಿ ಎಲ್ಲವನ್ನು ಅರಿದು ಕುಡಿದಿರುತ್ತಾರೆ. ಕೆಲವೊಮ್ಮೆ ಮಕ್ಕಳ ಮಾತು, ಬುದ್ಧಿವಂತಿಕೆ ದೊಡ್ಡವರನ್ನು ಮೀರಿಸುವಂತಿರುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ, ಜಮ್ಮು ಕಾಶ್ಮೀರದಲ್ಲಿ ಶಿಶುವಿಹಾರದ ಎಲ್ಲಾ ಮಕ್ಕಳು ಸೇರಿಕೊಂಡು ಟೀ ತಯಾರಿಸಿ ಪ್ರಿನ್ಸಿಪಾಲರಿಗೆ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಪುಟಾಣಿಗಳಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಮ್ಮ ಕೈಯಾರೆ ಟೀ ಮಾಡಿ ಪಿನ್ಸಿಪಾಲರಿಗೆ ಕುಡಿಯಲು ಕೊಟ್ಟ ಶಿಶುವಿಹಾರದ ಪುಟಾಣಿಗಳು, ವಿಡಿಯೋ ವೈರಲ್
ವೈರಲ್​​ ವಿಡಿಯೋ
Follow us on

ಮಕ್ಕಳ (Kids) ಮುದ್ದು ಮುದ್ದಾದ ಮುಗ್ಧ ಮಾತು, ಹಾವಭಾವ ನೋಡಿದಾಗ ಎಷ್ಟು ಚಂದ ಎನಿಸುತ್ತದೆ. ಜಗತ್ತಿನ ಯಾವ ಪರಿವೆ ಇಲ್ಲದೇ ಅವರಿಗೆ ತೋಚಿದ್ದನ್ನು ಮಾಡುವ, ಹೇಳುವ ಹಾಗೂ ತುಂಟಾವಾಡುವ ಮಕ್ಕಳನ್ನು ನೋಡುವುದೇ ಕಣ್ಣಿಗೆ ಆನಂದ. ಅದರಲ್ಲಿಯು ಈಗಿನ ಕಾಲದ ಮಕ್ಕಳ ತುಂಬಾನೇ ಚೂಟಿಗಳು. ಎಲ್ಲವನ್ನು ಬೇಗನೇ ಕಲಿತು ಬಿಡುತ್ತಾರೆ. ಈ ಮುದ್ದಾದ ಮಕ್ಕಳ ವಿಡಿಯೋಗಳು ಸೋಶಿಯಲ್ ಮೀಡಿಯಾ (social media) ದಲ್ಲಿ ವೈರಲ್ ಆಗುತ್ತಿರುತ್ತದೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಶಿಶುವಿಹಾರದ ಪುಟಾಣಿ (Kindergarten students)ಗಳು ತಮ್ಮ ಪ್ರಿನ್ಸಿಪಾಲರಿಗಾಗಿ ಟೀ (tea) ಸಿದ್ಧಪಡಿಸಿ ನೀಡಿದ್ದಾರೆ.

ಈ ವಿಡಿಯೋವನ್ನು ಅನಿಲ್ ಚೌದರಿ ಎಂಬುವವರು ತನ್ನ ಇನ್​ಸ್ಟಾಗ್ರಾಮ್​​ನಲ್ಲಿ ಪುಟಾಣಿಗಳ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಜಮ್ಮು ಕಾಶ್ಮೀರದ ಮೊಮಟೆಸ್ಸೊರಿ ನರ್ಗಿಸ್ ದತ್ತ ಪಬ್ಲಿಕ್​ ಶಾಲೆಯಲ್ಲಿ ನಡೆದ ಈ ಘಟನೆಯೂ ಎಲ್ಲರ ಮನಸ್ಸಿಗೆ ಹತ್ತಿರವಾಗಿದೆ. ಈ ವಿಡಿಯೋದಲ್ಲಿ ಪುಟಾಣಿ ಹುಡುಗನೊಬ್ಬ ತನ್ನ ಸಹಪಾಠಿಗಳಿಗೆ ಚಹಾ ತಯಾರಿಸುವುದು ಹೇಗೆ ಎಂದು ಹೇಳುತ್ತಿರುವುದನ್ನು ನೋಡಬಹುದು.

ಇದನ್ನೂ ಓದಿ
ವಯಸ್ಸು 108 ಆದ್ರೂ ಕುಂದದ ಜೀವನೋತ್ಸಾಹ
ಸೂಪ್‌ಗೆ ಮೂತ್ರ ವಿಸರ್ಜನೆ ಮಾಡಿ ಹುಚ್ಚಾಟ ಮೆರೆದ ಯುವಕರು
ತಮ್ಮ ಮಗುವಿನ ಸಲುವಾಗಿ ಸಹ ಪ್ರಯಾಣಿಕರಿಗೆ ಕ್ಯೂಟ್‌ ಪತ್ರದೊಂದಿಗೆ ಗಿಫ್ಟ್‌
ಪ್ಲಾಸ್ಟಿಕ್‌ ಬಾಟಲಿಯಿಂದ ತಯಾರಾದ ಸನ್‌ಲೈಟ್‌ ಪವರ್ಡ್‌ ಬಲ್ಬ್‌ ಇದು

ವೈರಲ್​​ ವಿಡಿಯೋ ಇಲ್ಲಿದೆ ನೋಡಿ

ಈ ಪುಟಾಣಿ ಹುಡುಗನು ಹೇಳಿದಂತೆ ಆತನ ಸಹಪಾಠಿಗಳು ಅನುಸುರಿಸಿದ್ದಾರೆ. ಹೌದು, ಸ್ಟವ್ ಆನ್ ಮಾಡುವುದರಿಂದ ಹಿಡಿದು ಚಹಾ ತಯಾರಿ ಆಗುವವರೆಗೂ ಆ ಪುಟಾಣಿಯೂ ಸೂಚನೆ ನೀಡುತ್ತಾ ಹೋಗಿದ್ದಾನೆ. ಕೊನೆಗೆ ನಡೀರಿ ಚಹಾ ಕುಡಿಯೋಣ ಎಂದು ಹೇಳುವ ಮೂಲಕ ಈ ವಿಡಿಯೋ ಮುಕ್ತಾಯವಾಗಿದೆ. ಪುಟಾಣಿಗಳ ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಅಂಕಲ್ ಎಂದಿದ್ದಕ್ಕೆ ಯುವತಿಯ ಮೇಲೆ ಗರಂ ಆದ ಚಾಯ್ ವಾಲಾ

ಈ ಬಳಕೆದಾರರು, ‘ ಪುಟಾಣಿಗಳೇ ನಿಮ್ಮ ವಯಸ್ಸಿಗೆ ಈ ಕೆಲಸ ನಿಜಕ್ಕೂ ಮೆಚ್ಚುವಂತಹದ್ದು’ ಎಂದಿದ್ದಾರೆ. ಮತ್ತೊಬ್ಬರು, ‘ನಾನು ಶಾಲೆ ತೆರೆದರೆ ಇಡೀ ಪಠ್ಯಕ್ರಮ ಹೀಗಿರುತ್ತಿತ್ತು’ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ‘ಈ ಮಕ್ಕಳು ಎಷ್ಟು ಕ್ಯೂಟ್ ಆಗಿದ್ದಾರೆ. ನಾನು ಕೂಡ ಈಗ ಚಹಾ ಮಾಡುವುದು ಹೇಗೆ ಎಂದು ಕಲಿತೆ’ ಎಂದಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ