Viral Video: ದಯೆಗೆ ಜಗತ್ತನ್ನು ಬದಲಾಯಿಸುವ ಶಕ್ತಿ ಇದೆ, ನೋಡಿ ವಿಡಿಯೋ

|

Updated on: May 30, 2023 | 2:21 PM

Kindness : ಕಣ್ಣಿಗೆ ಪರದೆಯಂಟಿಸಿಕೊಂಡು ಸ್ವಕೇಂದ್ರಿತ ಬದುಕಿನಲ್ಲಿ ಮುಳುಗೇಳುತ್ತಿರುವ ನಾವುಗಳು ನಮ್ಮನ್ನು ಸುತ್ತುವರಿದ ಜೀವಸಂಕುಲದೊಂದಿಗೆ ಹೇಗೆ ಸ್ಪಂದಿಸಬೇಕು ಎನ್ನುವುದನ್ನು ರೂಢಿಸಿಕೊಳ್ಳಬೇಕಿದೆ, ಮಕ್ಕಳಿಗೂ ಹೇಳಿಕೊಡಬೇಕಿದೆ.

Viral Video: ದಯೆಗೆ ಜಗತ್ತನ್ನು ಬದಲಾಯಿಸುವ ಶಕ್ತಿ ಇದೆ, ನೋಡಿ ವಿಡಿಯೋ
ಬಾ ನನ್ನ ಮೇಲೆ ಮಲಗು...
Follow us on

Sleeping : ಎಡವಿದರೆ, ಮುಗ್ಗರಿಸಿದರೆ, ಬಿದ್ದರೆ, ಏನೋ ಕಳೆದುಕೊಂಡರೆ, ಏನೋ ಮುರಿದುಕೊಂಡರೆ, ಯಾರಿಂದಲೋ ಅವಮಾನ ಅನುಭವಿಸಿದರೆ, ತಪ್ಪಿಲ್ಲದೆ ಬೈಸಿಕೊಂಡರೆ… ಹೀಗೆ ಅರಿವಿದ್ದೋ ಇಲ್ಲದೆಯೋ ನಮ್ಮೊಂದಿಗಿರುವವರು ಇಂಥ ಸಂದರ್ಭವನ್ನು ಎದುರಿಸಿದಾಗ ನಾವು ಹೇಗಿರಬೇಕು? ಹೇಗಿರುತ್ತೇವೆ ಅಥವಾ ಹೇಗಿದ್ದೆವು? ಬಾಲ್ಯವನ್ನೊಮ್ಮೆ (Childhood) ನೆನಪಿಸಿಕೊಳ್ಳಿ. ಅಂಥದೇ ಬಾಲ್ಯವನ್ನು ನೆನಪಿಸುವ ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಈ ಮಗು ಕೂತಲ್ಲೇ ತೂಕಡಿಸುತ್ತಿದೆ. ಪುಟ್ಟ ಬೆಂಚಿನ ಅಂಚಿನಲ್ಲಿ ಕುಳಿತ ಇದು ಇನ್ನೇನು ಬಿದ್ದೇ ಹೋಗಬಹುದು ಎನ್ನುವಷ್ಟು ನಿದ್ರೆ. ಪಕ್ಕದಲ್ಲಿರುವ ಮಗು ಟೀಚರ್​ ಕಡೆ ನೋಡುತ್ತ ಪಕ್ಕದಲ್ಲಿರುವ ಸ್ನೇಹಿತನೊಂದಿಗೆ ಹರಟೆಯನ್ನೂ ಹೊಡೆಯುತ್ತಿದೆ. ಹೀಗಿರುವಾಗ ಈ ಮಗು ತೂಕಡಿಸುತ್ತಿರುವುದು ಗಮನಕ್ಕೆ ಬಂದಿದ್ದೇ ಭುಜದ ಮೇಲೆ ಕೈಹಾಕಿ ತನ್ನ ಭುಜದ ಮೇಲೆ ಮಲಗಿಸಿಕೊಂಡಿದೆ. ಹಾಗೆ ಮಲಗಿಸಿಕೊಳ್ಳುವ ಮೊದಲು ಆ ಮಗುವಿನ ಮುಖ ಗಮನಿಸಿದಿರಾ?

ಇದನ್ನೂ ಓದಿ : Viral Video: ಕೊಲ್ಕತ್ತೆಯ ಈ ರಸಗುಲ್ಲಾ ರೋಲ್​! ವ್ಲಾಗರ್​ ಕೊಟ್ಟ ಸ್ಪಷ್ಟನೆ ಇಲ್ಲಿದೆ

ನೆಟ್ಟಿಗರು ಈ ವಿಡಿಯೋ ನೋಡಿ ಪ್ರಫುಲ್ಲಿತರಾಗುತ್ತಿದ್ದಾರೆ. ಧಾವಂತದ ಬದುಕಿನಲ್ಲಿ ಇದು ತಂಗಾಳಿಯಂತೆ ನಮ್ಮನ್ನು ಅರಳಿಸುತ್ತಿದೆ ಎನ್ನುತ್ತಿದ್ದಾರೆ. ಇದು ಅತ್ಯಂತ ಮೌಲ್ಯಯುತವಾದ ಕ್ಷಣ. ಇದು ಮಾನವೀಯತೆಯ ನಿಜವಾದ ಶಕ್ತಿ. ಮೊದಲು ನಗಲು ಶುರು ಮಾಡಿದೆ ನಂತರ ನನಗವರಿಲ್ಲದೆಯೇ ಕಣ್ಣೀರಿಳಿದವು, ಇದು ಅತ್ಯಂತ ಹೃದ್ಯವಾಗಿದೆ ಅಂತೆಲ್ಲ ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ.

ಇದನ್ನೂ ಓದಿ : Viral: ಅತ್ತೆ ಸೊಸೆ ಒಂದೇ ಸೀರೆ; ಇದು ನಿಜಕ್ಕೂ ಆರ್ಥಿಕ ಹಿಂಜರಿಕೆ ಎನ್ನುತ್ತಿರುವ ನೆಟ್ಟಿಗರು

ದಯೆ, ಕರುಣೆ, ಅನುಕಂಪ, ಸಹಾನುಭೂತಿ, ಸಹಾಯ ಎನ್ನುವುದೇ ಮಾನವೀಯತೆಗೆ ಬುನಾದಿ.  ನಿತ್ಯಸಂಗತಿಗಳಲ್ಲಿ ಇವುಗಳನ್ನು ಕಂಡುಕೊಳ್ಳುವ ಬಗೆ ಹೇಗೆ ಎನ್ನುವುದನ್ನು ನಮ್ಮ ಮಕ್ಕಳಿಗೆ ಎಳವೆಯಲ್ಲಿಯೇ ಹೇಳಿಕೊಡಬೇಕು. ಅದಕ್ಕಾಗಿ ದೊಡ್ಡ ದೊಡ್ಡ ಪುಸ್ತಕಗಳನ್ನೇ ಓದಬೇಕು, ಪರೀಕ್ಷೆಗಳನ್ನೇ ಬರೆಯಬೇಕು ಅಂತೇನಿಲ್ಲ. ಪರದೆಗಳಿಗೆ ಅಂಟಿಕೊಂಡು ಸ್ವಕೇಂದ್ರಿತ ಬದುಕಿನಲ್ಲಿ ಮುಳುಗೇಳುತ್ತಿರುವ ನಾವುಗಳು ನಮ್ಮನ್ನು ಸುತ್ತುವರಿದ ಜೀವಸಂಕುಲದೊಂದಿಗೆ, ಮನುಷ್ಯರೊಂದಿಗೆ ಹೇಗೆ ಸ್ಪಂದಿಸಬೇಕು ಎನ್ನುವುದನ್ನು ರೂಢಿಸಿಕೊಳ್ಳಬೇಕಿದೆ.

ಏನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:11 pm, Tue, 30 May 23