ಉತ್ತರ ಪ್ರದೇಶದಲ್ಲಿ ಪೊಲೀಸರನ್ನೇ ಓಡಾಡಿಸಿದ ಈ ನಾಗರಾಜ!

| Updated By: ಶ್ರೀದೇವಿ ಕಳಸದ

Updated on: Sep 30, 2022 | 1:17 PM

Uttara Pradesh : ಪೊಲೀಸರೆಂದರೆ ಗಟ್ಟಿಗರು ಎಂಬ ಚಿತ್ರಣ ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿಬಿಟ್ಟಿದೆ. ಅಂಥಾ ಗಟ್ಟಿಗರನ್ನೂ ನಡುಗಿಸಿಬಿಟ್ಟಿದೆ ಈ ನಾಗರಹಾವು! ಕೊನೆಗೆ ಹಾವು ಹಿಡಿಯುವವರಿಗೆ ಶರಣಾಗಿದ್ದಾರೆ ಪೊಲೀಸರು.

ಉತ್ತರ ಪ್ರದೇಶದಲ್ಲಿ ಪೊಲೀಸರನ್ನೇ ಓಡಾಡಿಸಿದ ಈ ನಾಗರಾಜ!
ಹಾವು ಹಿಡಿಯುವವನಿಗೆ ಮೊರೆ ಹೋದ ಪೊಲೀಸರು
Follow us on

Viral Video : ಪೊಲೀಸರೆಂದರೆ ಧೈರ್ಯವಂತರು, ಸಾಹಸಿಗರು, ಎಂಥ ಅನ್ಯಾಯ ಮತ್ತು ದುಷ್ಟಶಕ್ತಿಯಿಂದ ಎಲ್ಲರನ್ನೂ ಕಾಪಾಡುವವರು ಎಂಬ ಚಿತ್ರಣ ಶತಮಾನಗಳಿಂದ ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿದೆ ಅಲ್ಲವೆ? ಆದರೆ ಉತ್ತರ ಪ್ರದೇಶದ ಜಾಲೌನ್​ ಪೊಲೀಸ್ ಠಾಣೆಯಲ್ಲಿ ನಾಗರಹಾವು ಕಾಣಿಸಿಕೊಂಡಾಗ ಪೊಲೀಸರು ಹೆದರಿ ಅತ್ತಿಂದಿತ್ತ ಇತ್ತಿಂದಿತ್ತ ಓಡಾಡಲಾರಂಭಿಸಿದ್ಧಾರೆ. ಯಾರೊಬ್ಬರಿಗೂ ಈ ಹಾವನ್ನು ಓಡಿಸುವುದರ ಬಗ್ಗೆ ಪರಿಣತಿ ಇಲ್ಲ, ಧೈರ್ಯವೂ ಇಲ್ಲ ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಉಪಾಯಗಾಣದೆ ಹಾವು ಹಿಡಿಯುವವರನ್ನು ಕರೆಸಲಾಗಿದೆ.

ಠಾಣೆಯಲ್ಲಿ ಪೊಲೀಸರು ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದರು. ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಈ ನಾಗರಹಾವು ಅಲ್ಲಿದ್ದವರ ಮೇಲೆ ದಾಳಿ ಮಾಡಲು ಹವಣಿಸಿತು. ಹೆದರಿದ ಪೊಲೀಸರು ಪ್ರಾಣ ಉಳಿಸಿಕೊಳ್ಳಲು ಠಾಣೆಯ ತುಂಬಾ ಓಡಾಡತೊಡಗಿದರು. ಕೊನೆಗೆ ಭಯದಿಂದ ಹೊರಗೆ ಓಡಿಬಂದರು. ತಕ್ಷಣವೇ ಹಾವು ಹಿಡಿಯುವವರನ್ನು ಠಾಣೆಗೆ ಕರೆತರಲಾಯಿತು. ವಿಡಿಯೋದಲ್ಲಿ ಗಮನಿಸಿ, ನಾಗರಹಾವನ್ನು ಹಾವು ಹಿಡಿಯುವ ವ್ಯಕ್ತಿ ಕೋಲಿನಿಂದ ಸಮಾಧಾನಿಸುತ್ತಿದ್ದಾರೆ. ಪೊಲೀಸರು ನಿಂತು ಈ ದೃಶ್ಯ ನೋಡುತ್ತಿದ್ದಾರೆ.

ಹಾವನ್ನು ಶಾಂತಗೊಳಿಸಿದ ನಂತರ ಪೆಟ್ಟಿಗೆಯಲ್ಲಿ ಬಂಧಿಸಲಾಗಿದೆ. ಆದರೆ ಪೆಟ್ಟಿಗೆಗೆ ಹಾಕುವಾಗಲೂ ಈ ನಾಗರಾವು ಭುಸಗುಡುತ್ತಲೇ ಇತ್ತು. ಅಂತೂ ಉಗ್ರಗೊಂಡಿದ್ದ ನಾಗಪ್ಪನನ್ನು ಹಾವು ಹಿಡಿಯುವವರು ಶಾಂತಗೊಳಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ!

ಯಮುನಾ ನದಿ ತೀರ ಹತ್ತಿರವೇ ಪೊಲೀಸ್​ ಠಾಣೆ ಇರುವುದರಿಂದ ಹಾವು ಠಾಣೆಗೆ ಬಂದಿರುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:15 pm, Fri, 30 September 22