Viral Video: ಪುಟ್ಟ ಮಗುವಿನ ಸಮೀಪ ಸುಳಿಯಲು ಯತ್ನಿಸಿದ ಕಾಳಿಂಗ ಸರ್ಪ; ಸ್ವಲ್ಪದರಲ್ಲೇ ತಪ್ಪಿದ ಅನಾಹುತ -ವಿಡಿಯೋ ನೋಡಿ

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಯೂಟ್ಯೂಬ್​ನಲ್ಲಿ ವಿಡಿಯೋವನ್ನು ಸುಮಾರು 86 ಸಾವಿರ ಜನರು ನೋಡಿದ್ದಾರೆ. ಹಾವು ಬರುತ್ತಿರುವುದನ್ನು ಕೂಡಲೇ ನೋಡಿದ್ದು ಮತ್ತು ಮುಂಜಾಗ್ರತೆ ವಹಿಸಿದ್ದು ತುಂಬಾ ಒಳ್ಳೆಯದಾಯ್ತು ಎಂದು ನೋಡುಗರು ಕಮೆಂಟ್ ಮಾಡಿದ್ದಾರೆ.

Viral Video: ಪುಟ್ಟ ಮಗುವಿನ ಸಮೀಪ ಸುಳಿಯಲು ಯತ್ನಿಸಿದ ಕಾಳಿಂಗ ಸರ್ಪ; ಸ್ವಲ್ಪದರಲ್ಲೇ ತಪ್ಪಿದ ಅನಾಹುತ -ವಿಡಿಯೋ ನೋಡಿ
ಕಾಳಿಂಗ ಸರ್ಪ ಮನೆಬಾಗಿಲಿಗೆ
Edited By:

Updated on: Jul 17, 2021 | 4:22 PM

ಹಾವು ಎಂದರೆ ಹಲವು ಮಂದಿಗೆ ತುಂಬಾ ಭಯ ಆಗಬಹುದು. ಇನ್ನೂ ಕೆಲವರು ಹಾವಿನ ಹೊಳೆವ ಮೈ, ನಯವಾದ ಪೊರೆಯನ್ನು ಕಂಡು ಖುಷಿ ಪಡುವವರೂ ಇರಬಹುದು. ಉರಗಪ್ರೇಮಿಗಳು, ಹಗ್ಗ ಕಂಡರೆ ಹಾವು ಎಂದು ಭ್ರಮೆಯಿಂದ ಹೌಹಾರುವವರೂ ನಮ್ಮ ಸುತ್ತಮುತ್ತ ಇರಬಹುದು. ಹಾಗಂತ ಹಾವುಗಳ ಬಗ್ಗೆ ತಿಳುವಳಿಕೆ ಮತ್ತು ಎಚ್ಚರಿಕೆ ಇರುವುದು ಅನಿವಾರ್ಯ. ಹಾವುಗಳು ಹೇಗೆ ನಡೆದುಕೊಳ್ಳುತ್ತವೆ ಎಂದು ಹೇಳುವುದು ಕಷ್ಟ. ವಿಷಪೂರಿತ ಹಾವುಗಳೂ ಇರುವುದರಿಂದ ಎಚ್ಚರಿಕೆಯಿಂದ ಇರುವುದು ಮುಖ್ಯವೇ ಆಗಿದೆ.

ಹಾವುಗಳ ಬಗ್ಗೆ ಇಷ್ಟೇಕೆ ಮಾತು ಅಂತೀರಾ? ಇಲ್ಲಿ ನಡೆದಿದೆ ನೋಡಿ ಒಂದು ಘಟನೆ. ಹಾವುಗಳಲ್ಲಿ ವಿಷಕಾರಿಯೂ ಭಯಾನಕವೂ ಆಗಿರುವ ಹಾವುಗಳಲ್ಲಿ ಕಾಳಿಂಗ ಸರ್ಪವೂ ಒಂದು. ಕರ್ರಗೆ ಇರುವ ಈ ಹಾವು ಬಹಳ ದಪ್ಪವೂ ಉದ್ದವೂ ಆಗಿ ನೋಡಲು ಭಯಾನಕವಾಗಿಯೇ ಕಾಣುತ್ತದೆ. ಇಂತಹ ಹಾವೊಂದು ಮಗುವಿನ ಸಮೀಪ ಸುಳಿಯಲು ಬಂದುಬಿಟ್ಟ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ.

ವಿಯೆಟ್ನಾಂನ ಮನೆಯ ಹೊರಭಾಗದಲ್ಲಿ ಈ ಘಟನೆ ನಡೆದಿದೆ. ಮಗುವೊಂದು ಹಿರಿಯರ ಜೊತೆಗೆ ಕುಳಿತುಕೊಂಡು ಆಟ ಆಡುತ್ತಿತ್ತು. ಅಲ್ಲೇ ಮನೆಯ ಹಿರಿಯರು ಕೂಡ ಕುಳಿತಿದ್ದರು. ಅವರು ಅಲ್ಲಿ ಇರುವಾಗಲೇ ಕಾಳಿಂಗ ಸರ್ಪ ಒಂದು ಅಲ್ಲಿಗೆ ಬಂದುಬಿಟ್ಟಿದೆ. ಅಲ್ಲಿದ್ದ ಹಿರಿಯರು ತಕ್ಷಣಕ್ಕೆ ಮಗುವನ್ನು ಎತ್ತಿ ಈಚೆಗೆ ಕೊಂಡಯ್ಯಲು ಮುಂದಾಗಿಲ್ಲ. ಆಗ ಮತ್ತೊಬ್ಬರು ಓಡಿ ಬಂದು ಮಗುವನ್ನು ಮನೆಯ ಒಳಗೆ ಕರೆದುಕೊಂಡು ಹೋಗಿದ್ದಾರೆ.

ಮಗುವನ್ನು ಒಳಗೆ ಕರೆದುಕೊಂಡು ಹೋದಮೇಲೆ, ಅವರು ಮನೆಯ ಬಾಗಿಲು ಹಾಕಿ, ಹಾವನ್ನು ಓಡಿಸಲು ಮುಂದಾಗಿದ್ದಾರೆ. ಹಾವು ಅಷ್ಟರಲ್ಲೇ ನೆಲದಲ್ಲಿ ನುಸುಳಿಕೊಂಡು ಬಾಗಿಲಿನ ವರೆಗೆ ಬಂದಿದೆ. ಮನೆಯ ಬಾಗಿಲು ಹಾಕಿದ್ದರಿಂದ ಅಲ್ಲೇ ಸುಳಿದಾಡಿ ಬಳಿಕ ಹೊರಟುಹೋಗಿದೆ.

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಯೂಟ್ಯೂಬ್​ನಲ್ಲಿ ವಿಡಿಯೋವನ್ನು ಸುಮಾರು 86 ಸಾವಿರ ಜನರು ನೋಡಿದ್ದಾರೆ. ಹಾವು ಬರುತ್ತಿರುವುದನ್ನು ಕೂಡಲೇ ನೋಡಿದ್ದು ಮತ್ತು ಮುಂಜಾಗ್ರತೆ ವಹಿಸಿದ್ದು ತುಂಬಾ ಒಳ್ಳೆಯದಾಯ್ತು ಎಂದು ನೋಡುಗರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಈ ಫ್ರೆಂಚ್ ಫ್ರೈಸ್ ಬೆಲೆ ಬರೋಬ್ಬರಿ 15,000 ರೂಪಾಯಿ! ಕಾರಣವೇನು? ವಿವರ ಇಲ್ಲಿದೆ

‘ಐ ಗಾಟ್​ ಹರ್ಟ್​ ಮಮ್ಮಾ’; ಯಥರ್ವ್​​ ಎಸೆದ ಮೈಕ್​ ಬಿದ್ದಿದ್ದು ಆಯ್ರಾ ತಲೆಮೇಲೆ, ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್​

Published On - 4:22 pm, Sat, 17 July 21