ಪ್ರೀತಿಯಲ್ಲಿ ಬಿದ್ದವರಿಗೆ ಜಗತ್ತಿನ ಪರಿಜ್ಞಾನವೇ ಇರೋಲ್ಲ ಅಂತಾ ಹೇಳ್ತಾರೆ. ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ಲೋಕದ ಪರಿವೇ ಇಲ್ಲದೆ ಪ್ರೇಮಿಗಳು ರೊಮ್ಯಾನ್ಸ್ ಮಾಡಿ ಸಾರ್ವಜನಿಕರಿಗೆ ಮುಜುಗರ ತರಿಸುವ ಹಲವು ಘಟನೆಗಳು ನಡೆಯುತ್ತಲೇ ಇವೆ. ಇದೀಗ ಅಂತಹದೇ ಘಟನೆಯೊಂದು ನಡೆದಿದ್ದು, ಜಾತ್ರೆಯಲ್ಲಿ ಜನ ಜಂಗುಳಿಯ ನಡುವೆಯೇ ಪ್ರೇಮಿಗಳು ಲಿಪ್ ಟು ಲಿಪ್ ಕಿಸ್ ಮಾಡಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.
ಈ ಘಟನೆ ಮೀರತ್‌ನಲ್ಲಿ ನಡೆದಿದ್ದು, ಇಲ್ಲಿ ನಡೆದ ನೌಚಂಡಿ ಮೇಳದಲ್ಲಿ ಯಾರೋ ಕಿಸ್ಸಿಂಗ್ ಚಾಲೆಂಜ್ ನೀಡಿದ್ದು, ಜೋಡಿಯೊಂದು ಚಾಲೆಂಜ್ ನ ಭಾಗವಾಗಿ ಜನ ಜಂಗುಳಿಯ ನಡುವೆಯೇ ಬಹಿರಂಗವಾಗಿ ಲಿಪ್ ಟು ಲಿಪ್ ಕಿಸ್ ಮಾಡಿದ್ದಾರೆ. ಇವರ ಈ ಅತಿರೇಕದ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಈ ಕುರಿತ ಪೋಸ್ಟ್ ಒಂದನ್ನು ಶಾಲು ಅಗರ್ವಾಲ್ (shaluagarwal) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಜೋಡಿಯೊಂದು ಸವಾಲಿನ ಭಾಗವಾಗಿ ಜಾತ್ರೆಯಲ್ಲಿ ಬಹಿರಂಗವಾಗಿ ಚುಂಬಿಸುವ ಅಸಹ್ಯಕರ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಟೆರೇಸ್ ಮೇಲೆ ಲವರ್ ಜೊತೆ ಏಕಾಂತದಲ್ಲಿದ್ದಾಗ ಎಂಟ್ರಿ ಕೊಟ್ಟ ತಾಯಿ,ಬಿತ್ತು ನೋಡಿ ಚಪ್ಪಲಿ ಏಟು
ಜುಲೈ 22 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಸಾರ್ವಜನಿಕ ಸ್ಥಳದಲ್ಲಿ ಹೀಗೆ ಹುಚ್ಚಾಟ ಮೆರೆದಿದ್ದಕ್ಕೆ ನೆಟ್ಟಿಗರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ