ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು 10 ಕೆಜಿ ಆಹಾರ ತಿಂದು ಸಾವನ್ನಪ್ಪಿದ್ದ ಯುವತಿ
ವರದಿಗಳ ಪ್ರಕಾರ ಅತಿಯಾಗಿ ತಿನ್ನುವ ಚಟದಿಂದ ಯುವತಿ ಪ್ರಾಣ ಕಳೆದುಕೊಂಡಿದ್ದು, ಮರಣೋತ್ತರ ಪರೀಕ್ಷೆಯ ವೇಳೆ ಯುವತಿಯ ಹೊಟ್ಟೆಯಲ್ಲಿ ಜೀರ್ಣವಾಗದ ಆಹಾರವಿತ್ತು ಎಂದು ವೈದ್ಯರು ತಿಳಿಸಿದ್ದಾರೆ.
ಸೋಶಿಯಲ್ ಮೀಡಿಯಾಗಳಲ್ಲಿ ಫೇಮಸ್ ಆಗಲು ಸಾಕಷ್ಟು ಜನರು ಹರಸಾಹಸ ಮಾಡುತ್ತಾರೆ. ಇಲ್ಲೊಬ್ಬಳು ಯುವತಿ ಪುಡ್ ಬ್ಲಾಗರ್ ಆಗಿ ಗುರುತಿಸಿಕೊಂಡಿದ್ದು, ವಿಡಿಯೋ ಮಾಡುತ್ತಲೇ 10 ಕೆಜಿ ಆಹಾರ ತಿಂದಿದ್ದಾರೆ. ಪರಿಣಾಮ ಲೈವ್ ಸ್ಟ್ರೀಮಿಂಗ್‌ನಲ್ಲೇ ಹಠಾತ್ತನೆ ಸಾವನ್ನಪ್ಪಿದ್ದಾಳೆ. ಈ ಘಟನೆ ಚೀನಾದಲ್ಲಿ ನಡೆದಿದೆ. ವರದಿಗಳ ಪ್ರಕಾರ ಅತಿಯಾಗಿ ತಿನ್ನುವ ಚಟದಿಂದ ಯುವತಿ ಪ್ರಾಣ ಕಳೆದುಕೊಂಡಿದ್ದು, ಮರಣೋತ್ತರ ಪರೀಕ್ಷೆಯ ವೇಳೆ ಯುವತಿಯ ಹೊಟ್ಟೆಯಲ್ಲಿ ಜೀರ್ಣವಾಗದ ಆಹಾರವಿತ್ತು ಎಂದು ತಿಳಿದುಬಂದಿದೆ.
ಆಡಿಟಿ ಸೆಂಟ್ರಲ್ ವೆಬ್‌ಸೈಟ್‌ನ ವರದಿಯ ಪ್ರಕಾರ, ಚೀನಾ ಈ ರೀತಿಯ ವೀಡಿಯೊಗಳನ್ನು ಮಾಡುವವರಿಗೆ 10,000 ಯುವಾನ್ ಅಂದರೆ ಸುಮಾರು 1 ಲಕ್ಷ 17 ಸಾವಿರ ರೂಪಾಯಿಗಳವರೆಗೆ ದಂಡ ವಿಧಿಸಲಾಗುತ್ತದೆ. ಆದಾಗ್ಯೂ, ಚೀನಾ ಸೇರಿದಂತೆ ಏಷ್ಯಾದ ಹಲವು ದೇಶಗಳಲ್ಲಿ ‘ಮುಕ್‌ಬಾಂಗ್ ಸ್ಟ್ರೀಮ್’ ಇನ್ನೂ ಬಹಳ ಜನಪ್ರಿಯವಾಗಿದೆ. ಸಾವಿರಾರು ಜನರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಅತಿಯಾಗಿ ಆಹಾರ ಸೇವಿಸುತ್ತಾರೆ.
ಇದನ್ನೂ ಓದಿ: 19ನೇ ವಯಸ್ಸಿಗೆ ಮದುವೆ 23ಕ್ಕೆ ಗರ್ಭಿಣಿ; ವರದಕ್ಷಿಣೆಗಾಗಿ ಕೈ ಕಾಲು ಕತ್ತರಿಸಿ ಗರ್ಭಿಣಿಯ ಬರ್ಬರ ಹತ್ಯೆ
ಆಕೆಯ ಸಾವಿಗೆ ನಿಖರವಾದ ಕಾರಣವನ್ನು ಸಾರ್ವಜನಿಕವಾಗಿ ಘೋಷಿಸಲಾಗಿಲ್ಲವಾದರೂ, ಆಕೆಯ ದೇಹದ ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಹೊಟ್ಟೆಯಲ್ಲಿ ಸಾಕಷ್ಟು ಆಹಾರವಿದೆ ಎಂದು ತಿಳಿದುಬಂದಿದೆ. ತಿಂದ ಆಹಾರ ಅಜೀರ್ಣವಾಗಿ ಸಾವನ್ನಪ್ಪಿದ್ದಾಳೆ ಎಂದು ತೋರುತ್ತದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ