ಹಿಂದೆಲ್ಲಾ ದಟ್ಟ ಅರಣ್ಯಗಳ ಮಧ್ಯೆ ವಾಸಿಸುತ್ತಿದ್ದ ಬುಡಕಟ್ಟು ಜನಾಂಗದವರು ಕಾಡಿನಲ್ಲಿ ಸಿಗುವ ಪ್ರಾಣಿ ಪಕ್ಷಿಗಳನ್ನು ಮಾತ್ರವಲ್ಲದೆ ಮನುಷ್ಯ ಮಾಂಸವನ್ನು ಕೂಡಾ ತಿನ್ನುತ್ತಿದ್ದರು. ಕೋಳಿ, ಕುರಿ ಇತ್ಯಾದಿ ಮಾಂಸ ತಿನ್ನುವವರಿಗೆ ಈ ಮನುಷ್ಯನ ಮಾಂಸದ ರುಚಿ ಹೇಗಿರಬಹುದು ಎಂಬ ಕುತೂಹಲ ಸಹಜವಾಗಿ ಮೂಡುತ್ತದೆ. ಅದೇ ರೀತಿ ಬುಡಕಟ್ಟು ಸಮುದಾಯವನ್ನು ಭೇಟಿಯಾದ ಸಂದರ್ಭದಲ್ಲಿ ಟ್ರಾವೆಲ್ ವ್ಲಾಗರ್ ಒಬ್ಬರಿಗೂ ಈ ಪ್ರಶ್ನೆ ಮೂಡಿದ್ದು, ಅವರು ಬುಡಕಟ್ಟು ಜನಾಂಗದವರ ಬಳಿಯೇ ಮನುಷ್ಯ ಮಾಂಸದ ರುಚಿ ಹೇಗಿರುತ್ತೆ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಈ ಪ್ರಶ್ನೆಗೆ ಬಹಳ ಸೊಗಸಾಗಿ ವಿವರಣೆಯನ್ನು ನೀಡಿದ್ದು, ಈ ಕುರಿತ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಭಾರತದ ಟ್ರಾವೆಲ್ ವ್ಲಾಗರ್ ಧೀರಜ್ ಮೀನಾ ಅವರು ಅವರು ಇಂಡೋನೇಷ್ಯಾದ ಅಪುವಾ ಪ್ರಾಂತ್ಯದ ಕೊರೊವೈ ಬುಡಕಟ್ಟು ಜನಾಂಗವನ್ನು ಭೇಟಿಯಾಗಿದ್ದ ಸಂದರ್ಭದಲ್ಲಿ ʼಮನುಷ್ಯನ ಮಾಂಸದ ರುಚಿ ಹೇಗಿರುತ್ತದೆʼ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಹೌದು ಅವರು ಇತ್ತೀಚಿಗೆ ಇಂಡೋನೇಷ್ಯಾಗೆ ಪ್ರವಾಸ ಹೋಗಿದ್ದ ಸಂದರ್ಭದಲ್ಲಿ ಇಲ್ಲಿನ ದಟ್ಟಾರಣ್ಯದಲ್ಲಿ ವಾಸಿಸುವ ಕೊರೊವೈ ಬುಡಕಟ್ಟು ಜನಾಂಗದವರೊಂದಿಗೆ 3 ದಿನಗಳ ಕಾಲ ಇದ್ದು, ಅವರ ಕೆಲವು ಇಂಟರೆಸ್ಟಿಂಗ್ ಸಂಗತಿಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಮನುಷ್ಯನ ಮಾಂಸದ ರುಚಿ ಹೇಗಿರುತ್ತದೆ ಎಂಬ ಪ್ರಶ್ನೆಗೂ ಉತ್ತರವನ್ನು ಕಂಡುಕೊಂಡಿದ್ದಾರೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಧೀರಜ್ ಕೊರೊವೈ ಬುಡಕಟ್ಟು ಜನಾಂಗದವರ ಬಳಿ ಮಾನವನ ಮಾಂಸದ ರುಚಿ ಹೇಗಿರುತ್ತದೆ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಸಮುದಾಯದ ಹಿರಿಯ ಸದಸ್ಯ, ನಾನು ಮನುಷ್ಯನ ಮಾಂಸವನ್ನು ತಿನ್ನಲ್ಲ. ಹಿಂದೆಲ್ಲಾ ತಿನ್ನುತ್ತಿದ್ದರು, ಅದು ಕೂಡಾ ತಮ್ಮ ಮೇಲೆ ದಾಳಿ ಮಾಡಲು ಬರುತ್ತಿದ್ದ ಹಾಗೂ ನಮ್ಮ ಸಮುದಾಯದ ಮಹಿಳೆಯರನ್ನು ಅಪಹರಿಸುತ್ತಿದ್ದ ಶತ್ರುಗಳನ್ನು ಮಾತ್ರ ಕೊಂದು ಅವರ ಮಾಂಸವನ್ನು ತಿನ್ನುತ್ತಿದ್ದರು ಎಂದು ಹೇಳಿದ್ದಾರೆ. ಹಾಗೂ ನಮ್ಮ ತಂದೆಯವರು ಹೇಳುತ್ತಿದ್ದಂತೆ ಮಾನವನ ಮಾಂಸದ ರುಚಿಯು ʼಹಂದಿ ಮಾಂಸʼದ ರುಚಿಯನ್ನು ಹೋಲುತ್ತದೆ ಎಂಬುವುದನ್ನು ಕೂಡಾ ಹೇಳಿದ್ದಾರೆ. ಈ ಬುಡಕಟ್ಟು ಸಮುದಾಯದವರು ನೀಡಿದ ಮಾಹಿತಿಯಂತೆ ಮನುಷ್ಯನ ಮಾಂಸದ ರುಚಿಯು ಹಂದಿ ಮಾಂಸದಂತಿರುತ್ತದೆ.
ಇದನ್ನೂ ಓದಿ: ನಾಲಿಗೆಯ ಮೇಲೆ ಲವರ್ ಹೆಸರನ್ನು ಹಚ್ಚೆ ಹಾಕಿಸಿಕೊಂಡ ಯುವಕ
ghoomatainsan ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅಲ್ಲಾ ಅವರಿಗೆಲ್ಲ ಮನುಷ್ಯನ ಮಾಂಸ ಎಲ್ಲಿಂದ ಸಿಗುತ್ತಿತ್ತುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ಸ್ಟೋರಿಯನ್ನು ಕೇಳಿ ನರಭಕ್ಷಕ ಚಲನಚಿತ್ರಗಳ ನೆನಪಾಯಿತುʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ