ಮಕ್ಕಳೆದುರು ಭೋಜಪುರಿ ಹಾಡಿಗೆ ನರ್ತಿಸಿದ ಶಿಕ್ಷಕಿಯನ್ನು ಅಮಾನತುಗೊಳಿಸುವಂತೆ ನೆಟ್ಟಿಗರ ಒತ್ತಾಯ

| Updated By: ಶ್ರೀದೇವಿ ಕಳಸದ

Updated on: Dec 03, 2022 | 10:10 AM

Teacher : ಸನಾತನ ಧರ್ಮದಲ್ಲಿ ಗುರುವಿನ ಸ್ಥಾನಕ್ಕೆ ಅಪಾರ ಗೌರವವಿದೆ. ಇಂದಿನ ಶಿಕ್ಷಕರು ಇದನ್ನು ಕಾಪಾಡಿಕೊಳ್ಳಬೇಕು ಮಕ್ಕಳಿಗೂ ಕಲಿಸಬೇಕು ಎನ್ನುತ್ತಿದ್ದಾರೆ ನೆಟ್ಟಿಗರು. ಅಷ್ಟೇ ಅಲ್ಲ ಈ ನೃತ್ಯ ಅಸಭ್ಯವಾಗಿದೆ ಎಂದೂ ಹೇಳುತ್ತಿದ್ದಾರೆ.

ಮಕ್ಕಳೆದುರು ಭೋಜಪುರಿ ಹಾಡಿಗೆ ನರ್ತಿಸಿದ ಶಿಕ್ಷಕಿಯನ್ನು ಅಮಾನತುಗೊಳಿಸುವಂತೆ ನೆಟ್ಟಿಗರ ಒತ್ತಾಯ
ತರಗತಿಯಲ್ಲಿ ಮಕ್ಕಳೆದುರು ಭೋಜಪುರಿ ಹಾಡಿಗೆ ನರ್ತಿಸಿದ ಶಿಕ್ಷಕಿ
Follow us on

Viral Video : ಶಿಕ್ಷಕರು ಮಕ್ಕಳಲ್ಲಿ ಉತ್ಸಾಹ ತುಂಬಲು ಹೀಗೆ ಹಾಡು, ನೃತ್ಯ ಮತ್ತಿತರೇ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ತೊಡಗಿಕೊಳ್ಳುವ ಸಾಕಷ್ಟು ವಿಡಿಯೋಗಳನ್ನು ನೀವು ನೋಡಿದ್ದೀರಿ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಶಿಕ್ಷಕಿಯೊಬ್ಬರು ತರಗತಿಯಲ್ಲಿ ಮಕ್ಕಳೆದುರು ಭೋಜಪುರಿ ಹಾಡಿಗೆ ನರ್ತಿಸಿದ್ದಾರೆ. ನೆಟ್ಟಿಗರು ಈ ವಿಡಿಯೋ ನೋಡಿ ಕೋಪಗೊಂಡಿದ್ದಾರೆ. ಶಿಕ್ಷಕಿಯ ಈ ನಡೆ ಉಚಿತವಾಗಿಲ್ಲ ಎಂದು ಆರೋಪಿಸುತ್ತಿದ್ದಾರೆ. ಅಷ್ಟೇ ಅಲ್ಲ ಅವರನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.

ಶಿಕ್ಷಕಿಯೂ ಮತ್ತು ಮಕ್ಕಳು ಖುಷಿಯಿಂದಲೇ ಈ ನೃತ್ಯದಲ್ಲಿ ಪಾಲ್ಗೊಂಡಿದ್ದಾರೆ. ಪಾಟ್ಲಿ ಕಮಾರಿಯಾ ಮೋರಿ ಎಂಬ ಹಾಡಿಗೆ ನೃತ್ಯವನ್ನು ಮಾಡುತ್ತಿದ್ದಾರೆ ಈ ಶಿಕ್ಷಕಿ. ಇವರು ರೀಲ್ಸ್​ಗಾಗಿಯೇ ಈ ವಿಡಿಯೋ ಮಾಡಿದಂತಿದೆ ಹಾಗಾಗಿ ಇವರನ್ನು ಅಮಾನತುಗೊಳಿಸಬೇಕು ಎನ್ನುತ್ತಿದ್ದಾರೆ ನೆಟ್ಟಿಗರು.

26,000ಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಶಿಕ್ಷಕಿ ಅಸಭ್ಯ ರೀತಿಯಲ್ಲಿ ನರ್ತಿಸಿದ್ಧಾರೆ ಎಂದು ನೆಟ್ಟಿಗರು ದೂರುತ್ತಿದ್ದಾರೆ. ತಕ್ಷಣವೇ ಈಕೆಯನ್ನು ಅಮಾನತುಗೊಳಿಸಬೇಕು. ಮಕ್ಕಳೆದುರು ಇಂಥ ನೃತ್ಯಗಳು ಸಲ್ಲದು, ಇದು ಶಿಕ್ಷಕ ವೃತ್ತಿಗೇ ಅವಮಾನ ಎಂದಿದ್ದಾರೆ ಒಬ್ಬರು.

ಐಟಂ ಡ್ಯಾನ್ಸ್ ಮಾಡಬೇಕಿಲ್ಲ ತರಗತಿಯಲ್ಲಿ. ಸನಾತನ ಧರ್ಮದಲ್ಲಿ ಶಿಕ್ಷಕ ಅಥವಾ ಗುರುವಿನ ಬಗ್ಗೆ ಅಪಾರ ಗೌರವ ಇದೆ. ಇದನ್ನು ಇಂದಿನ ಶಿಕ್ಷಕರು ಕಾಪಾಡಿಕೊಳ್ಳಬೇಕು ಮತ್ತು ಮಕ್ಕಳಿಗೂ ಕಲಿಸಬೇಕು ಎನ್ನುತ್ತಿದ್ಧಾರೆ ಹಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:09 am, Sat, 3 December 22