ಮನೆಯಲ್ಲಿ ಮದುವೆಯ ದಿನ ನಿಗದಿಯಾದ ಮೇಲೆ ಮೊದಲು ರೆಡಿಯಾಗೋದೇ ಲಗ್ನ ಪತ್ರಿಕೆ. ಇತ್ತೀಚೆಗೆ ಜನರು ಹೊಸ ಶೈಲಿಯಲ್ಲಿ ಲಗ್ನ ಪತ್ರಿಕೆ ತಯಾರಿಕೆಯನ್ನು ಯೋಚಿಸುತ್ತಾರೆ. ಜನರ ಮನಸೆಳೆಯುವ ಲಗ್ನ ಪತ್ರಿಕೆಗಳನ್ನು ಹುಡುಕುತ್ತಾರೆ. ಈಗೆಲ್ಲಾ ಹೊಸ ಹೊಸ ಥೀಮ್ನೊಂದಿಗೆ ವೆಡ್ಡಿಂಗ್ ಕಾರ್ಡ್ಗಳು ಸಿದ್ಧವಾಗುತ್ತಿವೆ. ಈ ಹಿಂದೆ ಆಧಾರ್ ಕಾರ್ಡ್ ಥೀಮ್ನೊಂದಿಗೆ ವಿಶಿಷ್ಟವಾಗಿ ಸಿದ್ಧಪಡಿಸಿದ ವೆಡ್ಡಿಂಗ್ ಕಾರ್ಡ್ ಚಿತ್ರ ಫುಲ್ ವೈರಲ್ ಆಗಿತ್ತು, ಇದೀಗ ಮತ್ತೊಂದು ಹೊಸ ಶೈಲಿಯ ವೆಡ್ಡಿಂಗ್ ಕಾರ್ಡ್ ನೆಟ್ಟಿಗರ ಕುತೂಹಲ ಕೆರಳಿಸಿದೆ. ವಕೀಲರೋರ್ವರು ತಮ್ಮ ಮದುವೆ ಕರೆಯೋಲೆಯನ್ನು ಸಂವಿಧಾನದ ಥೀಮ್ನೊಂದಿಗೆ ಸಿದ್ಧಪಡಿಸಿದ್ದಾರೆ. ಈ ಚಿತ್ರವನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದೆ. ಅಸ್ಸಾಂನ ಗುವಾಹಟಿಯ ವಕೀಲರು ಹರಿದ್ವಾರದಲ್ಲಿ ಸಹಾಯಕ ಪ್ರಾಧ್ಯಾಪಕಿ ವೃತ್ತಿಯಲ್ಲಿರುವ ಪೂಜಾ ಶರ್ಮಾ ಅವರನ್ನು ವಿವಾಹವಾಗುತ್ತಿದ್ದಾರೆ. ವಕೀಲ ಅಜಯ್ ಶರ್ಮಾ ಅವರು ತಮ್ಮ ಮದುವೆಯ ಕರೆಯೋಲೆಯನ್ನು ಸಂವಿಧಾನದ ಥೀಮ್ಗೆನೊಂದಿಗೆ ತಯಾರಿಸಿದ್ದಾರೆ.
ಸಮಾನತೆಯನ್ನು ಪ್ರತಿನಿಧಿಸಲು ನ್ಯಾಯದ ತಕ್ಕಡಿಯ ಎರಡೂ ಬದಿಯಲ್ಲಿ ವಧು ವರರ ಹೆಸರನ್ನು ಬರೆಯಲಾಗಿದೆ. ಮದುವೆಯ ಆಮಂತ್ರಣವು ಭಾರತೀಯ ಕಾನೂನು ಮತ್ತು ಹಕ್ಕುಗಳನ್ನು ಉಲ್ಲೇಖಿಸುತ್ತದೆ. ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಬುದುಕುವ ಹಕ್ಕಿನ ಅಡಿಯಲ್ಲಿ ಮದುವೆಯಾಗುವ ಹಕ್ಕು ಇದೆ. ಹಾಗಾಗಿ 2021 ನವೆಂಬರ್ 28 ಭಾನುವಾರದಂದು ನಾನು ಈ ಮೂಲಭೂತ ಹಕ್ಕನ್ನು ಬಳಸುವ ಸಮಯವಾಗಿದೆ ಎಂದು ವೆಡ್ಡಿಂಗ್ ಕಾರ್ಡ್ನಲ್ಲಿ ಹೇಳಲಾಗಿದೆ.
ಅಜಯ್ ಅವರು ಐದು ವರ್ಷಗಳಿಂದ ವಕೀಲ ವೃತ್ತಿಯಲ್ಲಿದ್ದಾರೆ. ತಮ್ಮ ಸಹೋದ್ಯೋಗಿಗಳೊಂದಿಗೆ ಮಾತನಾಡುತ್ತಾ ಈ ಹೊಸ ಶೈಲಿಯಲ್ಲಿ ವೆಡ್ಡಿಂಗ್ ಕಾರ್ಡ್ ತಯಾರಿಸುವ ಪ್ಯ್ಲಾನ್ ಹೊಳೆಯಿತು. ವಿಭಿನ್ನವಾಗಿ ಕಾಣುವಂತೆ ವೆಡ್ಡಿಂಗ್ ಕಾರ್ಡ್ ತಯಾರಿಸುವ ಪ್ಲ್ಯಾನ್ ಹೊಂದಿದ್ದೆ. ಸಾಮಾನ್ಯವಾಗಿ ಮದುವೆ ಕಾರ್ಡ್ ಅಂದಾಕ್ಷಣ ಜನರು ಸ್ಥಳ, ದಿನಾಂಕವನ್ನು ಓದುತ್ತಾರೆ. ಆದರೆ ಬರೆದಿರುವ ಉಳಿದ ವಿವರಗಳನ್ನು ಯಾರೂ ಓದುವುದಿಲ್ಲ. ಆದರೆ ನನ್ನ ಲಗ್ನ ಪತ್ರಿಕೆಯಲ್ಲಿ ಹಾಗಾಗಲು ನಾನು ಬಿಡಲಿಲ್ಲ. ಲಗ್ನ ಪತ್ರಿಕೆಯ ಮೊದಲಿನಿಂದ ಕೊನೆಯವರೆಗೂ ಜನರು ಓದುವಂತಿದೆ ಎಂದು ಟೈಮ್ಸ್ ನೌ ಜೊತೆ ವರ ಅಜಯ್ ಮಾತನಾಡಿದ್ದಾರೆ.
ಅಜಯ್ ಅವರು ಸ್ನೇಹಿತನ ಸಹಾಯದಿಂದ ವೆಡ್ಡಿಂಗ್ ಕಾರ್ಡ್ ತಯಾರಿಸಿದರು ಮತ್ತು ಈ ಲಗ್ನ ಪತ್ರಿಕೆಯನ್ನು ತಮ್ಮ ಸಹುದ್ಯೋಗಿಗಳಿಗೆ ನೀಡಲು ತೀರ್ಮಾನಿಸಿದರು. ಮದುವೆಯ ಕಾರ್ಡ್ನಲ್ಲಿ ಅವರ ತಂದೆಯ ಫೋನ್ನಂಬರ್ ನಮೂದಿಸಿದ್ದರಿಂದ ಅಜಯ್ ಅವರ ತಂದೆಗೆ ಪೋನ್ ಕರೆಗಳು ಬರಲು ಪ್ರಾರಂಭಿಸಿದವು. ಆಗಲೇ ಅವರ ತಂದೆ ಆಶ್ಚರ್ಯಚಕಿತರಾಗಿ ನನ್ನ ಬಳಿ ಬಂದು, ಎಷ್ಟು ರೀತಿಯ ವೆಡ್ಡಿಂಗ್ ಕಾರ್ಡ್ ಮಾಡಿಸಿದ್ದೀಯಾ? ಎಂದು ಪ್ರಶ್ನಿಸಿದ್ದು. ಆಗ ಒಂದು ಸಾಂಪ್ರದಾಯಿಕವಾಗಿ ಹಾಗೂ ನನ್ನ ಸಹೋದ್ಯೋಗಿಗಳಿಗೆ ನೀಡಲು ಮತ್ತೊಂದು ರೀತಿಯ ವಿಶಿಷ್ಟ ವೆಡ್ಡಿಂಗ್ ಕಾರ್ಡ್ ಎಂದು ಹೇಳಿದೆ ಎಂದು ಮಾಹಿತಿ ಅಜಯ್ ಹಂಚಿಕೊಂಡಿದ್ದಾರೆ.
ಈ ಹೊಸಬಗೆಯ ಮದುವೆ ಕಾರ್ಡ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾ ಪ್ರತಿಕ್ರಿಯೆ ನೀಡುತ್ತಿದ್ದಾರೆ. ವಿವಾಹ ಕೂಡಾ ನ್ಯಾಯಾಲಯದ ಥೀಮ್ನೊಂದಿಗೆ ನಡೆಯುತ್ತದೆಯೇ? ಎಂದು ಓರ್ವರು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ತಮಾಷೆ ಮಾಡಿದ್ದಾರೆ. ಇದೇ ರೀತಿ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:
Viral Photo: ಡಿಐಜಿಯಾಗಿರುವ ಅಪ್ಪನಿಗೆ ಸಲ್ಯೂಟ್ ಮಾಡಿದ ಪೊಲೀಸ್ ಅಧಿಕಾರಿ ಮಗಳು; ಹೆಮ್ಮೆಯ ಕ್ಷಣದ ಫೋಟೋ ವೈರಲ್
Viral Video: ಸ್ಕೂಟರ್ ಕದಿಯುವ ಅವಸರದಲ್ಲಿ ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದ ಕಳ್ಳರು! ವಿಡಿಯೊ ಫುಲ್ ವೈರಲ್
Published On - 11:47 am, Fri, 26 November 21