Mumbai : ಮುಂಬೈನ ಗೋರೆಗಾಂವ್ ಫಿಲ್ಮ್ ಸಿಟಿಯ (Film City) ಮರಾಠಿ ಸೀರಿಯಲ್ ಸೆಟ್‌ನಲ್ಲಿ ಮತ್ತೆ ಚಿರತೆಮರಿಯೊಂದು ಕಾಣಿಸಿಕೊಂಡಿದೆ. ಪರಿಣಾಮವಾಗಿ ಅಲ್ಲಿ ಕೆಲಸದಲ್ಲಿ ತೊಡಗಿದ್ದ ಸೀರಿಯಲ್ನ ತಂಡದವರು ಭಯದಿಂದ ಓಡಿದ್ದಾರೆ. ಈ ದೃಶ್ಯವನ್ನು ANI ಸುದ್ದಿಸಂಸ್ಥೆಯು ಟ್ವೀಟ್ ಮಾಡಿದೆ. ಆಲ್ ಇಂಡಿಯನ್ ಸಿನಿ ವರ್ಕರ್ಸ್ ಅಸೋಸಿಯೇಷನ್ ಅಧ್ಯಕ್ಷ ಸುರೇಶ್ ಶ್ಯಾಮಲಾಲ್ ಗುಪ್ತಾ, ‘ಸೆಟ್‌ನಲ್ಲಿ 200 ಕ್ಕೂ ಹೆಚ್ಚು ಜನರಿದ್ದರು. ಯಾರಾದರೂ ಪ್ರಾಣಾಪಾಯಕ್ಕೆ ಈಡಾಗುವ ಸಾಧ್ಯತೆ ಇತ್ತು. ಕಳೆದ 10 ದಿನಗಳಲ್ಲಿ ಈ ಪ್ರಕರಣ ನಾಲ್ಕನೇ ಸಲ ಮರುಕಳಿಸಿದೆ. ಈ ನಿಟ್ಟಿನಲ್ಲಿ ಈತನಕವೂ ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿಲ್ಲ’ ಎಂದು ಕಿಡಿಕಾರಿದ್ದಾರೆ.
#WATCH | A leopard, along with its cub, entered the sets of a Marathi TV serial in Goregaon Film City, Mumbai yesterday.
ಇದನ್ನೂ ಓದಿAll Indian Cine Workers Association president Suresh Shyamlal Gupta says, “More than 200 people were present at the set, someone could have lost life. This… pic.twitter.com/m1YgSXARl6
— ANI (@ANI) July 27, 2023
‘ಅಜೂನಿ’ ಧಾರಾವಾಹಿಯ ಸೆಟ್ನೊಳಗೆ ಕಾಡುಪ್ರಾಣಿಗಳು ಕಾಣಿಸಿಕೊಳ್ಳುತ್ತಿವೆ. ಜು. 18ರಂದು ಫಿಲ್ಮ್ ಸಿಟಿಯಲ್ಲಿರುವ ನಾಯಿಯೊಂದರ ಮೇಲೆ ಚಿರತೆಯು ದಾಳಿ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಘಟನೆಯ ನಂತರ ರೆಸ್ಕಿಂಕ್ ಅಸೋಸಿಯೇಶನ್ ಫಾರ್ ವೈಲ್ಡ್ ಲೈಫ್ ವೆಲ್ಫೇರ್ (RAWW) ಸಂಸ್ಥಾಪಕ ಮತ್ತು ಅಧ್ಯಕ್ಷ ಪವನ್ ಶರ್ಮಾ, ‘ಮಳೆಗಾಲದ ಈ ಅವಧಿಯಲ್ಲಿ ಈ ಪ್ರದೇಶದಲ್ಲಿ ಎದೆಮಟ್ಟದತನಕ ಹುಲ್ಲು ಬೆಳೆದುನಿಂತಿರುತ್ತದೆ. ಅರಣ್ಯ ಇಲಾಖೆಯು ಚಿರತೆಪೀಡಿತ ಪ್ರದೇಶಗಳಲ್ಲಿ ಹುಲ್ಲಿನ ಕಟಾವು ನಡೆಸುತ್ತಿದೆ. ಇದರೊಂದಿಗೆ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನೂ ಪ್ರಾರಂಭಿಸಿದೆ. ಈ ಎಲ್ಲದರೊಂದಿಗೆ ಸ್ಥಳೀಯರು ಮತ್ತು ಫಿಲ್ಮ್ ಸಿಟಿ ಸಿಬ್ಬಂದಿ ಈ ಬಗ್ಗೆ ಎಚ್ಚೆತ್ತುಕೊಂಡು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : Viral Video: ಕೈಲಾಸ ಪರ್ವತದಲ್ಲಿ ಶಿವ; ‘ಈಕೆ ಪಾರ್ವತಿಯ ಅವತಾರ, ಗಾಢನಿದ್ರೆಯಿಂದ ನಮ್ಮೆಲ್ಲರನ್ನು ಎಚ್ಚರಿಸುತ್ತಿದ್ದಾರೆ‘
ಸಂಜಯ್ ಗಾಂಧೀ ರಾಷ್ಟ್ರೀಯ ಉದ್ಯಾನದ ಗಡಿಭಾಗವು ಚಿರತೆಗಳ ವಾಸಸ್ಥಾನವಾಗಿದೆ. ಇದಕ್ಕೆ ಹೊಂದಿಕೊಂಡೇ ಈ ಫಿಲ್ಮ್ ಸಿಟಿ ಇದೆ. ಹಾಗಾಗಿ ಚಿರತೆಗಳು ಆಗಾಗ ಶೂಟಿಂಗ್ ಸೆಟ್ಗೆ ಬಂದು ಸೀರಿಯಲ್ ತಂಡವನ್ನು ಕೆಟ್ಟಕನಸಿನಂತೆ ಕಾಡುತ್ತಿವೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 1:40 pm, Thu, 27 July 23