Viral Video : ದೂರದಲ್ಲಿದ್ದುಕೊಂಡೇ ಹೀಗೆ ಹತ್ತಿರದಿಂದ ವನ್ಯಜೀವಿಗಳನ್ನು ನೋಡುವುದು ರಮ್ಯ ಅನುಭವವನ್ನು ಕೊಡುತ್ತದೆ. ಇದಕ್ಕೆ ನಾವೆಲ್ಲರೂ ಧನ್ಯವಾದ ಹೇಳಬೇಕಿರುವುದು ವನ್ಯಜೀವಿ ಛಾಯಾಗ್ರಾಹಕರಿಗೆ. ಸೆಕೆಂಡು ಲೆಕ್ಕದ ವಿಡಿಯೋಗೆ ಅವರು ದಿನಗಟ್ಟಲೆ ಸಮಯ, ಶ್ರಮ ವಹಿಸಿರುತ್ತಾರೆ. ಸಾಕಷ್ಟು ಅಪಾಯವನ್ನೂ ಎದುರಿಸಿರುತ್ತಾರೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ಅನ್ನು ಐಎಫ್ಎಸ್ ಅಧಿಕಾರಿ ಸುಸಾಂತ ನಂದಾ ಟ್ವೀಟ್ ಮಾಡಿದ್ದಾರೆ.
The elusive snow leopard during snow fall…
At Karakoram Range.
VC:WWF pic.twitter.com/gFoziwMyxm ಇದನ್ನೂ ಓದಿ— Susanta Nanda (@susantananda3) November 23, 2022
ಅತ್ಯಂತ ಮನೋಹರವಾದಂಥ ಹಿಮಚಿರತೆಯ ವಿಹಾರದೃಶ್ಯವಿದು. ತಲೆಯ ಮೇಲೆ ಹಿಮ ಉದುರಿ ಬೀಳುತ್ತಿದ್ದಂತೆ ಅದನ್ನು ಕಣ್ಣುಮುಚ್ಚಿ ತಲೆಎತ್ತಿ ಮನಸಾ ಅನುಭವಿಸುವುದನ್ನು ನೋಡಿ. ಈಗಾಗಲೇ ಈ ವಿಡಿಯೋ ಅನ್ನು 44,000ಕ್ಕೂ ಹೆಚ್ಚು ಜನರು ನೋಡಿದ್ದಾರೆ. 3,400 ಜನರು ಇದನ್ನು ಇಷ್ಟಪಟ್ಟಿದ್ದಾರೆ. ಬೆಕ್ಕಿನ ಜಾತಿಗೆ ಸೇರಿದ ಇವು ಯಾವಾಗಲೂ ಸುಂದರ ಎಂದಿದ್ದಾರೆ ಒಬ್ಬರು. ಇಂಥ ಅಪರೂಪದ ದೃಶ್ಯವನ್ನು ಸೆರೆಹಿಡಿದ ಫೋಟೋಗ್ರಾಫರ್ಗೆ ಸಲಾಮ್ ಎಂದಿದ್ದಾರೆ ಇನ್ನೂ ಒಬ್ಬರು. ಎಂಥ ಹ್ಯಾಂಡ್ಸಮ್ ಆಗಿದಾನೆ ಇವ ಎಂದಿದ್ದಾರೆ ಮತ್ತೊಬ್ಬರು. ಭಯಂಕರ! ಆದರೆ ಅಷ್ಟೇ ಮುದ್ದು ಎಂದಿದ್ಧಾರೆ ಮಗದೊಬ್ಬರು.
ಎಂಥ ಚೆಂದದ ವಿಡಿಯೋ ಅಲ್ವಾ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ