Pune: ಪುಣೆಯಲ್ಲಿ ಹಾಡಹಗಲೇ ವ್ಯಕ್ತಿಯೊಬ್ಬ ಈ ಹುಡುಗಿಯ ಹಿಂದೆ ಚಾಕುವಿನಿಂದ ಇರಿಯಲು ಓಡುತ್ತಿದ್ದಾನೆ. ಆಗ ಅಲ್ಲಿಯೇ ಇದ್ದ ಲೆಶ್ಪಾಲ್ ಖಿಬಾಗೆ (Leshpal Khibage) ಎಂಬ ವ್ಯಕ್ತಿ ಮಧ್ಯಪ್ರವೇಶಿಸಿ, ಆರೋಪಿಯನ್ನು ಬೆನ್ನಟ್ಟಿ ಹುಡುಗಿಯ ಜೀವ ಉಳಿಸಿದ್ದಾರೆ. ಅಷ್ಟೇ ಅಲ್ಲ ಆರೋಪಿ ಶಂತನು ಜಾಧವ್ ತಪ್ಪಿಸಿಕೊಳ್ಳದಂತೆ ಹಿಡಿದಿದ್ದಾರೆ. ಇದೆಲ್ಲವನ್ನೂ ಗಮನಿಸುತ್ತಿದ್ದ ದಾರಿಹೋಕರು ಲೆಶ್ಪಾಲ್ರೊಂದಿಗೆ ಕೈಜೋಡಿಸಿದ್ಧಾರೆ. ಪೊಲೀಸರು ಆರೋಪಿ ಶಂತನುವನ್ನು ಕೂಡಲೇ ಬಂಧಿಸಿದ್ದಾರೆ- ಈ ಟ್ವೀಟ್ ಇದೀಗ ವೈರಲ್ ಆಗುತ್ತಿದೆ. ನೆಟ್ಟಿಗರು ಲೆಶ್ಪಾಲ್ನ ಸಾಹಸ ಮತ್ತು ಕರ್ತವ್ಯಪ್ರಜ್ಞೆಯನ್ನು ಶ್ಲಾಘಿಸುತ್ತಿದ್ದಾರೆ.
He is Leshpal Khibage.
ಇದನ್ನೂ ಓದಿWhen a man was running behind a girl to stab her in Pune. Leshpal intervened & saved girl’s life. He grabbed the sickle & also stopped the man from escaping
Many others also came together to save girl. Accused man Shantanu Jadhav arrested
Thank you, Pune pic.twitter.com/nCFhs0UQ5g
— Anshul Saxena (@AskAnshul) June 27, 2023
ಮೇಲಿನ ಮತ್ತು ಕೆಳಗಿನ ಟ್ವೀಟ್ ಒಂದೇ ಪ್ರಕರಣಕ್ಕೆ ಸಂಬಂಧಿಸಿದವು. ಆರೋಪಿಯ ಹೆಸರನ್ನು ಯಾಕೆ ಬಹಿರಂಗಗೊಳಿಸಿಲ್ಲ ಎಂದು ಈ ಕೆಳಗಿನ ಟ್ವೀಟ್ನಲ್ಲಿ ಕೇಳುತ್ತಿದ್ದಾರೆ ನೆಟ್ಟಿಗರು. ಈ ಟ್ವೀಟ್ನ ಸಾರಾಂಶ ಹೀಗಿದೆ. ”ಮಹಾರಾಷ್ಟ್ರದ ಸದಾಶಿವ ಪೇಟೆಯ ಪೆರುಗೇಟ್ನಲ್ಲಿ 19 ವರ್ಷದ ಯುವತಿಯ ಮೇಲೆ 21 ವರ್ಷದ ಯುವಕ ಹರಿತವಾದ ಆಯುಧದಿಂದ ಹಲ್ಲೆ ಮಾಡಿದ್ದಾನೆ. ಆರೋಪಿ ಮತ್ತು ಯುವತಿ ಮಾಜಿ ಸಹಪಾಠಿಗಳು. ಈ ಯುವತಿ ತನ್ನ ಸ್ನೇಹಿತನೊಂದಿಗೆ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದಾಗ, ಆರೋಪಿಯೊಂದಿಗೆ ಮಾತನಾಡಲು ನಿರಾಕರಿಸಿದ್ದಾಳೆ. ಆಗ ಈ ದುರ್ಘಟನೆ ನಡೆದಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 307 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ, ತನಿಖೆ ನಡೆಯುತ್ತಿದೆ.- ಸಂದೀಪ್ ಗಿಲ್, ಪೊಲೀಸ್ ಅಧಿಕಾರಿ ಪುಣೆ.”
Maharashtra | A 19-year-old woman was allegedly attacked with a sharp weapon by a 21-year-old man in Sadashiv Peth’s Perugate area. The accused and the victim are former classmates. The incident occurred when the woman refused to talk to the accused while riding a motorbike with…
— ANI (@ANI) June 27, 2023
ನೆಟ್ಟಿಗರು ಈ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಟ್ವೀಟ್ ಮಾಡುತ್ತಿದ್ದಾರೆ. ”ಭಾರತಜೋಡೋಯಾತ್ರಾದಲ್ಲಿ (BharathJodoYatra) ನಮ್ಮೊಂದಿಗೆ ಪಾಲ್ಗೊಂಡ ಲೇಶ್ಪಾಲ್ ಇವರೇ ಎಂದು ಗುರುತಿಸುತ್ತಿದ್ದಾರೆ. ಇವರೊಂದಿಗೆ ತೆಗೆಸಿಕೊಂಡ ಛಾಯಾಚಿತ್ರಗಳನ್ನು ಟ್ವೀಟ್ ಮಾಡುತ್ತಿದ್ದಾರೆ. ಇವರು ನಿಜವಾದ ದೇಶಭಕ್ತ. ಸಾಮಾಜಿಕ ಮಾಧ್ಯಮದಲ್ಲಿ ಶಾಂತಿ, ಪ್ರೀತಿ ಮತ್ತು ಜಾತ್ಯತೀತತೆ ಕುರಿತು ಪ್ರಚಾರ ಮಾಡುತ್ತಿರುತ್ತಾರೆ. ಇದೀಗ ಬೇರೊಬ್ಬರ ಪ್ರಾಣ ಉಳಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ. ಧರ್ಮದ ಕಾರಣಕ್ಕಾಗಿ ಯಾರನ್ನೋ ಕೊಲೆಗೈದು ಓಡಿಹೋಗುವ ಮತಾಂಧ ಭಕ್ತರಂತೆ ಇವರು ಹೇಡಿಯಲ್ಲ” ಎಂದಿದ್ದಾರೆ ಕೆಲವರು.
ದೆಹಲಿ ಮಂದಿಯಂತೆ ನಮ್ಮೂರಿನ ಜನ ಕೈಕಟ್ಟಿ ಕುಳಿತುಕೊಂಡಿಲ್ಲ. ನಡೆಯುವ ಘೋರ ಅಪರಾಧವನ್ನು ತಪ್ಪಿಸಿದ್ದಾರೆ ಎಂದು ಪುಣೆ ಮಂದಿ ಟ್ವೀಟ್ ಮಾಡುತ್ತಿದೆ. ಒಟ್ಟಾರೆ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಾಕಷ್ಟು ಕುತೂಹಲ ಉಂಟಾಗಿದೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:41 pm, Wed, 28 June 23