
ಕಾಡು ಪ್ರಾಣಿಗಳು (wild animals) ಬೇಟೆಯಲ್ಲಿ ಪಳಗಿರುತ್ತವೆ, ಹೀಗಾಗಿ ತನ್ನ ಬೇಟೆಯನ್ನು ಯಾರಿಗೂ ಹಂಚಿಕೊಳ್ಳುವುದು ಬಿಡಿ, ಬೇಟೆಯನ್ನು ತಿನ್ನುವ ವೇಳೆ ತನ್ನತ ಇನ್ಯಾವುದೇ ಪ್ರಾಣಿ ಸುಳಿಯದಂತೆ ನೋಡಿಕೊಳ್ಳುತ್ತವೆ. ಇದಕ್ಕೆ ತದ್ವಿರುದ್ಧವಾಗಿದೆ ಈ ದೃಶ್ಯ. ಹೌದು, ಸಿಂಹಿಣಿಯೊಂದು (lioness) ತನ್ನನ್ನು ಸಾಕಿದ ಯುವಕನೊಂದಿಗೆ ತಾನು ಬೇಟೆಯಾಡಿದ ಪ್ರಾಣಿಯ ಮಾಂಸವನ್ನು ಹಂಚಿಕೊಂಡಿದೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
sirgathelioness ಎಂಬ ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ವಾಲೆಂಟಿನ್ಯೂ ಗ್ರೂನರ್ ಎಂಬ ವ್ಯಕ್ತಿ ತಾಯಿಯನ್ನು ತೊರೆದ ಹೆಣ್ಣು ಮರಿಯನ್ನು ತಂದು ಸಾಕಿದ್ದರು. ಆದರೆ ಈ ಸಿಂಹಿಣಿ ತನ್ನನ್ನು ಸಾಕಿದ ವ್ಯಕ್ತಿಗೆ ಎಷ್ಟು ಋಣಿಯಾಗಿದೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ. ಹೌದು, ಕಡವೆ ಜಾತಿಗೆ ಸೇರಿದ ಪ್ರಾಣಿಯನ್ನು ಬೇಟೆಯಾಡಿದ್ದು, ತನ್ನ ಬೇಟೆಯನ್ನು ತನ್ನನ್ನು ಸಾಕಿದ ವ್ಯಕ್ತಿಯೊಂದಿಗೆ ಹಂಚಿಕೊಳ್ಳುವುದನ್ನು ಕಾಣಬಹುದು. ಮಾಲೀಕ ತನ್ನ ಬೇಟೆಯನ್ನು ತೆಗೆದುಕೊಳ್ಳುತ್ತಿದ್ದಂತೆ ಸಿಂಹಿಣಿ ಮಾತ್ರ ಪ್ರತಿಕ್ರಿಯಿಸದೇ ಸುಮ್ಮನೆ ಕುಳಿತಿದೆ. ಸಿಂಹಿಣಿ ಬೇಟೆಯಾಡಿದ ಮಾಂಸದಿಂದ ಚಾಕು ಬಳಸಿ ಕತ್ತರಿಸಿ ಬೆಂಕಿ ಹೊತ್ತಿಸಿ ಬೇಯಿಸಿದ್ದಾರೆ. ಸಿಂಹಿಣಿಗೆ ಬೇಯಿಸಿದ ಮಾಂಸ ನೀಡುತ್ತಿದ್ದಂತೆ ಅದು ತಿನ್ನದಿರುವುದನ್ನು ನೀವಿಲ್ಲಿ ನೋಡಬಹುದು.
ಈ ವಿಡಿಯೋದಲ್ಲಿ ಇತ್ತೀಚೆಗೆ ಅವಳು ಹಿಡಿದ ಮಾಂಸದಲ್ಲಿ ಸ್ವಲ್ಪ ಭಾಗವನ್ನು ಬೆಂಕಿಯ ಮೇಲೆ ಬಾರ್ಬೆಕ್ಯೂ ಮಾಡಲು ತೆಗೆದುಕೊಂಡೆ, ಅವಳ ಹತ್ತಿರ ಬೆಂಕಿಹಚ್ಚುವ ಅಪರೂಪದ ಸಂದರ್ಭ ಅದು. ಸಾಮಾನ್ಯವಾಗಿ, ನಾನು ಈ ರೀತಿ ಮಾಡುವುದಿಲ್ಲ. ಆದರೆ ನನಗಾಗಿ ಮತ್ತು ತಂಡಕ್ಕಾಗಿ ಸ್ವಲ್ಪ ಮಾಂಸವನ್ನು ತೆಗೆದುಕೊಳ್ಳುವುದು ಸಹಜ, ವಿಶೇಷವಾಗಿ ತಂಪಾದ ಶುಷ್ಕ ಋತುವಿನಲ್ಲಿ ರಾತ್ರಿಗಳು ಶೂನ್ಯ ಡಿಗ್ರಿಗೆ ಇಳಿಯುತ್ತವೆ. ಮಾಂಸವು ದಿನಗಳವರೆಗೆ ತಾಜಾವಾಗಿರುತ್ತದೆ. ಆಕೆಯ ಬೇಟೆಯಲ್ಲಿ ನಾನು ಪಾಲು ತೆಗೆದುಕೊಂಡದ್ದಕ್ಕೆ ಯಾವುದೇ ಅಭ್ಯಂತರವಿಲ್ಲ. ಇದು ಹಲವು ವರ್ಷಗಳ ಒಡನಾಟದಿಂದ ಈ ರೀತಿಯಾಗಿದೆ. ಹಾಗಂತ ಇದನ್ನೂ ಯಾರೂ ಪ್ರಯತ್ನಿಸಬೇಡಿ.ಯಾವುದೇ ಕಾಡಿನ ಪ್ರಾಣಿಯನ್ನು ವಿಶೇಷವಾಗಿ ಸಿಂಹವನ್ನು ಹೀಗೆ ಸಮೀಪಿಸಬಾರದು ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಮಾತಿಗೆ ತಪ್ಪದೇ ಮನೆಮಾಲಕಿಯ ಪರ್ಸ್‌ನ್ನು ಕಾಯ್ದ ಮುದ್ದಿನ ಶ್ವಾನ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಒಬ್ಬ ಬಳಕೆದಾರ ಇಂತಹ ದೃಶ್ಯವನ್ನು ನಾನು ಎಂದಿಗೂ ನೋಡಿಲ್ಲ, ನಂಬಲು ಅಸಾಧ್ಯ ಎಂದಿದ್ದಾರೆ. ಮತ್ತೊಬ್ಬರು ನಾವು ಎಲ್ಲಿ ಯಾರ ಜೊತೆಗೆ ನಮ್ಮ ನಡವಳಿಕೆಗಳು ಹಾಗೆಯೇ ಇರುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ಕಾಡು ಪ್ರಾಣಿಗಳ ಜತೆಗೆ ಮನುಷ್ಯರ ಇಷ್ಟು ಚಂದದ ಒಡನಾಟ ನೋಡಿರಲಿಲ್ಲ, ಹೀಗೆಯೇ ಇರಲಿ ಇದು ಒಡನಾಟ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:16 pm, Sun, 2 November 25