Video: ಯುರೋಪಿಯನ್ನರು ಭಾರತೀಯರಿಂದ ಈ ವಿಷ್ಯಗಳನ್ನು ಕಲಿಯಬೇಕು ಎಂದ ವಿದೇಶಿ ಮಹಿಳೆ

ವಿದೇಶಿಗರಿಗೆ ಭಾರತವೆಂದರೆ ಅದೇನೋ ಸೆಳೆತ. ಇಲ್ಲಿಗೆ ಭೇಟಿ ನೀಡಿ, ಜನರೊಂದಿಗೆ ಬೆರೆಯುತ್ತಾರೆ. ಇದೀಗ ಲಿಥುವೇನಿಯಾದ ಮಹಿಳೆ, ಯುರೋಪಿಯನ್ನರು ಭಾರತೀಯರಿಂದ ಕಲಿಯಬಹುದಾದ ಐದು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಆನ್ಲೈನ್‌ನಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಯುರೋಪಿಯನ್ನರು ಭಾರತೀಯರಿಂದ ಈ ವಿಷ್ಯಗಳನ್ನು ಕಲಿಯಬೇಕು ಎಂದ ವಿದೇಶಿ ಮಹಿಳೆ
ಮೋನಿಕಾ ಕುಂಜೇಶ್ವರಿ ದಾಸಿ
Image Credit source: Instagram

Updated on: May 24, 2026 | 4:09 PM

ಭಾರತಕ್ಕೆ ಬರುವ ವಿದೇಶಿಗರ ಸಂಖ್ಯೆ ಹೆಚ್ಚಾಗಿದೆ. ಈ ವಿದೇಶಿಗರು (Foreigners) ಇಲ್ಲಿನ ಪ್ರವಾಸಿ ತಾಣಗಳು ಕಣ್ತುಂಬಿಸಿಕೊಳ್ಳುತ್ತಾರೆ. ಅದಲ್ಲದೇ ಇಲ್ಲಿನ ವಿವಿಧ ಆಹಾರಗಳನ್ನು ಇಷ್ಟ ಪಟ್ಟು ಸವಿಯುತ್ತಾರೆ. ಭಾರತೀಯರ ಆಚಾರ ವಿಚಾರ ಇಷ್ಟ ಪಟ್ಟು ಇಲ್ಲೇ ಸೆಟಲ್ ಆಗುವುದಿದೆ. ಇದೀಗ ವಿದೇಶಿ ಮಹಿಳೆ ಯುರೋಪಿಯನ್ನರು ಭಾರತೀಯರಿಂದ (Indians) ಈ ಐದು ವಿಷಯಗಳನ್ನು ಕಲಿಯಲೇಬೇಕು ಎಂದಿದ್ದಾರೆ. ಇದೇ ವೇಳೆ ಭಾರತೀಯ ಆತಿಥ್ಯ, ಸಮುದಾಯ ಜೀವನವನ್ನು ಈ ಮಹಿಳೆ ಶ್ಲಾಘಿಸಿದ್ದಾರೆ. ವಿದೇಶಿ ಮಹಿಳೆಯ ಈ ವಿಡಿಯೋವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

ಮೋನಿಕಾ ಕುಂಜೇಶ್ವರಿ ದಾಸಿ (monika_kunjeswari) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಾರತದಲ್ಲಿದ್ದಾಗ ಗಮನಿಸಿದ ವಿಷಯಗಳನ್ನು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಈ ವಿಡಿಯೋದ ಕ್ಲಿಪ್‌ನ ಶೀರ್ಷಿಕೆಯಲ್ಲಿ, ಯುರೋಪಿಯನ್ನರು ಭಾರತೀಯರಿಂದ ಕಲಿಯಬೇಕಾದ ವಿಷಯಗಳು. ಇದು ವಿವಾದಾತ್ಮಕವಾಗಿರಬಹುದು ಎಂದು ನನಗೆ ತಿಳಿದಿದೆ. ಆದರೆ ಭಾರತದಲ್ಲಿ ವರ್ಷಗಳ ಕಾಲ ನೆಲೆಸಿದ ಬಳಿಕ ಈ ಪಾಶ್ಚಿಮಾತ್ಯ ದೇಶಗಳು ಭಾರತೀಯ ಸಂಸ್ಕೃತಿಯಿಂದ ಕಲಿಯಬಹುದಾದ ಕೆಲವು ವಿಷಯಗಳಿವೆ ಎಂದು ನಾನು ಗಮನಿಸಿದೆ. ಯುರೋಪಿನ ಅನೇಕ ಜನರು ಭಾರತದ ಹಳ್ಳಿಗಳಿಗೆ ಅಥವಾ ಸಣ್ಣ ಪಟ್ಟಣಗಳಿಗೆ ಭೇಟಿ ನೀಡುತ್ತಾರೆ. ಹಾಗೂ ಇಲ್ಲಿನ ಜನರು ‘ಸರಳ’ ಎಂದು ಭಾವಿಸುತ್ತಾರೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಇಲ್ಲಿ ಕಂಡುಕೊಂಡ ಕೆಲವು ಮೌಲ್ಯಗಳು ನಾವು ವಿದೇಶದಲ್ಲಿ ನಿಧಾನವಾಗಿ ಕಳೆದುಕೊಳ್ಳುತ್ತಿರುವ ವಿಷಯಗಳಾಗಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಭಾರತದಲ್ಲಿ ಅತಿಥಿಗಳನ್ನು ನಡೆಸಿಕೊಳ್ಳುವ ರೀತಿ ಅದ್ಭುತವಾಗಿದೆ. ಯಾರಾದರೂ ನಿಮ್ಮ ಮನೆಗೆ ಬಂದರೆ, ನೀವು ಅವರಿಗೆ ಆಹಾರ, ಚಹಾ ನೀಡುತ್ತೀರಿ. ಹಾಗೂ ಅವರಿಗೆ ಆರಾಮದಾಯಕವಾಗಿಸುತ್ತೀರಿ. ಇದನ್ನು ಮೂಲಭೂತ ನಡವಳಿಕೆ ಎಂದು ಪರಿಗಣಿಸಲಾಗುತ್ತದೆ. ಲಿಥುವೇನಿಯಾದಲ್ಲಿಯೂ ನಮಗೆ ಇದೇ ರೀತಿಯದ್ದೇನೋ ಇದೆ, ಆದರೆ ಭಾರತದಲ್ಲಿ ಅದು ನಿಜವಾಗಿಯೂ ಬೇರೆಯದೇ ಮಟ್ಟದಲ್ಲಿದೆ ಎಂದು ಉಲ್ಲೇಖಿಸಿದ್ದಾರೆ.

ಸ್ನೇಹಿತರು ಸ್ನೇಹಿತರಿಗೆ ಸಹಾಯ ಮಾಡುತ್ತಾರೆ. ನೆರೆಹೊರೆಯವರು ಪರಸ್ಪರ ಈ ಬಗ್ಗೆ ತಿಳಿದಿದ್ದಾರೆ. ಯಾರಿಗಾದರೂ ಏನಾದರೂ ಅಗತ್ಯವಿದ್ದರೆ, ಸಹಾಯ ಮಾಡಲು ಸಿದ್ಧರಿರುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಒಂಟಿತನದಿಂದ ಬಳಲುತ್ತಿದ್ದಾರೆ. ಈ ಸಮುದಾಯದ ಪ್ರಜ್ಞೆಯನ್ನು ಕಳೆದುಕೊಳ್ಳುವುದು ಒಂದು ಕಾರಣ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಭಾರತೀಯ ಮನೆಗಳಲ್ಲಿ ಆಹಾರವು ಭಾವನಾತ್ಮಕ ಮತ್ತು ಸಾಮಾಜಿಕ ಮೌಲ್ಯವನ್ನು ಉಳಿಸಿಕೊಂಡಿದೆ. ಮನೆಯಲ್ಲಿ ಅಡುಗೆ ಮಾಡುವುದು. ಒಟ್ಟಿಗೆ ಕುಳಿತು ತಿನ್ನುವುದು ಸಾಮಾನ್ಯ. ಇದು ಎಲ್ಲವೂ ಅನುಕೂಲಕ್ಕಾಗಿ ಅಲ್ಲ. ಆಹಾರವನ್ನು ವೇಗವಾಗಿ ಸೇವಿಸುವುದನ್ನು ಒಳಗೊಂಡಿಲ್ಲ ಎಂದಿದ್ದಾರೆ.

ಭಾರತೀಯರು ಸ್ವಚ್ಛತೆಯನ್ನು ಗಂಭೀರವಾಗಿ ಪರಿಗಣಿಸುವುದನ್ನು ಗಮನಿಸಿದ್ದೇನೆ. ಸ್ನಾನ ಮಾಡುವುದು, ಬಟ್ಟೆ ಬದಲಾಯಿಸುವುದು, ನಿಮ್ಮನ್ನು ತಾಜಾವಾಗಿರಿಸಿಕೊಳ್ಳುವುದು. ಈ ಅಭ್ಯಾಸವನ್ನು ತುಂಬಾ ಹತ್ತಿರದಿಂದ ನಾನು ನೋಡಿದ್ದೇನೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಅದು ತುಂಬಾ ಒಳ್ಳೆಯ ಅಭ್ಯಾಸ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿರುವುದನ್ನು ನೀವು ನೋಡಬಹುದು.

ಇನ್ನು ಹಬ್ಬಗಳು, ನೃತ್ಯ, ಹಾಡುಗಾರಿಕೆ, ಒಟ್ಟಿಗೆ ಆಚರಿಸುತ್ತಾರೆ. ಜೀವನವನ್ನು ಆನಂದಿಸಲು ಜನರಿಗೆ ವಿಶೇಷ ಕಾರಣ ಬೇಕಾಗಿಲ್ಲ. ಕೆಲವೊಮ್ಮೆ ಯುರೋಪಿನಲ್ಲಿ ನಾವು ತುಂಬಾ ಗಂಭೀರವಾಗಿರುತ್ತೇವೆ, ವಿಷಯಗಳನ್ನು ಸರಳವಾಗಿ ಆನಂದಿಸುವುದು ಹೇಗೆ ಎಂಬುದನ್ನು ನಾವು ಮರೆತುಬಿಡುತ್ತೇವೆ ಎಂದು ನನಗೆ ಅನಿಸುತ್ತದೆ. ಖಂಡಿತವಾಗಿ ಪ್ರತಿಯೊಂದು ದೇಶವೂ ಒಳ್ಳೆಯ ಮತ್ತು ಕೆಟ್ಟ ಅಂಶಗಳನ್ನು ಹೊಂದಿರುತ್ತದೆ. ಆದರೆ ಇವು ನಾನು ಭಾರತದಿಂದ ವೈಯಕ್ತಿಕವಾಗಿ ಕಲಿತ ಕೆಲವು ವಿಷಯಗಳು ಎಂದಿದ್ದಾರೆ.

ಇದನ್ನೂ ಓದಿ: ಎಳನೀರು ವ್ಯಾಪಾರಿಯೊಂದಿಗೆ ಚೌಕಾಸಿ ಮಾಡಿದ ವಿದೇಶಿ ಮಹಿಳೆ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಇದು ಭಾರತದ ಬಗ್ಗೆ ತುಂಬಾ ಸುಂದರವಾದ ಅವಲೋಕನ ಎಂದಿದ್ದಾರೆ. ಇನ್ನೊಬ್ಬರು, ಒಳ್ಳೆಯದದ್ದನ್ನು ಹುಡುಕುವ ಹಾಗೂ ಅಳವಡಿಸಿಕೊಳ್ಳುವ ನಿಮ್ಮ ಗುಣ ದೊಡ್ಡದು ಎಂದು ಹೊಗಳಿದ್ದಾರೆ. ಮತ್ತೊಬ್ಬರು, ಅತಿಥಿ ದೇವೋ ಭವ ನಿಜವಾಗಿಯೂ ಭಾರತೀಯ ಸಂಸ್ಕೃತಿಯ ಅತ್ಯುತ್ತಮ ಭಾಗಗಳಲ್ಲಿ ಒಂದು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 1:02 pm, Sun, 24 May 26

Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
Follow Us