
Viral : ಮಕ್ಕಳ ಜಗತ್ತೇ ಹಾಗೇ ಹಸಿಗೋಡೆಯಲ್ಲಿ ಹಳ್ಳ ತೂರಿದಂತೆ, ಗಕ್ಕನೆ ಹಿಡಿದುಕೊಂಡುಬಿಡುತ್ತವೆ. ಕೇಳಿದ್ದನ್ನು, ನೋಡಿದ್ದನ್ನು, ಮಾಡಿದ್ದನ್ನು ಅನುಕರಿಸುವ ಈ ಹಂತ ಇದೆಯಲ್ಲ ಬಹಳ ಹೃದ್ಯವಾಗಿರುತ್ತದೆ. ಯಾವ ಪರಿಸರವನ್ನು ಕಟ್ಟಿಕೊಡುತ್ತೀರೋ ಅದನ್ನು ಗ್ರಹಿಸಿ ತಮ್ಮದೇ ಲೋಕ ಸೃಷ್ಟಿಸಿಕೊಳ್ಳುತ್ತವೆ ಮಕ್ಕಳು. ಇಲ್ಲಿರುವ ಈ ವಿಡಿಯೋ ನೋಡಿ ರಾಷ್ಟ್ರಗೀತೆ ಹಾಡುತ್ತಿರುವ ಈ ಪುಟ್ಟ ಹುಡುಗನನ್ನು ಒಂದು ಲಕ್ಷ ನೆಟ್ಟಿಗರು ಮೆಚ್ಚಿದ್ದಾರೆ. ಉಚ್ಛಾರಣೆಯಲ್ಲಿ ಸ್ವಲ್ಪ ಏರುಪೇರಾದರೂ ಅವನು ತನ್ಮಯನಾಗಿ ಹಾಡುತ್ತಿರುವುದಕ್ಕೆ ಯಾರೂ ತಲೆದೂಗದೆ ಇರರು.
ವರ್ಟಿಗೋ ವಾರಿಯರ್ ಎಂಬ ಟ್ವಿಟರ್ ಖಾತೆದಾರರು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಅನೇಕರು ಈ ವಿಡಿಯೋ ಮೆಚ್ಚಿ ಪ್ರತಿಕ್ರಿಯಿಸಿದ್ಧಾರೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ