
ನಮ್ಮ ಬಾಲ್ಯವೇ (childhood) ಚೆನ್ನಾಗಿತ್ತು. ಶಾಲೆ ಮೆಟ್ಟಿಲೇರಿದರೂ ಬಾಲ್ಯವನ್ನು ಖುಷಿಯಿಂದಲೇ ಕಳೆಯುತ್ತಿದ್ದೆವು. ಆದರೆ ಈಗ ಆಗಿಲ್ಲ, ವರ್ಷ ಎರಡು ಮೂರು ಆಗುತ್ತಿದ್ದಂತೆ ನರ್ಸರಿ ಎಂದು ಪುಟಾಣಿಗಳನ್ನು ಶಾಲೆಗೆ ಸೇರಿಸಿಯಾಗಿರುತ್ತದೆ. ಮಕ್ಕಳ (children) ಬಾಲ್ಯವನ್ನು ಕಸಿಯುತ್ತಿರುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಪುಟ್ಟ ಮಕ್ಕಳು ತರಗತಿಯ ಕಿಟಕಿಯಿಂದ ಹೊರ ನೋಡುತ್ತಾ ಅಮ್ಮನಿಗಾಗಿ ಕಣ್ಣೀರು ಸುರಿಸುತ್ತಿರುವ ದೃಶ್ಯ ಇದಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರ ಕಣ್ಣನ್ನು ಒದ್ದೆಯಾಗಿಸಿದೆ.
ಸುರಾಜ್ ಕುಮಾರ್ ಬೌದ್ (Suraj kumar Bauddh) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋಗೆ ಶಾಲೆಯಲ್ಲಿ ಮಕ್ಕಳು ತಮ್ಮ ತಾಯಿಯ ಮಡಿಲಲ್ಲಿ ಮಲಗಿ ಹಾಲು ಕುಡಿಯಲು ಬಯಸುತ್ತಾರೆ. ಎಲ್‌ಕೆಜಿ ಹೆಸರಿನಲ್ಲಿ 2-3 ವರ್ಷದ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಶಿಕ್ಷಣವಲ್ಲ. ಇದು ಬಾಲ್ಯವನ್ನೇ ಕಸಿಯುತ್ತಿದೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
Childhood cuteness overloaded! 😍
Kids in school are requesting their teacher ma’am to let them go home as they want to lie in their mother’s lap and have milk.
Sending 2–3 year-old kids to school in the name of LKG is not education.
This is the theft of childhood innocence.💔 pic.twitter.com/3jnLGHeXxo
— Suraj Kumar Bauddh (@SurajKrBauddh) December 1, 2025
ಈ ವಿಡಿಯೋದಲ್ಲಿ ಪುಟಾಣಿಗಳು ತರಗತಿಯ ಕಿಟಕಿಯಲ್ಲಿ ನಿಂತುಕೊಂಡು ಹೊರಗಡೆ ನೋಡುತ್ತಾ ಅಳುತ್ತಿರುವುದನ್ನು ನೋಡಬಹುದು. ಮಗುವೊಂದು ಅಳುತ್ತಾ ನನ್ನಮ್ಮನಿಗೆ ಫೋನ್ ಮಾಡಿ… ನನ್ನಮ್ಮನ ಹೆಸರು ಮಮ್ಮಾ ಎಂದು ಹೇಳುತ್ತಿದೆ. ಮತ್ತೊಂದು ಮಗು ಭಯ ಹಾಗೂ ಅಮ್ಮ ತನ್ನನ್ನು ಕರೆದುಕೊಂಡು ಹೋಗಲು ಬರುತ್ತಾಳೆ ಎಂದು ನಿರೀಕ್ಷೆಯಿಂದ ಹೊರಗೆ ನೋಡುವುದನ್ನು ನೀವಿಲ್ಲಿ ನೋಡಬಹುದು. ಪುಟಾಣಿಗಳ ಈ ಮಾತುಗಳು ಕರುಳು ಹಿಂಡುವಂತೆ ಮಾಡಿದೆ.
ಇದನ್ನೂ ಓದಿ:ಮಧ್ಯರಾತ್ರಿ ಎಚ್ಚರಗೊಂಡು ಅಮ್ಮನನ್ನು ಅರಸುತ್ತಾ ರಸ್ತೆ ರಸ್ತೆಗಳಲ್ಲಿ ಅಲೆದಾಡಿದ ಮಗು
ಈ ವಿಡಿಯೋ ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿವೆ. ಒಬ್ಬ ಬಳಕೆದಾರ ಶಿಕ್ಷಣದ ಹೆಸರಿನಲ್ಲಿ ತಾಯಿ ಮಗುವನ್ನು ದೂರ ಮಾಡುವುದು ಸರಿಯಲ್ಲ ಎಂದಿದ್ದಾರೆ. ಇನ್ನೊಬ್ಬರು, ಪುಟಾಣಿಗಳ ಮಾತು ಕೇಳಿದ್ರೆ ಕರುಳು ಚುರ್ ಅನ್ನುತ್ತೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಈ ವಯಸ್ಸಿನಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವುದು ತುಂಬಾ ಆಘಾತಕಾರಿ, ಅವರು ನಿಜವಾಗಿಯೂ ಕುಟುಂಬ ಸದಸ್ಯರೊಂದಿಗೆ ಮನೆಯಲ್ಲಿರಬೇಕಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:36 pm, Thu, 4 December 25