
ಕೆಲ ಮಕ್ಕಳು ಹಲ್ಲಿ, ಜಿರಳೆಗಳನ್ನು ನೋಡಿದರೆ ಅಲ್ಲಿಂದ ಓಡಿ ಹೋಗುತ್ತಾರೆ. ಇನ್ನು,ಕೆಲವೊಮ್ಮೆ ಪುಟಾಣಿಗಳು (little kids) ಕೈಯಲ್ಲಿ ಹಿಡಿಯುವ ಹುಚ್ಚು ಧೈರ್ಯ ಮಾಡುವುದಿದೆ. ಆದರೆ ಇಲ್ಲೊಬ್ಬ ತಂದೆಯೂ ಮುದ್ದಿನ ಮಗಳಿಗೆ ಹಲ್ಲಿಯನ್ನು (lizard) ಕೈಯಲ್ಲಿ ಹಿಡಿಯಲು ನೀಡಿದ್ದಾನೆ. ಈ ವೇಳೆಯಲ್ಲಿ ಈ ಪುಟಾಣಿ ಹುಡುಗಿಯೂ ತನ್ನ ತಂದೆಯ ಮುಂದೆ ವಿಚಿತ್ರ ಬಯಕೆ ವ್ಯಕ್ತಪಡಿಸಿದ್ದಾಳೆ. ಮಗಳಿಗೆ ಬೇಸರ ಆಗಬಾರದೆನ್ನುವ ಕಾರಣಕ್ಕೆ ಎಲ್ಲದಕ್ಕೂ ಓಕೆ ಹೇಳಿದ್ದು, ತಂದೆ ಮಗಳ ಸಂವಹನ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
avyanshi mehta adventures ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ತಂದೆಯೂ ತನ್ನ ಮುದ್ದಿನ ಮಗಳಿಗೆ ಹಲ್ಲಿಯನ್ನು ಹಿಡಿಯಲು ಕೊಡುವುದನ್ನು ಕಾಣಬಹುದು. ಸಲೀಸಾಗಿ ಹಲ್ಲಿಯನ್ನು ಕೈಯಲ್ಲಿ ಹಿಡಿದ ಪುಟಾಣಿ ತಂದೆಯ ಜೊತೆಗೆ ಮಾತಿಗೆ ಇಳಿಯುತ್ತಾಳೆ. ಒಂಚೂರು ಭಯಪಡದೇ ಕೈಯಲ್ಲಿ ಹಲ್ಲಿಯನ್ನು ಹಿಡಿದು ಕೊಂಡೇ ಮನೆಗೆ ಕರೆದುಕೊಂಡು ಹೋಗುವ ಎನ್ನುತ್ತಾಳೆ. ಪುಟ್ಟ ಹುಡುಗಿಯೂ ಪ್ರೀತಿಯಿಂದ ಹಲ್ಲಿಯ ಮೈಯನ್ನು ಮುಟ್ಟುವುದನ್ನು ನೋಡಬಹುದು. ಹಲ್ಲಿಯೂ ಕೂಡ ಆಕೆಯನ್ನು ಇಷ್ಟ ಪಡುವಂತಿದೆ. ಪುಟಾಣಿಯೂ ಇದರ ತಾಯಿ ಎಲ್ಲಿ ಎಂದು ಕೇಳುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ:Viral: ನರ್ಸರಿ ಸ್ಕೂಲ್ ಫೀಸ್ 2.5 ಲಕ್ಷ ರೂ: ಇದು ವಿದ್ಯಾದೇಗುಲವೋ, ವ್ಯಾಪಾರ ಕೇಂದ್ರವೋ?
ಈ ವಿಡಿಯೋ ಒಂಬತ್ತು ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಬಳಕೆದಾರರೊಬ್ಬರು, ಮಕ್ಕಳು ಚಿಕ್ಕ ಚಿಕ್ಕ ವಿಷಯಗಳನ್ನು ಕಲಿಯುವುದನ್ನು ನೋಡುವುದಕ್ಕೆ ಖುಷಿಯಾಗುತ್ತದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಾನು ಭಯ ಪಡುವ ಜೀವಿಯೊಂದಿಗೆ ಪುಟಾಣಿಯೂ ಆಟ ಆಡುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ಈ ಪುಟಾಣಿ ಭಯದೊಂದಿಗೆ ಹೋರಾಡುತ್ತಿದ್ದಾಳೆ ಕೊನೆಗೂ ಯಶಸ್ಸು ಕಂಡಿದ್ದಾಳೆ ಎಂದು ಕಾಮೆಂಟ್‌ನಲ್ಲಿ ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ