ಹೆಬ್ಬಾವಿನೊಂದಿಗೆ ಆಟವಾಡಿದ ಪುಟ್ಟ ಬಾಲಕಿ: ವಿಡಿಯೋ ವೈರಲ್
ಇಲ್ಲೊಬ್ಬಳು ಪುಟ್ಟ ಬಾಲಕಿ ದೊಡ್ಡ ಗಾತ್ರದ ಹೆಬ್ಬಾವಿನೊಂದಿಗೆ ಆಟವಾಡಿದ್ದಾಳೆ. ಕಪ್ಪು ಬಣ್ಣದ ಹೆಬ್ಬಾವಿನೊಂದಿಗೆ ಪುಟ್ಟ ಬಾಲಕಿ ಆಟವಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಾವುಗಳೆಂದರೆ ಸಾಮಾನ್ಯವಾಗಿ ಎಲ್ಲರೂ ಭಯಪಡುತ್ತಾರೆ. ಅದರಲ್ಲೂ ಹೆಬ್ಬಾವು (Python) ಗಳೆಂದರೆ ಮಾರು ದೂರ ಓಡುವವರೇ ಹೆಚ್ಚು ಹೀಗಿದ್ದಾಗ ಇಲ್ಲೊಬ್ಬಳು ಪುಟ್ಟ ಬಾಲಕಿ ದೊಡ್ಡ ಗಾತ್ರದ ಹೆಬ್ಬಾವಿನೊಂದಿಗೆ ಆಟವಾಡಿದ್ದಾಳೆ. ಕಪ್ಪು ಬಣ್ಣದ ಹೆಬ್ಬಾವಿನೊಂದಿಗೆ (Black Python) ಪುಟ್ಟ ಬಾಲಕಿ (Little girl) ಆಟವಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ಸ್ಟಾಗ್ರಾಮ್ ನಲ್ಲಿ ಬಾಲಕಿಯ ವಿಡಿಯೋ ನೋಡಿ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.
View this post on Instagram
ಸ್ನೇಕ್ ಮಾಸ್ಟರ್ ಎನ್ನುವ ಇನ್ಸ್ಟಾಗ್ರಾಮ್ ಖಾತೆ ವಿಡಿಯೋ ಹಂಚಿಕೊಂಡಿದ್ದು, 5 ಮಿಲಿಯನ್ಗೂ ಹೆಚ್ಚು ವೀಕ್ಷಣೆ ಪಡೆದಿದೆ. ವಿಡಿಯೋದಲ್ಲಿ ನೆಲದ ಮೇಲೆ ಹರಿಯುತ್ತಿದ್ದ ಕಪ್ಪು ಹಾವನ್ನು ಬಾಲಕಿ ಕೈಯಲ್ಲಿ ಹಿಡಿದು ಎಳೆಯುವುದನ್ನು ಕಾಣಬಹುದು. ಈ ಭಯಾನಕ ವಿಡಿಯೋ ನೋಡಿ ನೋಡುಗರೇ ಬೆಚ್ಚಿಬಿದ್ದಿದ್ದಾರೆ. ವಿಡಿಯೋದಲ್ಲಿರುವ ಬಾಲಕಿಯನ್ನು ಅರೈನ್ ಎಂದು ಗುರುತಿಸಲಾಗಿದೆ. ಇನ್ಸ್ಟಾಗ್ರಾಮ್ನ ಇನ್ನೊಂದು ಪೋಸ್ಟ್ನಲ್ಲಿ ಹಾವಿನ ಪಕ್ಕದಲ್ಲಿ ಆಕೆ ಮಲಗಿದ್ದ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಆಕೆ ತನ್ನ ಇನ್ಸ್ಟಾಗ್ರಾಮ್ ಬಯೋ ದಲ್ಲಿ ಹಾವಿನ ಬಗೆಗೆ ಹೆಚ್ಚು ಪ್ಯಾಷನೇಟ್ ಆಗಿದ್ದೇನೆ ಎಂದಿದ್ದಾಳೆ.
ಈ ಹಿಂದೆ ಮನೆಯ ಮುಂದೆ ಪುಟ್ಟ ಬಾಲಕಿಯೊಬ್ಬಳು ಕುಳಿತು ದೈತ್ಯ ಹೆಬ್ಬಾವಿನೊಂದಿಗೆ ಕುಳಿತು ಆಟವಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಪುಟ್ಟ ಬಅಲಕಿಯ ಧೈರ್ಯ ನೋಡಿ ನೆಟ್ಟಿಗರೇ ದಂಗಾಗಿದ್ದರು. ಇದೀಗ ಅಂತಹದ್ದೇ ವಿಡಿಯೋ ನೋಡಿ ಇನ್ಸ್ಟಾಗ್ರಾಮ್ ಬಳಕೆದಾರರು ಗಾಬರಿಗೊಂಡಿದ್ದಾರೆ.
ಇದನ್ನೂ ಓದಿ:
ಮೇರಿ ರಾಣಿ ಹಾಡಿಗೆ ಸಖತ್ ಡ್ಯಾನ್ಸ್ ಮಾಡಿದ ಸಹದೇವ್ ದಿರ್ಡೋ: ವಿಡಿಯೋ ವೈರಲ್