Viral Video: ಬಾಲಕಿ ಶಾಲೆಗೆ ಹೊರಟಾಗ ಕಾವಲಾಗಿ ಹಿಂಬಾಲಿಸಿದ ಮೇಕೆ; ಹೃದಯಸ್ಪರ್ಶಿ ವಿಡಿಯೋವಿದು

| Updated By: shruti hegde

Updated on: Sep 21, 2021 | 2:03 PM

ಸಣ್ಣ ವಿಡಿಯೋ ಕ್ಲಿಪ್ನಲ್ಲಿ ಗಮನಿಸುವಂತೆ ಹುಡುಗಿ ಕಾಲು ಹಾದಿಯಲ್ಲಿ ಶಾಲೆಗೆ ಹೊರಟಿದ್ದಾಳೆ.

Viral Video: ಬಾಲಕಿ ಶಾಲೆಗೆ ಹೊರಟಾಗ ಕಾವಲಾಗಿ ಹಿಂಬಾಲಿಸಿದ ಮೇಕೆ; ಹೃದಯಸ್ಪರ್ಶಿ ವಿಡಿಯೋವಿದು
ಬಾಲಕಿ ಶಾಲೆಗೆ ಹೊರಟಾಗ ಕಾವಲಾಗಿ ಹಿಂಬಾಲಿಸಿದ ಮೇಕೆ
Follow us on

ಜೀವನದಲ್ಲಿ ಸ್ನೇಹಿತ ಬಹು ಮುಖ್ಯ ಪಾತ್ರವನ್ನು ವಹಿಸುತ್ತಾನೆ. ಕೆಲವರು ಸಾಕು ಪ್ರಾಣಿಯನ್ನು ಒಳ್ಳೆಯ ಸ್ನೇಹಿತನೆಂದು ಭಾವಿಸುತ್ತಾರೆ. ನಾವು ಪ್ರಾಣಿಯನ್ನು ಎಷ್ಟು ಅಕ್ಕರೆಯಿಂದ ನೋಡಿಕೊಳ್ಳುತ್ತೇವೆಯೋ, ಅದೇ ರೀತಿ ಪ್ರಾಣಿಗಳೂ ಸಹ ನಮ್ಮ ಹಿತವನ್ನು ಬಯುಸುತ್ತವೆ ಎಂಬುದಕ್ಕೆ ಸಾಕ್ಷಿ ಎಂಬಂತೆ ಇಲ್ಲೊಂದು ವಿಡಿಯೋವಿದೆ. ಬಾಲಕಿ ತನ್ನ ಸ್ನೇಹಿತ ಮೇಕೆಯೊಂದಿಗೆ ಶಾಲೆಗೆ ಹೊರಟಿದ್ದಾಳೆ. ಹೃದಯಸ್ಪರ್ಶಿ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.

ಸಣ್ಣ ವಿಡಿಯೋ ಕ್ಲಿಪ್ನಲ್ಲಿ ಗಮನಿಸುವಂತೆ ಹುಡುಗಿ ಕಾಲು ಹಾದಿಯಲ್ಲಿ ಶಾಲೆಗೆ ಹೊರಟಿದ್ದಾಳೆ. ಸಮವಸ್ತ್ರ ಧರಿಸಿ, ಎರಡು ಜಡೆಯನ್ನು ಹೆಣೆದು, ರಿಬ್ಬನ್ ಕಟ್ಟಿದ್ದಾಳೆ. ಪುಸ್ತಕಗಳು ತುಂಬಿದ ಬ್ಯಾಗ್ ಹಾಕಿಕೊಂಡು ಶಾಲೆಗೆ ಹೊರಟಿದ್ದಾಳೆ. ಬಾಲಕಿ ಶಾಲೆಗೆ ಹೊರಟಿರುವಾಗ ಮನೆಯಲ್ಲಿ ಸಾಕಿದ್ದ ಮೇಕೆ ಆಕೆಯನ್ನು ಹಿಂಬಾಲಿಸುತ್ತಿದೆ. ಇವರಿಬ್ಬರ ಒಳ್ಳೆಯ ಗೆಳೆತನಕ್ಕೆ ನೆಟ್ಟಿಗರಿಂದ ಶ್ಲಾಘನೆ ವ್ಯಕ್ತವಾಗಿದೆ.

ಇಬ್ಬರು ಸ್ನೇಹಿತರು ಒಟ್ಟುಗೂಡಿ ಶಾಲೆಗೆ ಹೋಗುತ್ತಿರುವ ದೃಶ್ಯ ನೋಡಿ

ವಿಡಿಯೋ ಕ್ಲಿಪ್ಅನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ. ಒಟ್ಟು 8,000 ಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ಅತ್ಯುತ್ತಮ ದೃಶ್ಯವಿದು ಎಂದು ಓರ್ವರು ಕಾಮೆಂಟ್ ವಿಭಾಗದಲ್ಲಿ ಹೇಳಿದ್ದಾರೆ. ಒಳ್ಳೆಯ ಸ್ನೇಹಿತ ಎಂದು ಮತ್ತೋರ್ವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:

Viral Video: ವೈರಲ್ ಆಗಲು ನಡು ರಸ್ತೆಯಲ್ಲಿ ಮೈ ಬಳುಕಿಸಿದ ಯುವತಿ

Viral Video: ಸಲೂನ್​ಗೆ ಬಂದು ಕಿಮ್​ ಜಾಂಗ್​ ಉನ್​ ಹೆಸರು ಹೇಳಿದ ಯುವಕ; ಬಳಿಕ ನಡೆದಿದ್ದು ಅದ್ಭುತ !

(Little girl walks to school goat follow her heartwarming video goes viral in social media)

Published On - 10:21 am, Tue, 21 September 21