ಆನೆಗಳು ನಿಜಕ್ಕೂ ಮುಗ್ಧ ಜೀವಿಗಳು. ನೋಡಲು ದೈತ್ಯಾಕಾರದಲ್ಲಿದ್ದರೂ ತನ್ನ ಸೌಮ್ಯ ಸ್ವಭಾವದಿಂದಲೇ ಎಲ್ಲರಿಗೂ ಕೂಡ ಇಷ್ಟವಾಗುತ್ತದೆ. ತನ್ನ ಸಂಗಡಿಗರ ಜೊತೆಯಲ್ಲಿ ತುಂಟಾಟ ಆಡುವ, ಗುಂಪು ಗುಂಪಾಗಿ ಸಾಗುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಇದೀಗ ರೈಲು ಹಳಿ ದಾಟುತ್ತಿದ್ದ 60 ಕ್ಕೂ ಹೆಚ್ಚು ಆನೆಗಳನ್ನು ಲೋಕೋ ಪೈಲಟ್ ಗಳು ರಕ್ಷಿಸಿದ್ದಾರೆ.
ಅಕ್ಟೋಬರ್ 16 ರಂದು ಈ ಘಟನೆ ಸಂಭವಿಸಿದ್ದು, ರೈಲು ಸಂಖ್ಯೆ 15959 ಕಾಮ್ರೂಪ್ ಎಕ್ಸ್‌ಪ್ರೆಸ್‌ನ ಲೋಕೋ ಪೈಲಟ್ ತುರ್ತು ಬ್ರೇಕ್ ಹಾಕುವ ಮೂಲಕ 60 ಕ್ಕೂ ಹೆಚ್ಚು ಕಾಡು ಆನೆಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲೋಕೋ ಪೈಲಟ್ ಜೆ.ಡಿ.ದಾಸ್ ಮತ್ತು ಸಹಾಯಕ ಉಮೇಶ್ ಕುಮಾರ್ ಅವರು ಹಬೀಪುರ್ ಮತ್ತು ಲಮ್ಸಾಖಾಂಗ್ ನಡುವಿನ ರೈಲ್ವೆ ಹಳಿಯನ್ನು ಆನೆಗಳ ಹಿಂಡು ದಾಟುತ್ತಿರುವುದನ್ನು ನೋಡಿದ್ದಾರೆ. ಈ ತಕ್ಷಣವೇ ತುರ್ತು ಬ್ರೇಕ್ ಹಾಕುವ ಮೂಲಕ ಆನೆಗಳ ಜೀವವನ್ನು ಉಳಿಸಿದ್ದಾರೆ.
ಇದನ್ನೂ ಓದಿ: ಅಮ್ಮಾ ನನ್ಗೆ ಡ್ರೈವರ್ ಸೀಟ್ ಬೇಕೇ ಬೇಕು ಎಂದು ಅತ್ತ ಬಾಲಕನನ್ನು ತನ್ನ ಬಳಿಯೇ ಕೂರಿಸಿಕೊಂಡ ಬಸ್ ಚಾಲಕ
ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಆನೆಗಳ ಹಿಂಡು ರೈಲು ಹಳಿಯನ್ನು ದಾಟುವುದನ್ನು ನೋಡಬಹುದು. ತುರ್ತಾಗಿ ರೈಲನ್ನು ನಿಲ್ಲಿಸಲಾಗಿದೆ. ಹಳಿ ದಾಟುತ್ತಿರುವ ಆನೆಗಳನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗುತ್ತಿದೆ. ರೈಲು ಚಾಲಕರ ಈ ಕಾರ್ಯಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋಗೆ ನೆಟ್ಟಿಗರೊಬ್ಬರು, ‘ನಿಜಕ್ಕೂ ಗ್ರೇಟ್ ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು, ‘ಇದು ನಿಜಕ್ಕೂ ಅದ್ಭುತವಾದ ವಿಡಿಯೋ, ಇದನ್ನು ಹಂಚಿಕೊಂಡ ನಿಮಗೆ ಧನ್ಯವಾದಗಳು’ ಎಂದು ಕಾಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ