Viral: ಭಾರತಕ್ಕೆ ಹೋಲಿಸಿದ್ರೆ ಲಂಡನ್ ಬಲು ದುಬಾರಿ; ವಿದೇಶಿ ಜೀವನ ಕಷ್ಟಕರ ಎಂದ ಬೆಂಗಳೂರಿನ ದಂಪತಿ

ವಿದೇಶದಲ್ಲಿ ಜೀವನ ಸಾಗಿಸೋದು ತುಂಬಾನೇ ಕಷ್ಟ. ಕೈತುಂಬಾ ಸಂಬಳ ಪಡೆದರೂ ಅಲ್ಲಿನ ಖರ್ಚು ವೆಚ್ಚಗಳು ಅಷ್ಟೇ ದುಬಾರಿಯಾಗಿರುತ್ತದೆ. ಲಂಡನ್ ನಲ್ಲಿ ನೆಲೆಸಿರುವ ಬೆಂಗಳೂರಿನ ದಂಪತಿಗಳು ಅಲ್ಲಿನ ಜೀವನ ಹೇಗಿದೆ ಹಾಗೂ ಭಾರತಕ್ಕೆ ಹೋಲಿಸಿದ್ರೆ ಖರ್ಚು ವೆಚ್ಚಗಳು ಎಷ್ಟು ದುಬಾರಿ ಎಂಬ ಬಗ್ಗೆ ಹಂಚಿಕೊಂಡಿದ್ದಾರೆ. ಈ ಕುರಿತಾದ ಪೋಸ್ಟ್ ಇಲ್ಲಿದೆ.

Viral: ಭಾರತಕ್ಕೆ ಹೋಲಿಸಿದ್ರೆ ಲಂಡನ್ ಬಲು ದುಬಾರಿ; ವಿದೇಶಿ ಜೀವನ ಕಷ್ಟಕರ ಎಂದ ಬೆಂಗಳೂರಿನ ದಂಪತಿ
ಸಾಂದರ್ಭಿಕ ಚಿತ್ರ
Image Credit source: Pinterest

Updated on: Aug 27, 2025 | 3:49 PM

ಹೆಚ್ಚಿನವರಿಗೆ ವಿದೇಶಕ್ಕೆ ತೆರಳಬೇಕು ಎನ್ನುವುದಿರುತ್ತದೆ. ಅಲ್ಲೇ ಕೆಲಸ ಸಿಕ್ಕರೆ ಇನ್ನು ಒಳ್ಳೆಯದು. ಕೈ ತುಂಬಾ ಸಂಬಳ ಬರುತ್ತದೆ. ಆರಾಮದಾಯಕವಾಗಿ ಜೀವನ ನಡೆಸಬಹುದು. ಹೆಚ್ಚಿನವರು ಹೀಗೆ ಅಂದುಕೊಳ್ಳುತ್ತಾರೆ. ಭಾರತಕ್ಕೆ ಹೋಲಿಸಿದ್ರೆ ವಿದೇಶದಲ್ಲಿ ಜೀವನ ನಡೆಸೋದು ಸ್ವಲ್ಪ ಕಷ್ಟನೇ. ಲಂಡನ್‌ನಲ್ಲಿ ವಾಸಿಸುತ್ತಿರುವ ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ (Bengaluru software engineers) ದಂಪತಿಗಳಿಬ್ಬರೂ ಲಂಡನ್ (London) ಜೀವನ ಹೇಗಿದೆ ಎಂದು ಹೇಳಿದ್ದಾರೆ. ಇಲ್ಲಿ ಮನೆ ಬಾಡಿಗೆ, ತಿಂಗಳ ಸಂಬಳ, ಉದ್ಯೋಗ ಹುಡುಕಾಟ ಹಾಗೂ ಫಾರಿನ್‌ ಟ್ರಿಪ್ ಹೀಗೆ ನಾನಾ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಹೌದು, ಸಾಫ್ಟ್‌ವೇರ್ ಇಂಜಿನಿಯರ್‍‌ಗಳು ಅರ್ನವ್ ಗುಪ್ತಾ ಮತ್ತು ಸಾಯಾನಿ ಭಟ್ಟಾಚಾರ್ಯ 2024 ರ ಆಗಸ್ಟ್‌ನಲ್ಲಿ ಲಂಡನ್ ಹಾಗೂ ಯುಕೆಯತ್ತ ಪ್ರಯಾಣ ಬೆಳೆಸಿದ್ದು, ಸದ್ಯಕ್ಕೆ ಅಲ್ಲೇ ನೆಲೆಸಿದ್ದಾರೆ. ತಮ್ಮ ಪೋಸ್ಟ್ ನಲ್ಲಿ ಲಂಡನ್ ನಗರ ತುಂಬಾನೇ ದುಬಾರಿ, ನಾವೀಗ 600 ಚದರ ಅಡಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದೇವೆ. ಆದರೆ ಬೆಂಗಳೂರಿನ 1,600 ಚದರ ಅಡಿ ಮನೆಗೆ ಹೋಲಿಸಿದ್ರೆ ತುಂಬಾನೇ ಚಿಕ್ಕದು. ಬಾಡಿಗೆಯೂ ಹೆಚ್ಚಾಗಿದ್ದು ಖರ್ಚು ವೆಚ್ಚಗಳು ಒಟ್ಟು ಸೇರಿಸಿದರೆ ಆದಾಯದ 25% ರಷ್ಟು ಅದಕ್ಕೆಂದೇ ಮೀಸಲಿಡಬೇಕಾಗುತ್ತದೆ. ನಾವಿರುವ ಅಪಾರ್ಟ್ಮೆಂಟ್ ತುಂಬಾನೇ ಚೆನ್ನಾಗಿದೆ, ಆದರೆ ನಾವಿಬ್ಬರೂ ಹೆಚ್ಚಿನ ಸಮಯವನ್ನು ಹೊರಗಡೆ ಕಳೆಯುತ್ತೇವೆ ಎಂದಿದ್ದಾರೆ.

ಇಲ್ಲಿ ಕೆಲಸ ಹುಡುಕಲು ನಮಗೆ ಕಷ್ಟವಾಗಲಿಲ್ಲ. ಜಾಗತಿಕ ಕಂಪನಿಗಳ ಅನುಭವವು ಇಲ್ಲಿ ಉಪಯೋಗಕ್ಕೆ ಬಂದಿತು. ಸಂಬಳ ಭಾರತಕ್ಕಿಂತ ಹೆಚ್ಚು. ಆದರೆ ಲಂಡನ್‌ನಲ್ಲಿ ಖರ್ಚು ವೆಚ್ಚಗಳು ದುಬಾರಿಯಾಗಿದೆ. ಹೀಗಾಗಿ ಇಲ್ಲಿ ಬದುಕೋದು ಅಷ್ಟು ಸುಲಭವಲ್ಲ. ಇನ್ನು ಪ್ಯಾರಿಸ್‌ಗೆ ಹೋಗಲು ಎರಡು ಗಂಟೆಗಳ ರೈಲು ಪ್ರಯಾಣ ಮಾಡಿದ್ರೆ ಸಾಕು. ಆದರೆ ಯುರೋಪ್ ಟ್ರಿಪ್ ಇನ್ನು ಸುಲಭವಾಗಿದೆ. ಆದರೆ, ಇಲ್ಲಿ ಕಾರು ಕೊಳ್ಳೋದು ಇಲ್ಲಿ ಸುಲಭ. ಭಾರತಕ್ಕಿಂತ ಅರ್ಧ ಬೆಲೆಗೆ ಸಿಗುತ್ತದೆ, ಹೀಗಾಗಿ ಕಾರು ಪ್ಲ್ಯಾನ್ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ
ವಿದೇಶಿ ಸೊಸೆಗೆ ಅದ್ದೂರಿ ಸ್ವಾಗತ ನೀಡಿದ ಭಾರತದ ಅತ್ತೆ ಮಾವ
ವಿದೇಶಿ ಮಹಿಳೆಯನ್ನು ಮದುವೆಯಾದುದ್ದರ ಹಿಂದಿನ ಕಾರಣ ತಿಳಿಸಿದ ಭಾರತೀಯ
3 ತಿಂಗಳು ಭಾರತದಲ್ಲಿ ಸುತ್ತಾಟ, ಶಾಶ್ವತವಾಗಿ ಉಳಿದ ವಿದೇಶಿ ದಂಪತಿ
ಭಾರತಕ್ಕೆ ಹೋಲಿಸಿದ್ರೆ ಕೆನಡಾದಲ್ಲಿ ದಿನಸಿ ವಸ್ತುಗಳು ದುಬಾರಿ

ಇದನ್ನೂ ಓದಿ:Video: ಭಾರತಕ್ಕೆ ಹೋಲಿಸಿದ್ರೆ ಕೆನಡಾದಲ್ಲಿ ದಿನಸಿ ವಸ್ತುಗಳು ದುಬಾರಿ, ಬೆಲೆ ಸಹಿತ ವಿವರಿಸಿದ ಭಾರತೀಯ ಮಹಿಳೆ

ನಾವು ವಾರ್ಷಿಕವಾಗಿ ಶೇಕಡಾ 30-35% ತೆರಿಗೆ ಪಾವತಿಸುತ್ತೇವೆ. ಆರೋಗ್ಯ ಸೇವೆ, ಪಿಂಚಣಿ, ನಿರುದ್ಯೋಗ ಭತ್ಯೆ, ಅಂಗವೈಕಲ್ಯ ಭತ್ತೆ ಹೀಗೆ ಹಲವು ಸೌಲಭ್ಯಗಳಿವೆ. ವೈಯಕ್ತಿಕ ಉಳಿತಾಯ ಖಾತೆ ಮೂಲಕ £20,000 ವರೆಗೆ ಹೂಡಿಕೆ ಮಾಡುವುದು ಲಾಭದಾಯಕ ಹಾಗೂ ತೆರಿಗೆ ಮುಕ್ತವಾಗಿದೆ. ಹೀಗಾಗಿ ತಮ್ಮ ಆದಾಯದ ಶೇಕಡಾ 40 ರಷ್ಟು ಉಳಿತಾಯಕ್ಕೆ ಮೀಸಲು ಇಡುತ್ತೇವೆ. ಲಂಡನ್ ನಲ್ಲಿ ಮನೆ ಖರೀದಿಸುವ ಪ್ಲ್ಯಾನ್ ಇದೆ ಎಂದು ಹೇಳಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ನಾನಾ ರೀತಿಯ ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:47 pm, Wed, 27 August 25